Breaking News

ಅರಣ್ಯಾಧಿಕಾರಿಗಳ ದಾಳಿ – ಫ್ರಿಡ್ಜ್‌ಲ್ಲಿ 21 ಕೆಜಿ ಜಿಂಕೆ ಮಾಂಸ ಪತ್ತೆ

Spread the love

ಕಾರವಾರ: ಕಾಡು ಪ್ರಾಣಿಗಳ ಹತ್ಯೆ ಶಂಕೆಯ ಮೇರೆಗೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಭಟ್ಕಳ (Bhatkal) ತಾಲೂಕಿನ ಹುರುಳಿಸಾಲದ ಮನೆ ಒಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 21 ಕೆಜಿ ಜಿಂಕೆ ಮಾಂಸ, ಜಿಂಕೆ (Deer) ಕೊಬ್ಬು ಹಾಗೂ ಎರಡು ಏರ್‌ಗನ್‌ಗಳು ಪತ್ತೆಯಾಗಿವೆ.

ಜಾಫರ್ ಬ್ರಹ್ಮವರ್ ಎಂಬಾತ ಕಾಡಿನಲ್ಲಿ ಪ್ರಾಣಿಯನ್ನು ಹತ್ಯೆ ಮಾಡಿ, ಮಾಂಸವನ್ನು ಮನೆಯ ಪಕ್ಕದಲ್ಲೇ ಬೇರ್ಪಡಿಸಿ ಉಳಿದ ಅವಶೇಷಗಳನ್ನು ಪಾಳುಬಿದ್ದ ಬಾವಿಗೆ ಎಸೆದಿದ್ದ. ದಾಳಿ ವೇಳೆ ಅಧಿಕಾರಿಗಳು ಬಾವಿಯಲ್ಲಿದ್ದ ಅವಶೇಷಗಳನ್ನು ಹೊರತೆಗೆದು ಪರಿಶೀಲಿಸಿ ಮನೆ ಒಳಗೆ ಶೋಧಕ್ಕೆ ಮುಂದಾಗಿದ್ದಾರೆ. ಆರಂಭದಲ್ಲಿ ಮನೆಯವರು ಬಾಗಿಲು ತೆರೆದು ಸಹಕರಿಸದೆ ವಿರೋಧ ವ್ಯಕ್ತಪಡಿಸಿದ್ದರು.

ಸುಮಾರು ಆರು ಗಂಟೆಗಳ ಕಾಲ ಅಧಿಕಾರಿಗಳು ಕಾದ ಬಳಿಕ ಬಾಗಿಲು ತೆರೆಯಲಾಯಿತು. ನಂತರ ನಡೆದ ಶೋಧದಲ್ಲಿ ಫ್ರಿಡ್ಜ್‌ನಲ್ಲಿ 21 ಕೆಜಿ ಮಾಂಸ ಪತ್ತೆಯಾಗಿದೆ.


Spread the love

About Laxminews 24x7

Check Also

ಜೂನ್ ಒಳಗೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ

Spread the loveಕಾರವಾರ: ಜೂನ್ ಒಳಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ