Breaking News

ದೆಹಲಿ ಜಲಮಂಡಳಿ ಯಮಗುಂಡಿಗೆ ಬೈಕ್ ಸವಾರ ಬಲಿ – 20 ಅಡಿಯ ಆಳಕ್ಕೆ ಬಿದ್ದು ದುರ್ಮರಣ

Spread the love

ನವದೆಹಲಿ: ಜಲಮಂಡಳಿಯ ಯಮಗುಂಡಿಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ. ಆಳವಾದ ಗುಂಡಿಗೆ ಬಿದ್ದು ಬೈಕ್ ಸವಾರ ಕಮಲ್ ಪ್ರಾಣಪಕ್ಷಿ ಹಾರಿ ಹೋಗಿದೆ.

ಪಶ್ಚಿಮ ದೆಹಲಿಯ ಜನಕಪುರಿಯಲ್ಲಿ ಜಲಮಂಡಳಿಯಿಂದ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. 20 ಅಡಿ ಆಳವಾದ ಗುಂಡಿ ಅಗೆಯಲಾಗಿತ್ತು. ನಿನ್ನೆ ರಾತ್ರಿ ರೋಹಿಣಿಯಲ್ಲಿರುವ ಕಚೇರಿಯಿಂದ ಜನಕಪುರಿಯ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಕಮಲ್ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ರಸ್ತೆಯಲ್ಲಿ ಅಗೆಯಲಾಗಿದ್ದ ಗುಂಡಿಗೆ ಯಾವುದೇ ಎಚ್ಚರಿಕಾ ಚಿಹ್ನೆಗಳು, ಬ್ಯಾರಿಕೇಡ್‌ಗಳು, ರಿಫ್ಲೆಕ್ಟರ್ ಅಳವಡಿಸದೇ ಇದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಘಟನೆ ಬಗ್ಗೆ ದೆಹಲಿ ಸರ್ಕಾರದ ಸಚಿವ ಆಶೀಷ್ ಸೂದ್ ತನಿಖೆಗೆ ಆದೇಶ ನೀಡಿದ್ದಾರೆ.

ಇತ್ತ ಬೆಂಗಳೂರಿನಲ್ಲೂ ಬಾಲಕನೊಬ್ಬ ಚರಂಡಿಗೆ ಬಿದ್ದು ಗಾಯಗಳೊಂದಿಗೆ ಪಾರಾದ ಘಟನೆ ನಡೆದಿದೆ. ಸರ್ವಜ್ಞನಗರದ ಗೋವಿಂದಪುರದಲ್ಲಿ ಶಾಲೆ ಎದುರು ಚರಂಡಿ ಕಾಮಗಾರಿ ಮಾಡಲಾಗ್ತಿತ್ತು. ಕಬ್ಬಿಣದ ಮೋಲ್ಡಿಂಗ್ ಕಂಬಿಗಳನ್ನು ಹಾಕಿ ಹಾಗೇ ಬಿಡಲಾಗಿತ್ತು. ಈ ವೇಳೆ ಚರಂಡಿಯನ್ನು ದಾಟುವಾಗ ಬ್ಯಾಗ್ ಸಮೇತ 1ನೇ ತರಗತಿಯ ಬಾಲಕ ಚರಂಡಿಗೆ ಬಿದ್ದಿದ್ದಾನೆ. ಸಣ್ಣಪುಟ್ಟ ಗಾಯಗಳೊಂದಿಗೆ ಬಾಲಕ ಅಪಾಯದಿಂದ ಪಾರಾಗಿದ್ದಾನೆ.


Spread the love

About Laxminews 24x7

Check Also

ಅಜಿತ್ ಪವಾರ್ ವಿಮಾನ ದುರಂತ: ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ..! ಮಹಾರಾಷ್ಟ್ರದ ರಾಜಕೀಯ ಧ್ರುವತಾರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಅವರ ಅಕಾಲಿಕ ನಿಧನಕ್ಕೆ ಕಾರಣವಾದ ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ದುರಂತಕ್ಕೆ ಕಾರಣವಾದ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಜನವರಿ 28ರ ಬುಧವಾರ ಬೆಳಿಗ್ಗೆ ಸಂಭವಿಸಿದ ಈ ಭೀಕರ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದುರಂತದ ಹಿಂದಿನ ಪ್ರಮುಖ ಕಾರಣಗಳು: ದೃಶ್ಯಮಾನತೆ ಮತ್ತು ತಾಂತ್ರಿಕ ದೋಷ..? ತನಿಖಾ ಮೂಲಗಳ ಪ್ರಕಾರ, ಅಪಘಾತಕ್ಕೆ ಎರಡು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಕಡಿಮೆ ದೃಶ್ಯಮಾನತೆ: ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ರನ್‌ವೇ ಮೇಲೆ ದಟ್ಟವಾದ ಮಂಜು ಕವಿದಿತ್ತು. ದೃಶ್ಯಮಾನತೆ ತೀರಾ ಕಡಿಮೆ ಇದ್ದರೂ ಸಹ, ವಿಮಾನವನ್ನು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದ್ದು ಈ ದುರಂತಕ್ಕೆ ಒಂದು ಮುಖ್ಯ ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪೈಲಟ್‌ಗಳು ಎರಡನೇ ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿದ್ದಾಗ ವಿಮಾನವು ನಿಯಂತ್ರಣ ತಪ್ಪಿ ಬೆಂಕಿ ಹೊತ್ತಿಕೊಂಡಿದೆ.

Spread the loveಮಹಾರಾಷ್ಟ್ರದ ರಾಜಕೀಯ ಧ್ರುವತಾರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕಾರಣವಾದ ಬೊಂಬಾರ್ಡಿಯರ್ ಲಿಯರ್‌ಜೆಟ್ 45 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ