Breaking News

ಮುಂದಿನ ಸಿಎಂ ನಾನೇ: ಶಾಸಕ ಬಸನಗೌಡ ಯತ್ನಾಳ ಘೋಷಣೆ

Spread the love

 

ದಾವಣೆಗರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಅಲುಗಾಡುತ್ತಿದೆ. ನಾನು ಮಂತ್ರಿಯಾಗಬೇಕೆಂದು ಯಾರ ಕೈಕಾಲು ಹಿಡಿಯುವವನಲ್ಲ. ”ನಮಗೆ ಬರೋದಿದೆ ಸಿಎಂ ಕುರ್ಚಿ” ಎಂದು ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು.

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು.

ಮುಖ್ಯಮಂತ್ರಿ ಆಗಿದ್ದವರು ಕೈಗಾರಿಕಾ ಮಂತ್ರಿಯಾಗಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬದಲು ಅವರನ್ನು ಇಳಿಸಿ ನಾವೇ ಮುಖ್ಯಮಂತ್ರಿ ಆಗಲಿದ್ದೇವೆ ಎಂದರು.

ವೀರಶೈವ ಲಿಂಗಾಯತರು ಈಗ ನೆನಪಾಯ್ತಾ?. ಕೇಂದ್ರವರು ಸಿಎಂ ಸ್ಥಾನದಿಂದ ವಜಾಗೊಳಿಸುವುದನ್ನು ಮನಗಂಡು ನೀವು ಲಿಂಗಾಯತರ ಅಭಿವೃದ್ಧಿ ನಿಗಮ ಮಾಡಿದ್ದೀರಾ?” ಎಂದು ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.ಆಯಾ ಮಠಗಳಿಗೆ ಕೋಟಿಗಟ್ಟಲೆ ಹಣ ನೀಡಿದ್ದರು. ಹತ್ತು ಕೋಟಿಗೆ ಮಠನೇ ಮಾರಾಟ ಮಾಡೋದಾ?” ಎಂದು ಹರಿಹರ ಪಂಚಮಸಾಲಿ ಮಠಕ್ಕೆ‌ ನೀಡಿದ ಹಣದ ಬಗ್ಗೆ ವ್ಯಂಗ್ಯ ವಾಡಿದರು‌.

ನಮ್ಮ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ನಾನೇ ನಿಮಗೆ ಕೋಟಿಗಟ್ಟಲೆ ಹಣ ಕೊಡುತ್ತೀನಿ. ಸುಮ್ಮನೆ ಯಾಕೆ ಮೀಸಲಾತಿ ಕೊಡುವುದಾಗಿ ನಾಟಕ ಮಾಡುತ್ತೀರಾ?” ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.‌ ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

Spread the love ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ