ನವದೆಹಲಿ: ಆಕ್ಸ್ಫರ್ಡ್ ವಿವಿ ಹಾಗೂ ಬ್ರಿಟನ್ನ ಆಸ್ಟ್ರಾಜೆನೆಕಾ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸದ್ಯಕ್ಕೆ ಸ್ಥಗಿತಗೊಂಡಿದೆ. ಸಂಶೋಧನೆಯಲ್ಲಿ ಮೂಂಚೂಣಿಯಲ್ಲಿದ್ದ ಕಂಪನಿ ಮೂರನೇ ಹಂತದ ಪರೀಕ್ಷೆಯಲ್ಲಿ ತೊಡಗಿದೆ. ಇದು ಯಶಸ್ವಿಯಾಗಿದ್ದರೆ, ಅಕ್ಟೋಬರ್ ಅಂತ್ಯಕ್ಕೆಲ್ಲ ಲಸಿಕೆ ದೊರೆಯುವ ಬಗ್ಗೆ ಭಾರಿ ನಿರೀಕ್ಷೆ ಹೊಂದಲಾಗಿತ್ತು.
ಆಕ್ಸ್ಫರ್ಡ್ ಲಸಿಕೆ ಪಡೆದ ವ್ಯಕ್ತಿಗೆ ಗಂಭೀರ ಅಡ್ಡ ಪರಿಣಾಮ ಉಂಟಾದ ಬೆನ್ನಲ್ಲೇ, ಔಷಧ ತಯಾರಿಕೆಯಲ್ಲಿ ಯಾವುದೇ ತರಾತುರಿಯಿಲ್ಲ. ಎಲ್ಲ ಮಾನದಂಡಗಳನ್ನು ಪೂರೈಸಿದ ಬಳಿಕವಷ್ಟೇ ಲಸಿಕೆಗೆ ಮಾನ್ಯತೆ ಪಡೆಯಲಾಗುವುದು ಎಂದು ಔಷಧ ತಯಾರಿಸುತ್ತಿರುವ 9 ಕಂಪನಿಗಳು ಜಂಟಿ ಹೇಳಿಕೆ ಹೊರಡಿಸಿವೆ. ಇದರ ನಡುವೆ, ಅಕ್ಟೋಬರ್ ಅಂತ್ಯಕ್ಕೆ ಲಸಿಕೆ ಬಳಕೆಗೆ ಸಿಗಲೂಬಹುದು ಎಂಬ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎನ್ನುತ್ತಾರೆ ತಜ್ಞರು.
ಲಸಿಕೆ ಪರಿಣಾಮಕಾರಿ ಎನಿಸಿದರೆ, ಅದನ್ನು ಸಹಜವಾಗಿಯೇ ಕಂಪನಿಯವರು ಆದಷ್ಟು ಬೇಗನೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಎನ್ನುವುದು ಅವರ ವಾದ.
; ಕೋವಿಡ್ ಲಸಿಕೆ ಕಂಪನಿಗೆ ನೋಟಿಸ್ ನೀಡಿದ ಔಷಧಮಹಾನಿಯಂತ್ರಕರು; ನಿರೀಕ್ಷೆ ಬೆನ್ನಲ್ಲೇ ಆತಂಕ
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಲಸಿಕೆ ಬಳಕೆಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಅಂಥ ಸಾಧ್ಯತೆಗಳು ಕ್ಷೀಣ ಎನ್ನಲಾಗುತ್ತಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಲಸಿಕೆ ಸುರಕ್ಷಿತ ಎನ್ನಲು ಅಗತ್ಯ ಸಾಕ್ಷ್ಯಾಧಾರಗಳು ದೊರೆಯುವುದು ವಿರಳ ಎಂದು ತಜ್ಞರು ಹೇಳುತ್ತಾರೆ. ನವೆಂಬರ್ ಮೂರರೊಳಗೆ ಲಸಿಕೆ ದೊರೆಯಲಿದೆ. ಆದರೆ, ಸರ್ಕಾರದಲ್ಲಿರುವ ಕೆಲವರು ಇದನ್ನು ವಿಳಂಬಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಅಧ್ಯಕ್ಷ ಸ್ಥಾನಕ್ಕೆ ಮರುಆಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಇನ್ನು, ಅಮೆರಿಕದ ಸಾಂಕ್ರಾಮಿಕ ರೋಗ ತಜ್ಞ ಅಂಥೋಣಿ ಫೌಸಿ ಹೇಳುವ ಪ್ರಕಾರ, ಆಕ್ಸ್ಫರ್ಡ್ ವಿವಿ ಲಸಿಕೆಯ ಪ್ರಗತಿ ನಿಜಕ್ಕೂ ಅದ್ಭುತವಾಗಿವೆ. ಆರಂಭಿಕ ಹಂತದ ಫಲಿತಾಂಶಗಳು ನವೆಂಬರ್ ಅಥವಾ ಡಿಸೆಂಬರ್ಗೆ ದೊರೆಯುವ ನಿರೀಕ್ಷೆಯಿದೆ. ಆದರೆ, ಅಕ್ಟೋಬರ್ ಅಂತ್ಯಕ್ಕೇ ಸಿಗಬಹುದು ಎನ್ನುವುದು ಸಾಧ್ಯತೆ. ಒಂದು ವೇಳೆ ಅಷ್ಟೊತ್ತಿಗೆ ಅಗತ್ಯ ಪ್ರಮಾಣದ ಕ್ಲಿನಿಕಲ್ ಟ್ರಯಲ್ನ ವರದಿಗಳು ಸಜ್ಜಾಗಿದ್ದರೆ ನಿಮಗೆ ಉತ್ತರ ಬೇಗನೆ ಸಿಗಲಿದೆ ಎಂದೂ ಹೇಳುತ್ತಾರೆ.
; ಕರೊನಾ ಲಸಿಕೆ ಬಿಡುಗಡೆಗೆ ತರಾತುರಿ ಇಲ್ಲ; 9 ಕಂಪನಿಗಳ ಜಂಟಿ ಹೇಳಿಕೆ; ವರ್ಷಾಂತ್ಯಕ್ಕೂ ಅನುಮಾನ.!
ಒಟ್ಟಿನಲ್ಲಿ ಅಕ್ಟೋಬರ್ ಅಂತ್ಯಕ್ಕೆ ಲಸಿಕೆ ಬಳಕೆಗೆ ದೊರೆಯಬಹುದು ಎಂಬ ಸಾಧ್ಯತೆಯನ್ನು ಒಟ್ಟಾರೆ ತಳ್ಳಿ ಹಾಕಲಾಗದು. ಇದಕ್ಕಾಗಿ ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲಾಗುತ್ತಿದೆ ಎಂಬುದಂತೂ ಸತ್ಯ.
ಪಿಎಫ್ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..!