Breaking News

ಕೌಟುಂಬಿಕ ಕಲಹಕ್ಕೆ ಗರ್ಭಿಣಿ ಸೊಸೆಯನ್ನ ಕೊಂದ ಮಾವ – ಆರೋಪಿ ಅರೆಸ್ಟ್

Spread the love

ರಾಯಚೂರು: ಹಣ ಕೊಡದಿದ್ದಕ್ಕೆ ಮಗನೋರ್ವ ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಲೆ ಮಾಡಿದ್ದ ಘಟನೆ ಮಂಗಳವಾರ ನಗರದಲ್ಲಿ ನಡೆದಿತ್ತು. ಇಂದು ಇದೇ ರಾಯಚೂರಿನಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಗರ್ಭಿಣಿ ಸೊಸೆಯನ್ನ ಕತ್ತು ಸೀಳಿ ಮಾವ ಕೊಲೆ ಮಾಡಿರುವಂತಹ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ. ರೇಖಾ(25) ಕೊಲೆಯಾದ ಸೊಸೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ: ಸೊಸೆ ಕೊಲೆ

ಕೌಟುಂಬಿಕ ಕಲಹ ಹಿನ್ನೆಲೆ ಮಾವ ಸಿದ್ದಪ್ಪ ನಾಲ್ಕು ತಿಂಗಳ ಗರ್ಭಿಣಿ ಸೊಸೆ ರೇಖಾರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದು ನರಳಾಡಿ ರೇಖಾ ಸಾವನ್ನಪ್ಪಿದ್ದಾರೆ. ಇತ್ತ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ಮಾವ ಸಿದ್ದಪ್ಪನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಂದ ಮಗ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂನಿಕ ಜಕ್ಕೇರು ತಾಂಡಾ ನಿನ್ನೆ ಕರುಳು ಹಿಂಡುವಂಥ ಕೃತ್ಯಕ್ಕೆ ಸಾಕ್ಷಿಯಾಗಿತ್ತು. ಹೆತ್ತ ತಾಯಿಯನ್ನೇ ಮಗ ಅಟ್ಟಾಡಿಸಿ ಕೊಲೆ ಮಾಡಿದ್ದ. ಚಂದವ್ವ (45) ಕೊಲೆಯಾದ ತಾಯಿ. ಈ ಚಂದವ್ವಗೆ ಆರು ಜನ ಮಕ್ಕಳು. ನಾಲ್ಕು ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಗಂಡನ ಮನೆಯಲ್ಲಿದ್ದಾರೆ. ಇಬ್ಬರು ಗಂಡು ಮಕ್ಕಳ ಪೈಕಿ ಮೊದಲನೇ ಮಗ ಕುಮಾರ್​​​. ಇತನಿಗೂ ಮದುವೆಯಾಗಿದ್ದು, ಬೆಂಗಳೂರಿನಲ್ಲಿ ಹೆಂಡ್ತಿ-ಮಕ್ಕಳ ಜೊತೆ ಜೀವನ ಮಾಡುತ್ತಿದ್ದಾರೆ.

ಇನ್ನೊಬ್ಬ ಮಗ ಸಂತೋಷ್. ಇತ ಇದೇ ಜಕ್ಕೇರು ತಾಂಡಾದಲ್ಲಿ ಜೆಸಿಬಿ ಆಪರೇಟರ್ ಆಗಿದ್ದಾನೆ. ಹೀಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಮೊದಲ ಮಗ ಕುಮಾರ್ ಕಿರಿಕ್ ಪಾರ್ಟಿ. ಕುಡಿಯೋದು, ಗಲಾಟೆ ಮಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿನಿಂದ ಜಕ್ಕೇರು ತಾಂಡಾ ಗ್ರಾಮಕ್ಕೆ ಬಂದಿದ್ದ ಕುಮಾರ್ ತಾಯಿ ಚಂದವ್ವ ಜೊತೆ ಗಲಾಟೆ ಮಾಡಿದ್ದ. ನಿನ್ನೆ ಸಂಜೆ ತಾಯಿ ಜೊತೆ ಗಲಾಟೆ ಮಾಡಿದ್ದು, ತಾಯಿ ಕೂದಲು ಹಿಡಿದು ಎಳೆದಾಡಿ, ಮನೆ ಪಕ್ಕದ ಸೇವಾಲಾಲ್ ಭವನದ ಕಟ್ಟಡ ಮೇಲೆ ಬಿಸಾಡಿದ್ದ. ಈ ವೇಳೆ ತಾಯಿ ತಲೆ ಮೇಲೆ ಕುಮಾರ್ ಕಲ್ಲು ಎತ್ತಿ ಹಾಕಿ‌ ಹತ್ಯೆಗೈದಿದ್ದ. ಸದ್ಯ ಮುದಗಲ್ ಪೊಲೀಸರು ಆರೋಪಿ ಕುಮಾರ್​​ನನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಮಾಜಿ ಸಚಿವನಿಗೆ ನವಿಲಿನ ಗರಿ ಹಾರ ಹಾಕಿದ ಅಭಿಮಾನಿಗಳು; ದೂರು ದಾಖಲಾಗ್ತಿದ್ದಂತೆ ಸ್ಪಷ್ಟನೆ ಕೊಟ್ಟ ಶಿವನಗೌಡ ನಾಯಕ್​​

Spread the love ರಾಯಚೂರು : ಮಾಜಿ ಸಚಿವ ಕೆ. ಶಿವನಗೌಡ ನಾಯಕ ಜನ್ಮದಿನದಂದು ಅಭಿಮಾನಿಗಳು ನವಿಲುಗರಿ ಹಾರ ಹಾಕಿರುವ ವಿಚಾರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ