Breaking News

ರಾಜ್ಯದಲ್ಲಿ ಇಂದು ಒಂದೇ ದಿನ ಮಹಾಮಾರಿ ಕೊರೊನಾ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು, 48 ಜನರಲ್ಲಿ ಕೊವಿಡ್-19 ಪಾಸಿಟೀವ್ ಕಂಡುಬಂದಿದೆ.

Spread the love

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ಮಹಾಮಾರಿ ಕೊರೊನಾ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು, 48 ಜನರಲ್ಲಿ ಕೊವಿಡ್-19 ಪಾಸಿಟೀವ್ ಕಂಡುಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ.

ಬೆಳಗಾವಿ, ಉತ್ತರ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಕೊರಿನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಬೆಳಿಗ್ಗಿನ ಹೆಲ್ತ್ ಬುಲೆಟಿನ್ ಪ್ರಕಾರ 45 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈಗ ಸಂಜೆ ವೇಳೆ ಚಿತ್ರದುರ್ಗದಲ್ಲಿ 3 ಜನರಲ್ಲಿ ಕೊರೊನಾ ಪಾಸಿಟೀವ್ ಕಂಡುಬಂದಿದ್ದು, ಈ ಮೂಲಕ ಇಂದು 48 ಜನರಲ್ಲಿ ಸೋಂಕು ಪತ್ತೆಯಾದಂತಾಗಿದೆ.

ಬೆಳಗಾವಿಯಲ್ಲಿ 11, ಚಿತ್ರದುರ್ಗ ಜಿಲ್ಲೆಯಲ್ಲಿ 3, ದಾವಣಗೆರೆಯಲ್ಲಿ 14, ಉತ್ತರ ಕನ್ನಡ 12, ಬೆಂಗಳೂರಿನಲ್ಲಿ 7 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಟ್ಟಾರೆ ಲಾಕ್ ಡೌನ್ ಸಡಿಲಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡಿದ್ದು, ಕರ್ನಾಟಕದಲ್ಲಿ ಆತಂಕವನ್ನು ಹೆಚ್ಚಿಸಿದೆ.

ಬೆಳಗಾವಿಯಲ್ಲಿ 11 ಸೇರಿದಂತೆ ರಾಜ್ಯದಲ್ಲಿ ಇಂದು 45 ಜನರಿಗೆ ಕೊರೋನಾ ಸೋಂಕು ದೃಢ


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಬಿಡದ ಮೈಕೊರೆಯುವ ಚಳಿ, ಒಣ ಹವೆ!

Spread the loveಬೆಂಗಳೂರು: ಇಂದೂ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ  ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ