ಕಾಂಗ್ರೇಸ್ ಪಾದಯಾತ್ರೆಯಿಂದ ಕೊರೊನಾ ಹೆಚ್ಚಾಗಿದೆ ಎಂದು ಶಿವಮೊಗ್ಗ ದಲ್ಲಿ ಕೆ.ಎಸ್ ಈಶ್ವರಪ್ಪಾ ಗಂಭೀರ ಆರೋಪ ಮಾಡಿದ್ದಾರೆ.ಹೌದು ಶಿವಮೊಗ್ಗದಲ್ಲಿ ಇಂದು ಕೆ.ಎಸ್ ಈಶ್ವರಪ್ಪಾ ಅವರು ಮಾತನಾಡಿ ಕಾಂಗ್ರೇಸ್ ಪಾದಯಾತ್ರೆಯಿಂದ ಕೊರೋನಾ ಹೆಚ್ಚಾಗಿದ್ದು, ಪಾದಯಾತ್ರೆ ಪ್ರಾರಂಭವಾಗುವ ಮೊದಲೇ ಕೆಎಸ್ ಈಶ್ವರಪ್ಪಾ ಅವರು ವಿಷಯದ ಕುರಿತಂತೆ ಪ್ರಸ್ತಾಪ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಕರಗೆ ಸೇರಿದಂತೆ ಹಲವಾರೂ ಕಾಂಗ್ರೇಸ್ ಮುಖಂಡರಿಗೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ ಕೊರೊನಾ ಪಾಸಿಟಿವ್ ಬಂದಿದೆ ಎಂದರು.ಇದು ಖಂಡಿತ ರಾಜಕೀವಲ್ಲ, ಕೇವಲ ಆರೋಗ್ಯದ ದೃಷ್ಟಿಯಿಂದ ಕಾಂಗ್ರೇಸ್ ಪಾದಯಾತ್ರೆ ಬೇಡ ಎಂದು ಕೆಎಸ್ ಈಶ್ವರಪ್ಪಾ ಮೊದಲೇ ರಾಜಕೀಯ ಮುಖಂಡರಿಗೆ ಈ ವಿಷಯದ ಕುರಿತಂತೆ ಪ್ರಸ್ತಾಪ ನೀಡಿದ್ದರು ರಾಜಕೀಯ ದೃಷ್ಟಿಯಿಂದ ಪಾದಯಾತ್ರೆ ಮಾಡಿ ಈಗ ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.
