Breaking News

ಶಿವಳ್ಳಿ ಗ್ರಾಮ ಪಂಚಾಯತಿ “ಕೈ” ಪಾಲು..!

Spread the love

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿದಂತಾಗಿದೆ.

 

 

 

 

 

ಶಿವಳ್ಳಿ ಗ್ರಾಮದ ಮೂರನೇಯ ವಾರ್ಡಿನಲ್ಲಿ ಜಯ ಗಳಿಸಿದ ವಿಜಯಮಹಾಂತೇಶ ಶಿವಲಿಂಗಯ್ಯ ವಸ್ತ್ರದ ಅವರು ಅಧ್ಯಕ್ಷರಾಗಿಯೂ, ಉಪಾಧ್ಯಕ್ಷರಾಗಿ ಶಂಕರೆವ್ವ ಈಶ್ವರಪ್ಪ ಸಣ್ಣಮುದ್ದಿಯವರು ಅವಿರೋಧವಾಗಿ ಆಯ್ಕೆಯಾದರು.

 

ಶಿವಳ್ಳಿ ಪಂಚಾಯತಿಯಲ್ಲಿ ಒಟ್ಟು ಒಂಬತ್ತು ಸದಸ್ಯರ ಬಲ ಹೊಂದಿದ್ದು, ಅತೀ ಹೆಚ್ಚು ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದಾರೆ. ಕಳೆದ ಬಾರಿಯೂ ಗ್ರಾಮ ಪಂಚಾಯತಿ ಸದಸ್ಯರಾಗಿದ್ದ ವಿಜಯ ಮಹಾಂತೇಶ ವಸ್ತ್ರದ ಈ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 

 

 

ಶಿವಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ರವಿ.ಎಸ್.ಅರಸಿಕೇರಿ ಕಾರ್ಯನಿರ್ವಹಿಸಿದರು. ಪಿಡಿಓ ಖಲೀಲಅಹ್ಮದ ಹಾವೇರಿಪೇಟೆ ಸೇರಿದಂತೆ ಇನ್ನುಳಿದ ಸದಸ್ಯರು, ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ

Spread the loveದೆಹಲಿ: ಈಗ ನಾವು 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ