Breaking News

ನಗರದ ಹಲವು ಕಡೆ ಭಾರಿ ಮಳೆ ಸುರಿಯುತ್ತಿದೆ.

Spread the love

ಹೈದರಾಬಾದ್​: ನಗರದ ಹಲವು ಕಡೆ ಭಾರಿ ಮಳೆ ಸುರಿಯುತ್ತಿದೆ. ಹಳೆಬಸ್ತಿ, ಸರೂರನಗರ, ಮೀರ್‌ಪೇಟ, ಕರ್ಮನ್ ಘಾಟ್, ಉಪ್ಪಲ್, ನಾಗೋಲ್, ಜುಬ್ಲಿ ಹಿಲ್ಸ್, ಎಲ್.ಬಿ.‌ನಗರ‌ ಸೇರಿದಂತೆ ಹಲವಾರು ಕಡೆಗಳಲ್ಲಿ‌ ವರುಣನ ನರ್ತನ ಹೆಚ್ಚಾಗಿದೆ.

ಹಳೆ‌ಬಸ್ತಿಯಲ್ಲಿ ಭಾರಿ ಮಳೆಯ ಕಾರಣ ಮೀರ ಆಲಂ‌ ಕೆರೆ ತುಂಬಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜನರನ್ನು ಈ ಪ್ರದೇಶದಿಂದ‌ ತೆರವು‌ ಮಾಡಿ ಸುರಕ್ಷಿತ ಸ್ಥಳಕ್ಕೆ‌ ಹೋಗಲು ಸೂಚಿಸಿದ್ದಾರೆ. ಕಿಷನ್‌ ಭಾಗ್ ಪ್ರದೇಶ ಮೂಸಿ‌ ನದಿಯಲ್ಲಿ ಕಿಚ್ಚಿಕೊಂಡು ಹೋಗುವ ಭೀತಿ ಶುರುವಾಗಿದೆ. ಜನರನ್ನು‌ ಎಚ್ಚರಿಕೆಯಿಂದಿರಲು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ‌ ಮೂರು ದಿನಗಳ‌ ಕಾಲ ಮಳೆ ಸುರಿಯೋ ಬಗ್ಗೆ ಹವಾಮಾನ‌ ಇಲಾಖೆ ತಿಳಿಸಿದೆ. ಹೀಗಾಗಿ ಮುತ್ತಿನ‌ ನಗರಿಯ ಜನತೆ ಜೀವ ಕೈಯಲ್ಲಿ‌ ಹಿಡಿದು ಬದುಕುವಂತಾಗಿದೆ.

ಜನರ ನೆರವಿಗೆ ಧಾವಿಸಿದ‌ ನಟರು:
ಹೈದರಾಬಾದ್​ನಲ್ಲಿ‌ ಭಾರಿ‌ ಮಳೆಯಿಂದಾಗಿ ಪರಿಸ್ಥಿತಿ‌ ತೀರ ಅದಗೆಡ್ಡಿದೆ. ಹೀಗಾಗಿ ಜನರ ನೆರವಿಗೆ ನಟರು ಧಾವಿಸಿದ್ದಾರೆ. ನಟ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ತೆಲಂಗಾಣ ಜನರ‌ ಕಷ್ಟಕ್ಕೆ ಸ್ಪಂಧಿಸಿ 1ಕೋಟಿ‌ ನೆರವು ನೀಡಿದ್ದಾರೆ. ಹಾಗೂ ನಟ ಚಿರಂಜೀವಿ ಸಹ 1ಕೋಟಿ‌ ನೆರವು ನೀಡಿದ್ದಾರೆ.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ