ಹುಬ್ಬಳ್ಳಿ: ನಾನು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹಾಲು ಜೇನು ಇದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಇವರದ್ದು ಹಾಲು ಜೇನಲ್ಲ, ಅಲ್ಕೋಹಾಲ್ ಮತ್ತು ಲಿಂಬೆಹಣ್ಣಿನ ಸಂಬಂಧ. ಇವರಿಬ್ಬರ ನಡುವೆ ಅಧಿಕಾರಕ್ಕಾಗಿ ನಡೆದಿರುವ ಆಂತರಿಕ ಕಚ್ಚಾಟದಿಂದ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್ ರಾಜ್ಯಕ್ಕೆ ಬರುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಇವರಿಗೆ ರಾಹುಲ್ ಗಾಂಧಿ ಭೇಟಿಯಾಗಲು 3 ತಿಂಗಳಾದರೂ ಅವಕಾಶ ಸಿಗದಿರುವುದು ಪ್ರಜಾಪ್ರಭುತ್ವವೇ? ಗಾಂಧಿ ಕುಟುಂಬ ಒಂದರಲ್ಲೇ ಮೂವರು ಸಂಸದರಿರುವುದು ಕುಂಟುಂಬ ರಾಜಕಾರಣವಲ್ಲದೆ ಮತ್ತಿನ್ನೇನು? ಸಿದ್ದರಾಮಯ್ಯನವರೇ ಜನ ಇತಿಹಾಸ ಮರೆಯಲ್ಲ. ನೀವು ಹಿಂದೆ ಸೋನಿಯಾ, ರಾಜೀವ ಗಾಂಧಿ ವಿರುದ್ಧ ಏನು ಮಾತನಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ರಾಹುಲ್ ಕೇಂದ್ರದಲ್ಲಿ ಕಾಯಂ ನಿರುದ್ಯೋಗಿ ಆಗಿದ್ದಾರೆ. ಅವರು ಅಲ್ಲಿ ಬಲಿಷ್ಠವಾಗಿದ್ದರೆ ನಿಮ್ಮನ್ನು ಸಿಎಂ ಆಗಿ ಇರಲು ಬಿಡುತ್ತಿರಲಿಲ್ಲ ಎಂದರು.
Laxmi News 24×7