Breaking News

ಕರ್ನಾಟಕ-ಮಹಾರಾಷ್ಟ್ರ ಗಡಿ ಘರ್ಷಣೆ: ಬೆಳಗಾವಿ ಭೇಟಿ ರದ್ದಾಗಿಲ್ಲ, ಮುಂದೂಡಿಕೆ – ಮಹಾ ಸಚಿವ

Spread the love

ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ ಭುಗಿಲೆದ್ದಿದ್ದು, ನಮ್ಮ ಬೆಳಗಾವಿ ಭೇಟಿ ಮುಂದೂಡಿಕೆಯಾಗಿದೆ. ರದ್ದುಗೊಳಿಸಿಲ್ಲ ಎಂದು ಮಹಾರಾಷ್ಟ್ರ ಸಚಿವ ಸಂಭುರಾಜ್ ದೇಸಾಯಿ ಅವರು ಮಂಗಳವಾರ ಹೇಳಿದ್ದಾರೆ. ಮಹಾರಾಷ್ಟ್ರ: ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ ಭುಗಿಲೆದ್ದಿದ್ದು, ನಮ್ಮ ಬೆಳಗಾವಿ ಭೇಟಿ ಮುಂದೂಡಿಕೆಯಾಗಿದೆ.

 

ರದ್ದುಗೊಳಿಸಿಲ್ಲ ಎಂದು ಮಹಾರಾಷ್ಟ್ರ ಸಚಿವ ಸಂಭುರಾಜ್ ದೇಸಾಯಿ ಅವರು ಮಂಗಳವಾರ ಹೇಳಿದ್ದಾರೆ. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸ್ ನಿಮಿತ್ತ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಬೆಳಗಾವಿಯ ಗಡಿ ಪ್ರದೇಶಕ್ಕೆ ಭೇಟಿ ನೀಡಬೇಕಾಗಿತ್ತು. ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದೆವು. ಗಡಿ ಸಮಸ್ಯೆ ಕುರಿತು ಜನರೊಂದಿಗೆ ಚರ್ಚಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ಕರ್ನಾಟಕ ಗಡಿಯಲ್ಲಿ ನಾವು ಹೋಗಲು ಸಾಧ್ಯವಾಗದಂತೆ ಭಾರೀ ಪಡೆಗಳನ್ನು ನಿಯೋಜಿಸಲಾಗಿದೆ. ಕರ್ನಾಟಕ ಸಿಎಂ ಅವರ ಈ ಕ್ರಮ ಸರಿಯಲ್ಲ, ಎಲ್ಲಿಗೆಬೇಕಾದರೂ ಹೋಗಲು ಎಲ್ಲರಿಗೂ ಹಕ್ಕಿದೆ” ಎಂದು ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಾಬಾ ಸಾಹೇಬರ ಮಹಾಪರಿನಿರ್ವಾಣ ದಿವಸ್ ಸಂದರ್ಭದಲ್ಲಿ ಯಾವುದೇ ರೀತಿಯ ಉದ್ವಿಗ್ನತೆ ಉಂಟಾಗಬಾರದು ಎಂದು ನಾವು ಇಂದು ಹೋಗಲಿಲ್ಲ’ ಎಂದು ಹೇಳಿದ ಮಹಾರಾಷ್ಟ್ರ ಸಚಿವರು, ‘ಈ ಕಾರ್ಯಕ್ರಮ ರದ್ದಾಗಿಲ್ಲ, ಮುಂದೂಡಿದ್ದೇವೆ ಅಷ್ಟೆ” ಎಂದರು. ಏತನ್ಮಧ್ಯೆ, ಎಎನ್ಐ ಜೊತೆ ಮಾತನಾಡಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಾಯಕಿ ಸರಿತಾ ಪಾಟೀಲ್, “ಬೆಳಗಾವಿಗೆ ಹೋಗಬೇಕಿದ್ದ ಮಹಾರಾಷ್ಟ್ರ ಸಚಿವರು, ಮಹಾಪರಿನಿರ್ವಾಣ ದಿವಸ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂಬುದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆಯಿಂದ ನಮಗೆ ತಿಳಿಯಿತು” ಎಂದಿದ್ದಾರೆ.


Spread the love

About Laxminews 24x7

Check Also

ಶಾಸಕಿ ಜಿ. ಕರೆಮ್ಮಾ ನಾಯಕ್​ ಕಾರು ಅಪಘಾತ

Spread the love ರಾಯಚೂರು: ದೇವದುರ್ಗ ಶಾಸಕಿ ಜಿ. ಕರೆಮ್ಮಾ ನಾಯಕ್​ ತೆರಳುತ್ತಿದ್ದ ಕಾರು ಅಪಘಾತವಾಗಿದ್ದು, ಶಾಸಕಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ