ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಕೊರೋನಾ ಲಗ್ಗೆಯಿಟ್ಟ ಹಿನ್ನೆಲೆ ಇಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಾಲೂಕಾ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಬುಧವಾರದಂದು ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಅಧಿಕಾರಿಗಳ ಸಭೆ ನಡೆಯಿಸಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು ತಲಾ ಒಂದೊಂದು ಕೊರೋನಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ತಿಳಿಸಿದರು.
ಮುಂಬೈ ಹಾಗೂ ಹೊಸದಿಲ್ಲಿಯಿಂದ ಬಂದ ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಲ್ಲೋಳಿ ಮತ್ತು ಶಿಲ್ತಿಭಾಂವಿ ಗ್ರಾಮದ ಕೊರೋನಾ ಸೋಂಕಿತರು ವಾಸಿಸುವ ಮನೆಯ ಸುತ್ತಮುತ್ತಲಿನ 50 ಮೀಟರ ಪ್ರದೇಶವನ್ನು ಕಂಟೋನ್‍ಮೆಂಟ್ ಜೋನ ಎಂದು ಘೋಷಿಸಲಾಗಿದೆ. ಅವರ ಕುಟುಂಬ ಸದಸ್ಯರಿಗೆ ಸಹ ಹೋಮ್ ಕ್ವಾರಂಟನ್ ಮಾಡಲಾಗಿದ್ದು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ, ಪೋಲೀಸ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಕೊರೋನಾ ಸೋಂಕಿತರ ಸಂರ್ಪಕಕ್ಕೆ ಬಂದ 98 ಜನರನ್ನು ಈಗಾಗಲೇ ಹೋಮ ಕ್ವಾರಂಟೈನ್ ಮಾಡಲಾಗಿದ್ದು, ಮನೆ ಬಿಟ್ಟು ಹೊರಗಡೆ ಬಾರದಂತೆ ಸೂಚಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ನಗರದ ಉಪವಿಭಾಗದ ಕಚೇರಿಯನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಕುರಿತು ನನಗೆ ತಿಳಿದಿಲ್ಲ, ಮಾಹಿತಿ ಕಲೆಹಾಕಿ ವಿವರ ನೀಡುತ್ತೇನೆ ಎಂದರು.