ಬೆಳಗಾವಿ:ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಮಹಾನಗರ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ಕೈಬಿಡಲು ಸ್ವಯಂ ಪ್ರೇರಣೆ ಸಂಕಲ್ಪ ಮಾಡಬೇಕು ಎಂದು ಪಾಲಿಕೆ ಆಯುಕ್ತ ಕಾರ್ತಿಕ್.ಎಂ ಹೇಳಿದರು.
ನಗರದ ನರಗುಂದಕರ ಬಾವಿ ಚೌಕ್‌ನಲ್ಲಿ ಗುರುವಾರ ವಿಶ್ವ ಜಲದಿನ, ಪ್ಲಾಸ್ಟಿಕ್ ಮುಕ್ತ ಅರಿವು ಹಾಗೂ ಕ್ಲಾಥ್ ಬ್ಯಾಗ್ ವೆಡ್ಡಿಂಗ್ ಯಂತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾದ ಪ್ಲಾಸ್ಟಿಕ್ ಬಳಕೆ ಜನರು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಪರಿಸರ ಹಾನಿ ಉಂಟಾಗುತ್ತಿದೆ. ಈ ಹಿನ್ನೆಲೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ಕೈಬಿಡಬೇಕು ಎಂದು ಜನರಲ್ಲಿ ವಿನಂತಿಸಿದರು.
ಸ್ವಚ್ಛತಾ ಕಾರ್ಮಿಕರು ನಗರ ಸ್ವಚ್ಛವನ್ನಾಗಿಡಲು ನಿರಂತವಾಗಿ ಶ್ರಮಿಸುತ್ತಿದ್ದು, ಪ್ರತಿಯೊಬ್ಬರು ಸಹಕಾರ ನೀಡಿದರೆ ನಗರ ಸೌಂದರ್ಯ ಹೆಚ್ಚಿಸಲು, ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನೀರು ಸಂರಕ್ಷಣೆ ಜತೆಗೆ ಮಿತವಾಗಿ ಬಳಕೆ ಮಾಡುವ ಮನೋವೃತ್ತಿಯನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ವಾಸಿಸುವ ಸುತ್ತಮುತ್ತಲಿನ ಪ್ರದೇಶ ಪರಿಸರ ಸಂರಕ್ಷಣೆ ಶ್ರಮಿಸಬೇಕು ಎಂದರು.
ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹಣಮಂತ ಕೊಂಗಾಲಿ, ಜಯತೀರ್ಥ ಸವದತ್ತಿ, ಶ್ರೇಯಸ ನಾಕಾಡಿ, ಲಕ್ಷ್ಮೀ ರಾಠೋಡ, ಇಂಜಿನಿಯರ್ ಹಣಮಂತ ಕಲಾದಗಿ ಇತರರಿದ್ದರು.
Laxmi News 24×7