ಗದಗ : ನಗರದ ನವೀಕರಣಗೊಂಡ ಹಳೆ ಬಸ್ ನಿಲ್ದಾಣಕ್ಕೆ ಪಂ.ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿ ಹೋರಾಟ ಮುಂದುವರೆಸಿದ್ದರಿAದ ಶಾಸಕ ಎಚ್.ಕೆ.ಪಾಟೀಲ ಅವರು ಭರವಸೆ ನೀಡಿದ್ದರಿಂದ ಸಾರಿಗೆ ಅಧಿಕಾರಿಗಳು ಭಾನುವಾರ ಬಸ್ ನಿಲ್ದಾಣಕ್ಕೆ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.
ನಗರದಲ್ಲಿ ನವೀಕರಣವಾಗುತ್ತಿರುವ ಹಳೆ ಬಸ್ ನಿಲ್ದಾಣಕ್ಕೆ ಡಾ. ಪಂ. ಪುಟ್ಟರಾಜ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಸ್ನೇಹ ಬಳಗ, ಕ್ರಾಂತಿ ಸೇನಾ ಹಾಗೂ ವಿವಿಧ ಸಂಘ-ಸAಸ್ಥೆಗಳ ನೇತೃತ್ವದಲ್ಲಿ ಸುಮಾರು ೩ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.
ಕಳೆದ ಮಾ.೩ ಪಂ.ಪುಟ್ಟರಾಜ ಗವಾಯಿಳವರ ಜನ್ಮದಿನದಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷö್ಮಣ ಸವದಿ ಅವರು ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅವರಿಗೆ ನಗರದಲ್ಲಿ ನವೀಕರಣವಾಗುತ್ತಿರುವ ಬಸ್ ನಿಲ್ದಾಣಕ್ಕೆ ಡಾ.
ಪಂ. ಪುಟ್ಟರಾಜ ಗವಾಯಿಗಳ ಹೆಸರನ್ನು ಇಡುವುದು ನ್ಯಾಯೋಚಿತವಾಗಿದ್ದು ನಿಯಮಾನುಸಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಈ ಎಲ್ಲ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಸ್ಥಳೀಯ ಅಧಿಕಾರಿಗಳು ನಗರದ ಹಳೇ ಬಸ್ ನಿಲ್ದಾಣ ಪ್ರಾರಂಭಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಹೋರಾಟಗಾರರು ಯಾವುದೇ ಕಾರಣಕ್ಕೂ ಗದಗಿನ ನವೀಕರಣವಾಗಿರುವ ಹಳೆಯ ಬಸ್ ನಿಲ್ದಾಣಕ್ಕೆ ಡಾ. ಪಂ. ಪುಟ್ಟರಾಜ ಬಸ್ ನಿಲ್ದಾಣ ಎಂದು ನಾಮಕರಣ ಮಾಡದೇ ಲೋಕಾರ್ಪಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ವಿವಿಧ ಸಂಘ ಸಂಸ್ಥೆಗಳು ಮತ್ತೆ ಹೋರಾಟ ಪ್ರಾರಂಭಿಸಿದಾಗ ಸ್ಥಳೀಯ ಅಧಿಕಾರಿಗಳು ಹಾಗೂ ಶಾಸಕರು ಬಸ್ ನಿಲ್ದಾಣದ ಪೂಜಾ ಕಾರ್ಯಕ್ರಮ ಸ್ಥಗಿತಗೊಳಿಸಿದರು.
ಕ್ರಾಂತಿ ಸೇನಾ ಅಧ್ಯಕ್ಷ ಬಾಬು ಬಾಕಳೆ, ಬಸಯ್ಯ ನಂದಿಕೋಲಮಠ, ಭಗತ್ ಸಿಂಗ್ ಅಭಿಮಾನಿಗಳ ಬಳಗದ ಕಾರ್ಯದರ್ಶಿ ಸೋಮು ಮುಳಗುಂದ, ಸಮತಾ ಸೇನಾ ಉಪಾಧ್ಯಕ್ಷ ಪ್ರೇಮ ಹುಬ್ಬಳ್ಳಿ, ಶಿವಲಿಂಗ ಶಾಸ್ತಿçಗಳು, ರಾಮ ಕಬಾಡಿ, ಬಸವರಾಜ ಬಾರಕೇರ, ಭೀಮಾ ಕಾಟಿಗರ, ಸಿದ್ದು ಸಾಲಿಮಠ, ಪ್ರವೀಣ ಹಬೀಬ, ರವಿ ಮಡಿವಾಳರ, ಪವನ ಶಾಂತಗೇರಿ ಉಪಸ್ಥಿತರಿದ್ದರು.
ನಗರದ ಹಳೆ ಬಸ್ ನಿಲ್ದಾಣಕ್ಕೆ ಡಾ. ಪಂ. ಪುಟ್ಟರಾಜ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿಯೇ ಪ್ರಾರಂಭಿಸಬೇಕು, ಇಲ್ಲವಾದಲ್ಲಿ ಪಂ. ಪುಟ್ಟರಾಜ ಗವಾಯಿಯವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಇದನ್ನು ಗದುಗಿನ ಜನತೆ ಸಹಿಸುವುದಿಲ್ಲ. ಅಲ್ಲದೇ, ಹಲವಾರು ಸಂಘ-ಸAಸ್ಥೆಗಳಿಗೆ ಹಾಗೂ ಭಕ್ತರಿಗೆ ಉಗ್ರ ಹೋರಾಟಕ್ಕೆ ಪ್ರೇರೆಪಣೆ ನೀಡಿದಂತಾಗುತ್ತದೆ.
ಬಿ. ಎನ್. ಶಿದ್ಲಿಂಗ್, ಸ್ನೇಹ ಬಳಗದ ಮಾರ್ಗದರ್ಶಕ