ದಾವಣಗೆರೆ, : ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ.
ಹೌದು.. ಹೊನ್ನಾಳಿ ಡಿಪೋದ 6 ಬಸ್‌ಗಳನ್ನ ಉದ್ಘಾಟನೆ ಮಾಡಿದರು. ಬಳಿಕ ಸಿಕ್ಕಿದ್ದೇ ಚಾನ್ಸ್ ಅಂತ ಬಸ್ ಚಲಾಯಿಸಿಕೊಂಡು ನಗರ ಪ್ರದಕ್ಷಿಣೆ ಹಾಕಿದರು. ಸರಾಗವಾಗಿ ಪಟ್ಟಣದಲ್ಲಿ ಐದಾರು ಕಿ.ಮೀ. ಬಸ್ ಓಡಿಸಿದ ರೆಣುಕಾಚಾರ್ಯ ಅವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು.
ಲೈಸನ್ಸ್ ಇಲ್ಲದೇ ಸರ್ಕಾರಿ ಬಸ್ ಓಡಿಸಿದ ಶಾಸಕ: ನಿಯಮ ಉಲ್ಲಂಘಿಸಿದ್ರೂ ಹಾರಿಕೆಯ ಉತ್ತರ!
ಜನವರಿಯಲ್ಲಿ ಹೊನ್ನಾಳಿಯಿಂದ ಬೆನಕನಹಳ್ಳಿ ಮಾರ್ಗವಾಗಿ ಸಾಸ್ವೆಹಳ್ಳಿ ಗ್ರಾಮದವರೆಗೆ ಕೆಎಸ್‌ಆರ್‌ಟಿಸಿ ಬಸ್ ಚಾಲನೆ ಮಾಡುವ ಮೂಲಕ ಗಮನ ಸೆಳೆದಿದ್ದರು.
ಬಸ್ ಚಾಲಕರ ಸಮವಸ್ತ್ರ ಧರಿಸಿ ತಾವೇ ಖುದ್ದಾಗಿ ಚಾಲನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದರು.
ಒದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿತ್ತು. ಅಲ್ಲದೇ ನಿಯಮ ಉಲ್ಲಂಘಿಸಿ ಬಸ್ ಚಲಾಯಿಸಿದ ಶಾಸಕನ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲಾಗಿತ್ತು.
ಇಷ್ಟೆಲ್ಲಾ ಆಗಿದ್ದರೂ ರೇಣುಕಾಚಾರ್ಯ ಅವರು ಮತ್ತೆ ಲೈಸನ್ಸ್ ಇಲ್ಲದೇ ಬಸ್ ಚಲಾಯಿಸಿದ್ದು ತಪ್ಪು.