ಶಿರಹಟ್ಟಿ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಗಾಂವಠಾಣಾ (ಸರ್ಕಾರಿ) ಜಾಗ ಅತಿಕ್ರಮಣ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿದ ತಗಡಿನ ಶೆಡ್ಗೆ (ಪ್ರಾರ್ಥನಾ ಮಸೀದಿ) ಗ್ರಾಮದ ಸಾರ್ವಜನಿಕರು, ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆಗೆ ಪೊಲೀಸರ ಸುಪರ್ದಿಯಲ್ಲಿ ತೆರವುಗೊಳಿಸಲಾಯಿತು.
ರಂಜಾನ್ ತಿಂಗಳ ನಿಮಿತ್ತ ನಮಾಜ್ ಮಾಡಲು ಗ್ರಾಮದ ಮುಸ್ಲಿಂ ಸಮುದಾಯದವರು (ಜಮಾತ್) ಗ್ರಾಪಂ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಗ್ರಾಪಂ ಅನುಮತಿ ಪಡೆಯದೆ ಏಕಾಏಕಿ ಅನಧಿಕೃತವಾಗಿ ರಾತೋರಾತ್ರಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೊರಗಡೆ ತಗಡಿನ ಶೆಡ್ ಹಾಕಿ ಅದರ ಒಳಗೆ ಶೆಡ್ ಸುತ್ತಲೂ ಅರ್ಧಗೋಡೆ ಕಟ್ಟಿ ಮೇಲೆ ಸುತ್ತಲೂ ಪರದೆ ಹಾಕಿ ಒಂದು ಗೋಡೆಗೆ ನಮಾಜ್ಗೆ ಅಗತ್ಯವಾದ ಕಮಾನ್ ಮತ್ತು ಕಟ್ಟೆ ನಿರ್ಮಿಸುವ ಜತೆಗೆ ಫ್ಯಾನ್, ಸಣ್ಣ ಅಲಮೇರಾ, ಇತರೆ ಪರಿಕರಗಳನ್ನು ಹೊಂದುವ ಮೂಲಕ ಅನಧಿಕೃತ ಕರೆಂಟ್ ವ್ಯವಸ್ಥೆ ಮಾಡಿಕೊಂಡಿದ್ದರು.
ಗುರುವಾರ ಬೆಳಗ್ಗೆ ಮೈಕ್ನಿಂದ ಆಜಾನ್ ಶಬ್ದ ಕೇಳಿ ಬರುತ್ತಿದ್ದಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಾಲೂಕಾಡಳಿತ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಶೆಡ್ ತೆರವುಗೊಳಿಸಿದ್ದಾರೆ.
Laxmi News 24×7