Breaking News

ಅಟ್ರಾಸಿಟಿ ಕಾನೂನಿನ ದುರುಪಯೋಗ ಬೇಡ, ತೊಂದರೆ ಕೊಡಲು ಬಳಸಬೇಡಿ : ಕೆಎನ್‌ ರಾಜಣ್ಣ

Spread the love

ತುಮಕೂರು: ಇತ್ತಿಚಿನ ದಿನದಲ್ಲಿ ದಲಿತರಿಗಾಗಿ ಇರುವ ಅಟ್ರಾಸಿಟಿ  ಸೇರಿದಂತೆ ಕೆಲವು ಕಾನೂನುಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಮಾಜಿ ಸಚಿವ ಕೆ ಎನ್ ರಾಜಣ್ಣ  ಬೇಸರ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಯುವ ಸಮೂಹವೇ ಈ ಕಾನೂನನ್ನು ಹೆಚ್ಚು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

ದಲಿತರು ಬೇರೆ ಸಮುದಾಯದ ಪ್ರೀತಿ ವಿಶ್ವಾಸವನ್ನು ಗಳಿಸಬೇಕೇ‌ ಹೊರತು ನಮಗಾಗಿ ಇರುವ ಕಾನೂನನ್ನು ಬೇರೆಯವರಿಗೆ ತೊಂದರೆ ಕೊಡಲು ಬಳಸಬಾರದು. ನಮ್ಮ ಹಕ್ಕನ್ನು ನಾವು ಪ್ರತಿಪಾದನೆ ಮಾಡೋಣ. ಅದರೆ ಆ ದಿಕ್ಕಿನಲ್ಲಿ ನಮಗಾಗಿ ಇರುವಂತಹ ಕಾಯ್ದೆಯನ್ನು ತಿರುಚಿ, ಬೇರೆಯವರ ದ್ವೇಷವನ್ನು ಕಟ್ಟಿಕೊಳ್ಳುವ ರೀತಿಯ ಕೆಲಸ ಆಗಬಾರದು ಎಂದು ಕಿವಿ ಮಾತು ಹೇಳಿದರು.

ಇತ್ತಿಚಿಗೆ ಬಹಳಷ್ಟು ಜನ ಯುವಕರು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ. ಹೀಗಾದರೆ ಸಮಾಜದಲ್ಲಿ ಸಾಮರಸ್ಯ ಮೂಡಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜಣ್ಣ ಎಸ್‌ಟಿ ಸಮುದಾಯಕ್ಕೆ ಸೇರಿದವರಾದರೂ ಕಾನೂನು ದುರುಪಯೋಗದ ಬಗ್ಗೆ ಆಕ್ಷೇಪ ಹೊರಹಾಕಿದರು.

Spread the love

About Laxminews 24x7

Check Also

ಮಗ ನಮ್ಮ ಜೊತೆಗಿದ್ದಿದ್ದರೆ ಸಾಕಾಗಿತ್ತು. ದುಡ್ಡು ಕೊಟ್ಟರೆ ಮಗ ಮತ್ತೆ ವಾಪಸ್​ ಬರೊಲ್ಲ ಸಾರ್.. ಮುನ್ನೆಚ್ಚರಿಕೆ ವಹಿಸಬೇಕು.. ಇದು ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ತಂದೆಯ ನುಡಿ..

Spread the love ತುಮಕೂರು: ಇತ್ತೀಚಿಗೆ (ಜೂನ್​ 4) ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ ತುಮಕೂರು ಮೂಲದ ವಿದ್ಯಾರ್ಥಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ