Breaking News

ಬೆಳಗಾವಿ : ಧ್ವಜಾರೋಹಣದ ವೇಳೆ ಎಡವಟ್ಟು ಮಾಡಿಕೊಂಡ ಚಿಕ್ಕೋಡಿ ಉಪ ವಿಭಾಗಾಧಿಕಾರಿ.!

Spread the love

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಧ್ವಜಾರೋಹಣ ವೇಳೆ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ.

 

ಧ್ವಜಾರೋಹಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಲ್ಲದೆ, ತರಾತುರಿಯಲ್ಲಿ ಬೂಟು ಕಾಲಿನಲ್ಲೇ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ ಅಂಬೇಡ್ಕರ್ ಹಾಗೂ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ.

 

ಸಿಬ್ಬಂದಿಗಳು ಹೇಳಿದ ಬಳಿಕ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಶೂ ಬಿಚ್ಚಿದ್ದಾರೆ. ಶೂವನ್ನ ಸಿಬ್ಬಂದಿಗಳು ಕೈಯಿಂದ ತೆಗೆದು ಬೇರೆಡೆಗೆ ಇಟ್ಟಿದ್ದಾರೆ.

 

ಮಾಧವ ಗಿತ್ತೆ ಅವರು ಎಲ್ಲಾ ರಾಜಕೀಯ ಗಣ್ಯರು ಬಂದು ಕುಳಿತ ಬಳಿಕ 9:15 ಕ್ಕೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು ಎಂದು ತಿಳಿದು ಬಂದಿದೆ. ಎ.ಸಿ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ