Breaking News

ರಾಜ್ಯದ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್

Spread the love

ಬೆಂಗಳೂರು: ರಾಜ್ಯದಲ್ಲಿ ಇರೋ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ  ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್  ತಿಳಿಸಿದ್ದಾರೆ.

ವಿಧಾನ ಪರಿಷತ್ ‌ಶೂನ್ಯ ವೇಳೆ ಕಲಾಪದಲ್ಲಿ ಜೆಡಿಎಸ್  ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ 50 ವರ್ಷದ ಹಳೆಯ ಎಲ್ಲಾ ಜಲಾಶಯಗಳ ಹಳೆಯ ಗೇಟ್ ಬದಲಿಸಲು ಸರ್ಕಾರ ಬದ್ಧವಾಗಿದೆ. ಜಲಾಶಯಗಳಿಗೆ ಹೊಸ ಗೇಟ್ ಅಳವಡಿಸುತ್ತೇವೆ. ಮೊದಲು ತುಂಗಭದ್ರಾ ಜಲಾಶಯ ಗೇಟ್ ಬದಲಿಸಲು ನಿರ್ಧರಿಲಾಗಿದೆ ಎಂದರು.

ಅಹಮದಾಬಾದ್ ಕಂಪೆನಿಗೆ ಗೇಟ್ ಅಳವಡಿಸಲು ಕೊಡಲಾಗಿದೆ. ಮೆಟಿರಿಯಲ್ ಬಂದಿದೆ, ಅಳವಡಿಸುವ ಕೆಲಸ ನಡೆಯುತ್ತಿದೆ. 6 ಗೇಟ್‌ಗಳನ್ನು ಮೇ ವರೆಗೆ ಚೇಂಜ್ ಮಾಡುತ್ತೇವೆ. ತುಂಗಾಭಧ್ರಾ ವಿಚಾರದಲ್ಲಿ ಮೂರು ರಾಜ್ಯಗಳು ತೀರ್ಮಾನ ಮಾಡಬೇಕು. ಮೊದಲು ತುಂಗಭದ್ರಾ ಮಾಡಿ ಬಳಿಕ ಎಲ್ಲಾ ಜಲಾಶಯದ ಗೇಟ್ ಬದಲಾವಣೆ ಮಾಡ್ತೀವಿ ಎಂದು ತಿಳಿಸಿದರು.


Spread the love

About Laxminews 24x7

Check Also

ಪರಿಷತ್‌ ಶಿಕ್ಷಕರ, ಪದವೀಧರ ಕ್ಷೇತ್ರ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌

Spread the love ಬೆಂಗಳೂರು: ವಿಧಾನ ಪರಿಷತ್‌ ಖಾಲಿ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮೂವರು ಅಭ್ಯರ್ಥಿಗಳ ಪಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ