ಇತ್ತೀಚೆಗೆ ಕಾಣೆಯಾಗಿದ್ದ ಖ್ಯಾತ ನಟಿಯೊಬ್ಬರ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದ್ದು, ದಿಗ್ಭ್ರಮೆ ಮೂಡಿಸಿದೆ. ಇತ್ತೀಚಿಗೆ ಕಾಣೆಯಾಗಿದ್ದ ಬಾಂಗ್ಲಾದ ಖ್ಯಾತ ನಟಿ ರೈಮಾ ಇಸ್ಲಾಂ ಶಿಮಿ ಢಾಕಾ ಬಳಿಯ ಖೈರಾನಿಗಂಜ್ ವ್ಯಾಪ್ತಿಯ ಸೇತುವೆಯ ತಟದಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ.ಕಳೆದ ಮೂರು ದಿನಗಳಿಂದ ನಟಿ ನಾಪತ್ತೆಯಾಗಿದ್ದಾರೆಂದು ಪತಿ ಶೆಕಾವತ್ ಅಲಿ ನೋಬಲ್ ಕಾಳಬಂಗನ್ ಠಾಣೆಯಲ್ಲಿ ಕೇಸ್ ದಾಖಲಸಿದ್ದರು. ಕೇಸ್ ದಾಖಲಾದ 3 ದಿನದಲ್ಲಿ ನಟಿ ಹೆಣವಾಗಿ ಪತ್ತೆಯಾಗಿದ್ದಾರೆ. ಈ ವೇಳೆ ಅವರ ದೇಹದ ಮೇಲೆ ಸಾಕಷ್ಟು ಚುಚ್ಚಿದ ಗುರುತುಗಳಿ ಕಂಡಿವೆ. ಹೀಗಾಗಿ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಆತನನ್ನು ಮತ್ತು ಅವರ ಕಾರ್ ಚಾಲಕನನ್ನು ಅರೆಸ್ಟ್ ಮಾಡಿ ವಿಚಾರಣೆ ಗೊಳಪಡಿಸಿದ್ದಾರೆ.
ಈ ವೇಳೆ ಪತಿ ಶೆಕಾವತ್ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಹತ್ಯೆಗೆ ಕಾರಣಗಳೇನು ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಕೃತ್ಯದಲ್ಲಿ ಇನ್ನು ಹಲವು ಬಾಂಗ್ಲಾ ಕಲಾವಿದರ ಕೈವಾಡವಿದೆ ಎಂದು ಪೋಲೀರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತಳ್ಳಿದ್ದು ನಟಿಯ ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.
Laxmi News 24×7