Breaking News

ಕೈ’ಕೊಟ್ಟ ನಟಿ ಖುಷ್ಬೂಗೆ ಕಾಂಗ್ರೆಸ್​ನಿಂದ ಗೇಟ್​ಪಾಸ್​! ಬಿಜೆಪಿ ಎಂಟ್ರಿಗೆ ಕ್ಷಣಗಣನೆ

Spread the love

ದೆಹಲಿ: ಕಾಂಗ್ರೆಸ್​ ಪಕ್ಷದ ಸ್ಟಾರ್ ಪ್ರಚಾರಕರಾಗಿ ಮಿಂಚಿದ್ದ ನಟಿ ಖುಷ್ಬೂ ಇದೀಗ ಪಕ್ಷಕ್ಕೆ ಗುಡ್​ ಬೈ ಹೇಳಿ ಕಮಲ ಪಾಳಯದತ್ತ ಮುಖಮಾಡಿದ್ದಾರೆ. ಖುಷ್ಬೂ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಕಲವೇ ಕ್ಷಣಗಳಲ್ಲಿ ಪಸರಿಸಲಿದೆ ಕಮಲದ ಖುಷ್ಬೂ..
ಕಮಲ ಪಕ್ಷಕ್ಕೆ ಸೇರುವ ಹಿನ್ನೆಲೆಯಲ್ಲಿ ಖುಷ್ಬೂ ನಿನ್ನೆ ರಾತ್ರಿಯೇ ಚನ್ನೈನಿಂದ ದೆಹಲಿಗೆ ಆಗಮಿಸಿರೋ ಮಾಹಿತಿ ಸಿಕ್ಕಿದೆ.

ಕಾಂಗ್ರೆಸ್​ ತೊರೆಯುತ್ತಿರುವ ಹಿನ್ನೆಲೆಯಲ್ಲಿ ನಟಿ ಪಕ್ಷಕ್ಕೆ ತಮ್ಮ ರಾಜೀನಾಮೆ ಪತ್ರವನ್ನು AICC ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ.

ಸಾಮಾನ್ಯ ಜನನೊಂದಿಗೆ ಸಂಪರ್ಕ ಇಲ್ಲದವರು ಹಾಗೂ ವಾಸ್ತವಿಕತೆಯ ಅರಿವೇ ಇಲ್ಲದವರು ನಮ್ಮ ಮೇಲೆ ಹಕ್ಕು ಚಲಾಯಿಸುತ್ತಿದ್ದು ನಮ್ಮಂಥವರನ್ನು ದಮನಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ಖುಷ್ಬೂ ಉಲ್ಲೇಖಿಸಿದ್ದಾರೆ.

ಇನ್ನು ಖುಷ್ಬೂ ಪಕ್ಷ ತೊರೆದ ಬೆನ್ನಲ್ಲೇ ನಟಿಯನ್ನು AICC ವಕ್ತಾರ ಸ್ಥಾನಮಾನದಿಂದ ಕೂಡಲೇ ವಜಾಗೊಳಿಸಲಾಗಿದೆ ಎಂದು ಪಕ್ಷ ತಿಳಿಸಿದೆ.

Khushboo Sundar resigns from Congress; says in letter to Congress President, “few elements seated at higher level within the party, people who’ve no connectivity with ground reality or public recognition are dictating terms”. https://t.co/4cm6ZPmzyT pic.twitter.com/HzWX1d5RU8

– ANI (@ANI)


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ