ಚಿಕ್ಕನಾಯಕನಹಳ್ಳಿ: ಕೋವಿಡ್ ವೈರಸ್ ಭಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕೋವಿಡ್ 19 ಕೇರ್‌ನಲ್ಲಿನ ಅವ್ಯವಸ್ಥೆಯ ಭಯ ಕೋವಿಡ್ ರೋಗಿಗಳಿಗೆ ನರಕಯಾ ತನೆ ನೀಡುತ್ತಿದೆ. ಕಣ್ಣು ಮುಚ್ಚದೆ ರಾತ್ರಿ ಕಳೆಯುವಂತಾಗಿದ್ದು, ಕೋವಿಡ್ ವೈರಸ್ ಜೊತೆ ಇತರ ಕಾಯಿಲೆ ಬಳುವಳಿಯಾಗಿ ಬರುವ ಲಕ್ಷಣವಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿನ ಕೋವಿಡ್ 19 ಕೇರ್‌ನಲ್ಲಿ ಸೌಕರ್ಯವೇ ಸರಿಯಿಲ್ಲ, ವೈದ್ಯಾಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕ್ವಾರಂಟೈನ್‌ನಲ್ಲಿರುವ ಕೋವಿಡ್ ಪಾಸಿಟಿವ್ ರೋಗಿಗಳು ವಿಡಿಯೋ ಮಾಡಿ ತಮ್ಮ ಆಕ್ರೋಶ
ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ 19 ಕೇರ್‌ನಲ್ಲಿ ಸ್ವತ್ಛತೆ, ದೀಪದ ವ್ಯವಸ್ಥೆ, ನೀರಿನ ಅಭಾವ ಸೇರಿದಂತೆ ಇತರೆ ಸಮಸ್ಯೆಗಳು ಕೋವಿಡ್ ಭಯಕ್ಕಿಂತ ಮಿಗಿಲಾಗಿದ್ದು.
ನಮ್ಮನ್ನು ಕ್ವಾರಂಟೈನ್‌ನಿಂದ ಮುಕ್ತಗೊಳಿಸಿ, ಇಲ್ಲೇ ಇದ್ದರೆ ವಿಚಿತ್ರ ಕಾಯಿಲೆಗಳು ನಮಗೆ ಹರಡುತ್ತದೆ, ಯಾವ ಪುರುಷಾರ್ಥಕ್ಕೆ ನಮ್ಮನ್ನು ಕೋಡಿ ಹಾಕಿದ್ದೀರಾ, ಇಲ್ಲಿ ಯಾವುದು ಸರಿ ಇಲ್ಲ ಎಂದು ಇಲ್ಲಿನ ಕೋವಿಡ್ ರೋಗಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲರಿಗೂ ಒಂದೇ ರೂಂ: ತಾಲೂಕು ಆಸ್ಪತ್ರೆ ಯಲ್ಲಿನ ಕೋವಿಡ್ 19 ಕೇರ್‌ನಲ್ಲಿ ಕೋವಿಡ್ ಪಾಸಿಟಿವ್ ಬಂದ ಪುರುಷ ಹಾಗೂ ಮಹಿಳಾ ರೋಗಿಗಳನ್ನು ಒಂದೇ ರೂಂನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಮಹಿಳಾ ರೋಗಿಗಳಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ. ನಮಗೆ ಪ್ರೈವೇಸಿ ಇಲ್ಲದಂತಾಗಿದೆ ಎಂದು ಮಹಿಳಾ ರೋಗಿಗಳು ಆರೋಪಿಸಿದ್ದಾರೆ.
ಟಾಯ್ಲೆಟ್‌ಗೂ ನೀರಿಲ್ಲ: ಕೋವಿಡ್ ಕೇರ್ ನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಎರಡು -ಮೂರು ದಿನಗಳು ಕಳೆದರು
ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ, ನೀರಿಲ್ಲದೆ ರೋಗಿಗಳು ಟಾಯ್ಲೆಟ್‌ಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ
ಲೈಟ್ ವ್ಯವಸ್ಥೆ ಇಲ್ಲ: ಕೋವಿಡ್ ಕೇರ್‌ನ್ನು ಅಧಿಕಾರಿಗಳು ಕಿಟಕಿ ಬಾಗಿಲುಗಳಿಂದ ನೋಡಿಕೊಂಡು ಹೋಗುತ್ತಾರೆ, ಕಿಟಕಿ,
ಬಾಗಿಲ ಒಳಗಿಂದ ಚೆನ್ನಾಗಿಯೇ ಕಾಣುತ್ತದೆ. ಆದರೆ ಪಿ.ಪಿ ಕಿಟ್ ಧರಿಸಿ ಒಳಗೆ ಬಂದು ನೋಡಿ ನರಕ ಯಾತನೆ ನಿಮಗೂ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಶೀಘ್ರ ಕೋವಿಡ್ ಕೇರ್ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದ್ದಾರೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??