Breaking News

ಬ್ಯಾಂಕ್ ಮ್ಯಾನೇಜರ್ ಮಹಾ ಯಡವಟ್ಟು ಕೊವಿಡ್ ಪರಿಹಾರದ ಚೆಕ್ ಜಮೆಯಾಗದೆ ಫಲಾನುಭವಿಗಳ ಅಲೆದಾಟ..!

Spread the love

ಬ್ಯಾಂಕ್ ಮ್ಯಾನೇಜರನಿಂದ ಮಹಾ ಎಡವಟ್ಟಿನಿಂದ ಕೋವಿಡ್ ಪರಿಹಾರ ಚೆಕ್ ಡ್ರಾ ಆಗದೆ ಫಲಾನುಭವಿಗಳು ಪರದಾಟನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆದಿದೆ.ಕೊವಿಡ್ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಸರಕಾರ ನೀಡಿದ ಪರಿಹಾರದ ಚೆಕ್ ಚೆಕ್ ಡ್ರಾ ಆಗದೇ ಫಲಾನುಭವಿಗಳು ಪರದಾಟ ನಡೆಸಿದ್ದಾರೆ. ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು. ಕೊವಿಡ್‍ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರದ ಚೆಕ್ ಡ್ರಾ ಆಗದ ಕಾರಣ ಫಲಾನುಭವಿಗಳು ಚೆಕ್ ಹಿಡಿದು ಬ್ಯಾಂಕ್‍ಗಳಿಗೆ ಅಲೆದಾಡುವಂತಾಗಿದೆ. ಯಾದಗಿರಿ ಜಿಲ್ಲೆ ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಎಡವಟ್ಟಿನಿಂದ ಈ ಘಟನೆ ಸಂಭವಿಸಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಎಡವಟ್ಟಿನಿಂದ 1 ತಿಂಗಳಿಂದ ಕೊವಿಡ್ ಪರಿಹಾರ ಚೆಕ್ ಫಲಾನುಭವಿಗಳಿಗೆ ಜಮಾ ಆಗಿರಲಿಲ್ಲ. ಸದ್ಯ ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮ್ಯಾನೇಜರ್ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ಕಂದಾಯ ಇಲಾಖೆಯ ಶಿರಸ್ತೆದಾರ್ ನಿಂದ ಪ್ರಕರಣವನ್ನು ದಾಖಲಿಸಲಾಗಿದೆ.ಮತ್ತೊಂದು ಕುಟುಂಬ ಇದೇ ಸಮಸ್ಯೆಯಿಂದಾಗಿ ಬ್ಯಾಂಕಿಗೆ ಅ;ಲೆದಾಟ ನಡೆಸಿ ಹೈರಾಣಾಗಿದೆ. ಹೆಸರಿಗೆ ಮಾತ್ರ ಕೋವಿಡ್ ಆದರೆ ಕೈಗೆ ಹಣ ಬರ್ತಾಯಿಲ್ಲ. ಚೆಕ್ ಪಡೆದ ದೇವಿಕೇರ ಗ್ರಾಮದ ಕುಟುಂಬ ಬ್ಯಾಂಕ್‍ಗೆ ಅಲೆದಾಟ ನಡೆಸಿ ಹೈರಾಣಾಗಿದೆ. ಸುರಪುರ ತಾಲೂಕಿನ ದೇವಿಕೇರ ಗ್ರಾಮದ ನಾಗಪ್ಪ ಕೋವಿಡ್‍ನಿಂದ ಮೃತಪಟ್ಟಿದ್ದರು. ಇವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಲಾಗಿತ್ತು. ಆದ್ರೆ ಎμÉ್ಟೂೀ ಬ್ಯಾಂಕ್‍ಗಳಿಗೆ ಅಲೆಯುತ್ತಿದ್ರು ಹಣ ಮಾತ್ರ ಸಿಗುಗುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.ಈ ಕುರಿತಂತೆ ಮಾತನಾಡಿದ ಸುರಪುರದ ಬಿಜೆಪಿ ಶಾಸಕ ರಾಜುಗೌಡ, ಕಳೆದ ತಿಂಗಳು ನಾನೇ ಫಲನಾಭವಿಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಿದ್ದೇನೆ. ಆದ್ರೆ ಜಾಲಿಬೆಂಚಿ ಹಾಗೂ ದೇವಿಕೇರದ ಕುಟುಂಬಗಳಿಗೆ ಚೆಕ್ ನೀಡಿದ್ರು ಹಣ ಜಮಾ ಆಗಿಲ್ಲ ಎನ್ನುವ ವಿಚಾರ ಗೊತ್ತಾಗಿದೆ. ಈ ಕುರಿತಂತೆ ಬ್ಯಾಂಕ್ ಮ್ಯಾನೇಜರ್ ಗೆ ಮಾತಾಡಿದ್ದೇನೆ. ಇದು ಬ್ಯಾಂಕ್ ನವರ ತಪ್ಪಿನಿಂದ ಆಗಿದ್ದು ಸರಿ ಪಡಿಸಲು ಹೇಳಿದ್ದೇನೆ ಎಂದರು.

ಇನ್ನೂ ಈ ಚೆಕ್ ಡ್ರಾ ಆಗದ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮಕ್ಕೆ ಬಂದಿದ್ದು, ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗು ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

Spread the loveಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ