ಚಿಕ್ಕೋಡಿ: ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ವದಂತಿ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಜಿಲ್ಲಾಡಳಿತ ಭರವಸೆ ನಡುವೆಯು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗಿದ್ದು, ಬುಕ್ ಮಾಡಿದರೂ ಸಿಲಿಂಡರ್ ಪೂರೈಸುತ್ತಿಲ್ಲ ಎಂಬ ದೂರು ಗ್ರಾಹಕರಿಂದ ಕೇಳಿ ಬರುತ್ತಿದೆ.
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ರಾಜ್ಯಕ್ಕೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಉಂಟಾಗಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಅಭಾವದ ವದಂತಿಯಿಂದ ಜನರು ತಮ್ಮ ಬಳಿ ಇರುವ ಹೆಚ್ಚುವರಿ ಸಿಲಿಂಡರ್ ತುಂಬಿಸಿಕೊಳ್ಳಲು ಗಣನೀಯ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡುತ್ತಿರುವ ಪರಿಣಾಮ ಗ್ಯಾಸ್ ಏಜನ್ಸಿ ಕೇಂದ್ರಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ ವಿವಿಧ ಕಂಪನಿಯ 12.49 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕಗಳಿವೆ. ಜಿಲ್ಲೆಯಲ್ಲಿ ನಿತ್ಯ 30 ಸಾವಿರ ಸಿಲಿಂಡರ್‌ಗಳಿಗೆ ಬೇಡಿಕೆಯಿದೆ. ಆದರೆ 24 ಸಾವಿರ ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿವೆ. ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ವಾಣಿಜ್ಯ ಸಿಲಿಂಡರ್‌ಗಳು ಮೊದಲು 1650 ಸಿಲಿಂಡರ್‌ಗಳು ಪೂರೈಕೆಯಾಗುತ್ತಿವೆ. ಆದರೆ ಈಗ ನಿತ್ಯ ೨೫೦ ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿರುವ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ.
ಗ್ರಾಹಕರಲ್ಲಿ ಹೆಚ್ಚಿದ ಆತಂಕ:
ಅನಿಲ ಸರಬರಾಜಿನಲ್ಲಿ ವ್ಯತ್ಯಯದಿಂದಾಗಿ ಅನಿಲ ಬಳಕೆದಾರರ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.ಜಿಲ್ಲಾಡಳಿತ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಅನಿಲ ಕಂಪನಿ ವಿತರಕರ ಜತೆ ಸಭೆ ನಡೆಸಿ,ಜಿಲ್ಲೆಯಲ್ಲಿ ಯಾವುದೇ ಅಭಾವವಿಲ್ಲ ಎಂದು ಭರವಸೆ ನೀಡಿದ್ದಾರೆ. ಅದ್ಯಾಗೂ ಸಮಸ್ಯೆ ನಿವಾರಣೆಯಾಗಿಲ್ಲ. ಈ ಮೊದಲು ಬುಕ್ಕಿಂಗ್ ಮಾಡಿದ ಮರು ದಿನವೇ ಸಿಲಿಂಡರ್ ಪೂರೈಕೆಯಾಗುತ್ತಿದೆ. ಆದರೆ ಈ ಹೊಸ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 45 ದಿನ, ನಗರ ಪ್ರದೇಶದಲ್ಲಿ 25 ದಿನ ನಿಗದಿಯಾಗಿದೆ. ಹೆಚ್ಚುವರಿ ಸಿಲಿಂಡರ್ ಇದ್ದವರು ಬುಕ್ಕಿಂಗ್ ಮಾಡುತ್ತಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.
ಜಾತ್ರೆ,ಮದುವೆ ಸಮಾರಂಭಕ್ಕೂ ತಟ್ಟಿದ ಬಿಸಿ:
ಜಿಲ್ಲೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅಭಾವ ಉಂಟಾಗಿದೆ. ಶೇ.70ರಷ್ಟು ಕೊರತೆಯಿಂದಾಗಿ ಮದುವೆ, ಸಭೆ ,ಜಾತ್ರೆ,ಸಮಾರಂಭಗಳಲ್ಲಿ ಅಡುಗೆ ಮಾಡಲು ಸಿಲಿಂಡರ್ ಇಲ್ಲದೆ ಬಾಣಸಿಗರು ಸೌಧ ಅಡುಗೆಗೆ ಮೊರೆ ಹೋಗುವಾಗ, ಇನ್ನು ಕೆಲವಡೆ ಹೆಚ್ಚಿನ ಹಣ ನೀಡಿ ಗೃಹ ಬಳಕೆ ಸಿಲಿಂಡರ್ ಬಳಸುತ್ತಿರುವುದು ಕಂಡು ಬಂದಿದೆ.
Laxmi News 24×7