ಬಾಗಲಕೋಟೆ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ, ಮೂವರು ಕಿಡಿಗೇಡಿಗಳನ್ನು ಮುಧೋಳ “ಖಾಕಿ” ಭರ್ಜರಿ ಭರ್ಜರಿ ಬೇಟೆಯಾಡಿದ್ದಾರೆ.
ಸಿದ್ಧು, ಸಿದ್ದಪ್ಪ ಜಿಮ್ಮಿ, ಅಡಿವೆವ್ವ ಹಾದಿಮನಿ, ಕಲ್ಮೇಶ , ಮಟ್ಯಾ, ಪುಟ್ಯಾ, ಪುಟ್ಟು , ಪುಟ್ಯಾ, ದುರ್ಗಪ್ಪ ರಾನವ್ವಗೋಳ , ಜಾನಮಟ್ಟಿ, ಮುತ್ತಪ್ಪ ಯಮನಪ್ಪ ಪೂಜಾರಿ ಬಂಧಿತ ಆರೋಪಿಗಳು, ಮುಧೋಳ ತಾಲೂಕಿನ ಮಳಲಿ ಗ್ರಾಮದ ಎಂದು ತಿಳಿದು ಬಂದಿದೆ.
ಬಂಧಿತರಿಂದ 11 ಲಕ್ಷ ರೂ. ಮೌಲ್ಯದ 225 ಗ್ರಾಂ ಚಿನ್ನ ಹಾಗೂ 2260 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನ ವಶಕ್ಕೆ ಪಡೆಯಲಾಗಿದೆ. ಕಳ್ಳತನಕ್ಕೆ ಬಳಕೆ ಮಾಡಿದ ಬೈಕ್ ನ್ನ ಜಪ್ತಿ ಮಾಡಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಧೋಲ ಸಿಪಿಐ ಎಚ್.ಆರ್.ಪಾಟೀಲ, ಪಿಎಸ್ಐಗಳಾದ ಶಿವಶಂಕರ ಮುಕರಿ, ದಿನೇಶ ಜವಳೇಕರ, ಕೆ.ಬಿ.ಮಾಂಗ್, ಹವಾಲ್ದಾರುಗಳಾದ ಆರ್.ಬಿ.ಕಟಗೇರಿ, ಬಾಹುಬಲಿ ಕುಸನಾಳೆ, ವಿ.ಬಿ.ತೇಲಿ, ಜಗದೀಶ ಕಾಂತಿ, ಬಿ.ಎಸ್.ದಾಸವಗೋಳ, ಪೇದೆಗಳಾದ ಎಂ.ಎನ್.ಮಾಂಗ್, ಸದಾಶಿವ ಬಡಿಗೇರ, ಜೆ.ಸಿ.ದಳವಾಯಿ, ದಾದಾಪೀರ ಅತ್ರಾವತ್ತ, ಮಲ್ಲಿಕಾರ್ಜುನ ತಂಬಾಕದ, ಬಸವರಾಜ ತಂಗಡಿ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು.