2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ ಆಕಾಶದಲ್ಲಿ ಒಂದು ಕೌತುಕ ನಡೆಯಲಿದೆ. ಮಾರ್ಚ್ 3 ಇಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, ಇದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಚಂದ್ರಗ್ರಹಣವು ಎಲ್ಲಾ ರಾಶಿಗಳ ಮೇಲೆ ಮಿಶ್ರ ಫಲ ನೀಡಲಿದೆ. ಮುಖ್ಯವಾಗಿ ಸಿಂಹ ಮತ್ತು ಕುಂಭ ರಾಶಿಯವರು ಎಚ್ಚರಿಕೆ ವಹಿಸಬೇಕಾಗಿದೆ.ಗ್ರಹಣವು ಈ ರಾಶಿಯಲ್ಲೇ ನಡೆಯುವುದರಿಂದ, ಈ ರಾಶಿಯವರು ನೇರ ವೀಕ್ಷಣೆಯಿಂದ ದೂರವಿರುವುದು ಒಳಿತು.
ಗ್ರಹಣದ ಸಮಯ ಎಷ್ಟು?
ಮಾರ್ಚ್ 3 ಇಂದು ಮಧ್ಯಾಹ್ನ 3:20ಕ್ಕೆ ಆರಂಭವಾಗುವ ಗ್ರಹಣ, ಸಂಜೆ 6:47ಕ್ಕೆ ಮುಕ್ತಾಯಗೊಳ್ಳಲಿದೆ. ಇದು ಭಾರತದಲ್ಲಿ ಗೋಚರಿಸುವುದರಿಂದ ಧಾರ್ಮಿಕ ವಿಧಿವಿಧಾನಗಳ ಮೇಲೆ ನೇರ ಪ್ರಭಾವ ಬೀರಲಿದೆ.
ಯಾರಿಗೆ ಶುಭ ಯೋಗ?
ಈ ಗ್ರಹಣವು ಕೆಲವು ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿದೆ:
ವೃಷಭ: ಧನಲಾಭದ ಜೊತೆಗೆ ಹೊಸ ಮನೆ ಖರೀದಿಸುವ ಯೋಗವಿದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ವಾರ್ತೆ ಸಿಗಲಿದೆ.
ಕನ್ಯಾ: ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲವಿದು. ವೃತ್ತಿಯಲ್ಲಿ ಬಡ್ತಿ ಖಚಿತ.
ತುಲಾ: ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಧನು & ಮಕರ: ಆಸ್ತಿ ಖರೀದಿ ಮತ್ತು ವಿದೇಶ ಪ್ರಯಾಣದಂತಹ ಕನಸುಗಳು ನನಸಾಗಲಿವೆ.
ಎಚ್ಚರಿಕೆ ವಹಿಸಬೇಕಾದ ರಾಶಿಗಳು
ಕೆಲವು ರಾಶಿಗಳು ಈ ಸಮಯದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳಿತು:
ಮೇಷ: ಆತುರದ ನಿರ್ಧಾರ ಬೇಡ, ಹೂಡಿಕೆ ಮಾಡುವಾಗ ನೂರು ಬಾರಿ ಯೋಚಿಸಿ.
ಕರ್ಕಾಟಕ: ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ, ಹುಷಾರು!
ಸಿಂಹ: ಗ್ರಹಣವು ನಿಮ್ಮ ರಾಶಿಯಲ್ಲೇ ನಡೆಯುವುದರಿಂದ ಆರೋಗ್ಯ ಮತ್ತು ಶತ್ರುಗಳ ಬಗ್ಗೆ ಎಚ್ಚರವಿರಲಿ.
ಮೀನ: ಅನಿರೀಕ್ಷಿತ ಖರ್ಚುಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು.
ಕುಂಭ ರಾಶಿಯಲ್ಲಿ ಗ್ರಹಣ ಯೋಗದ ಎಫೆಕ್ಟ್
ಕುಂಭ ರಾಶಿಯ ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಈ ವಿದ್ಯಮಾನ ನಡೆಯುವುದರಿಂದ ಆರ್ಥಿಕ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬರಲಿದೆ. ಹೂಡಿಕೆದಾರರು ಈ ಸಮಯದಲ್ಲಿ ಜೂಜಾಟಕ್ಕೆ ಇಳಿಯಬಾರದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ
ಸೂತಕ ಮತ್ತು ಗ್ರಹಣ ಕಾಲದಲ್ಲಿ ಮಾಡಬಾರದ ಕೆಲಸಗಳು:
ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಈ ಕೆಳಗಿನ ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ:
ಆಹಾರ ಸೇವನೆ ಮತ್ತು ಅಡುಗೆ: ತಾಜಾವಾಗಿ ತಯಾರಿಸಿದ ಆಹಾರವನ್ನು ಸೇವಿಸುವುದು ಅಥವಾ ಈ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಬೇಕು. (ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ವಿನಾಯಿತಿ ಇರುತ್ತದೆ).
ದೇವಸ್ಥಾನಗಳ ದರ್ಶನ: ಗ್ರಹಣದ ಅವಧಿಯಲ್ಲಿ ದೇವಸ್ಥಾನಗಳ ಬಾಗಿಲು ಮುಚ್ಚಲಾಗುತ್ತದೆ. ಮನೆಯಲ್ಲಿಯೂ ದೇವರ ವಿಗ್ರಹಗಳನ್ನು ಸ್ಪರ್ಶಿಸುವುದು ಅಥವಾ ಪೂಜೆ-ಪುನಸ್ಕಾರಗಳನ್ನು ಮಾಡುವುದು ನಿಷಿದ್ಧ.
ಹೊಸ ಕೆಲಸಗಳ ಆರಂಭ: ಯಾವುದೇ ಹೊಸ ಉದ್ಯಮ, ಗೃಹಪ್ರವೇಶ, ವಿವಾಹ ಅಥವಾ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದು ಅಥವಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮುಂದೂಡಬೇಕು.
ಚೂಪಾದ ವಸ್ತುಗಳ ಬಳಕೆ: ವಿಶೇಷವಾಗಿ ಗರ್ಭಿಣಿಯರು ಚಾಕು, ಕತ್ತರಿ, ಸೂಜಿ ಅಥವಾ ಯಾವುದೇ ಚೂಪಾದ ವಸ್ತುಗಳನ್ನು ಬಳಸಬಾರದು.
ನಿದ್ರೆ ಮತ್ತು ಸಂಚಾರ: ಈ ಸಮಯದಲ್ಲಿ ನಿದ್ರಿಸುವುದು ಅಥವಾ ಅನಗತ್ಯವಾಗಿ ಮನೆಯಿಂದ ಹೊರಗೆ ಸಂಚರಿಸುವುದನ್ನು ತಪ್ಪಿಸುವುದು ಉತ್ತಮ ಎಂದು ಹೇಳಲಾಗುತ್ತದೆ.
ದೋಷ ನಿವಾರಣೆಗೆ ಸಿಂಪಲ್ ಟಿಪ್ಸ್:
ಗ್ರಹಣದ ನಕಾರಾತ್ಮಕ ಕಿರಣಗಳಿಂದ ಬಚಾವಾಗಲು ಈ ಕ್ರಮಗಳನ್ನು ಅನುಸರಿಸಿ:
ಮಂತ್ರ ಜಪ: ಗ್ರಹಣ ಕಾಲದಲ್ಲಿ ಗಾಯತ್ರಿ ಮಂತ್ರ ಅಥವಾ ಶಿವ ಪಂಚಾಕ್ಷರಿ ಮಂತ್ರ ಪಠಿಸಿ.
ದಾನವೇ ಮದ್ದು: ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಅಕ್ಕಿ, ಹಾಲು, ಸಕ್ಕರೆ ಅಥವಾ ಬಿಳಿ ಬಟ್ಟೆಯನ್ನು ದಾನ ಮಾಡಿ. ಇದರಿಂದ ಚಂದ್ರ ದೋಷ ನಿವಾರಣೆಯಾಗಿ ಮನಃಶಾಂತಿ ಸಿಗುತ್ತದೆ.
Laxmi News 24×7