Breaking News

ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕವಾಗಿ ವಾಗ್ದಾಳಿ ನಡೆಸಿದ ಸಿ.ಟಿ.ರವಿ

Spread the love

ಬೆಂಗಳೂರು: ಸಿ.ಟಿ.ರವಿ ಲೂಟಿ ರವಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡುವ ಬರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಯನ್ನು ಲೂಟಿ ರವಿ ಎಂದು ಕರೆಯುತ್ತಾರೆ. ಹಾಗಂತ ನಾನು ಹೇಳುತ್ತಿಲ್ಲ. ಜನ ಹೇಳುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಇವರೇನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ನನ್ನನ್ನು ಲೂಟಿ ರವಿ ಎಂದರೆ ಸಿದ್ದರಾಮಯ್ಯ ಅವರನ್ನು ಪೆದ್ದ ಅನ್ನಬೇಕಾ? ನಾನು ಲೂಟಿ ಮಾಡಿದ್ದರೆ ಜನ ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಇಷ್ಟಕ್ಕೇ ತಣ್ಣಗಾಗದ ಸಿ.ಟಿ.ರವಿ ಆಕ್ರೋಶ, ಲೂಟಿ ರವಿ ಎಂದು ನಾನು ಕರೆಯುತ್ತಿಲ್ಲ ಜನ ಕರೆಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಹಾಗದರೆ ನಾನೂ ಕೂಡ ಸಿದ್ದರಾಮಯ್ಯನವರಿಗೆ ಹೇಳಬಹುದು ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಕಚ್ಚಿ ಹರಕ ಎಂದು ಕರೆಯುತ್ತಾರೆ. ಇದನ್ನು ನಾನು ಹೇಳುತ್ತಿಲ್ಲ ಅಲ್ಲಿನ ಜನ ಹೇಳುತ್ತಾರೆ ಎಂದು ಹೇಳಿದರೆ ಅವರಿಗೆ ಹೇಗಾಗುತ್ತೆ ಎಂದು ಕಿಡಿಕಾರಿದ್ದಾರೆ.

 

ಸಮಾಜವಾದಿಗಳ ಮಜವಾದಿ ತನ ನೋಡುತ್ತಿದ್ದೇನೆ. ಸೆಂಟ್ ಹಾಕಿಕೊಂಡು ವಾಸನೆ ಮುಚ್ಚಿ ಹಾಕಲು ಆಗಲ್ಲ. ನಾನು ಸೂಕ್ಷ್ಮವಾಗಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಉತ್ತರ ಕೊಡುವವರು ಏನು ಕೊಡ್ತಾರೆ ನೋಡೋಣ ಎಂದು ಗುಡುಗಿದ್ದಾರೆ.


Spread the love

About Laxminews 24x7

Check Also

ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ.

Spread the love ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ. ಸಮಾಜದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ