Breaking News

ಚಿಕ್ಕಬಳ್ಳಾಪುರ: ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

Spread the love

ಚಿಕ್ಕಬಳ್ಳಾಪುರ: ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ರಸ್ತೆ ದಾಟಲು ಹೋಗಿ ಕೊಚ್ಚಿ ಹೋದ ಯುವಕ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕಮ್ಮಗುಟ್ಟನಹಳ್ಳಿ ವ್ಯಾಪ್ತಿಯ ನವಿಲುಗುರ್ಕಿಯಲ್ಲಿ ಈ ಘಟನೆ ನಡೆದಿದೆ.

ಭಾರೀ ಮಳೆ ಕಾರಣ ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿತ್ತು. ಈ ವೇಳೆ ಬೈಕ್ ಮೂಲಕ ಯುವಕ ರಸ್ತೆ ದಾಟಲು ಮುಂದಾಗಿದ್ದು ಈ ವೇಳೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನ ಸ್ಥಳೀಯರು ಟ್ರ್ಯಾಕ್ಟರ್​ ಮೂಲಕ ರಕ್ಷಣೆ ಮಾಡಿದ್ದಾರೆ. ಮಳೆಗೆ ತುಂಬಿ ಹರಿಯುತ್ತಿದ್ದ ರಸ್ತೆಯಲ್ಲಿ ಯಾರು ಸಂಚರಿಸದಂತೆ ಸ್ಥಳೀಯರು ಎಚ್ಚರಿಕೆ ನೀಡಿದ್ರು. ಇದನ್ನು ಲೆಕ್ಕಿಸದೇ ರಸ್ತೆ ದಾಟಲು ಮುಂದಾದಾಗ ಈ ಅವಘಡ ಸಂಭವಿಸಿದೆ.

ಕೋಡಿ ಬಿದ್ದ ಕೆರೆ , ವಾಹನ ಸವಾರರು ಹೈರಾಣು

ಭಾರೀ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಅಮಾನಿ ಬೈರಸಾಗರ ಕೆರೆ ತುಂಬಿ ಕೋಡಿ ಬಿದ್ದಿದೆ. ಸದ್ಯ ಕೆರೆ ಕೋಡಿ ಬಿದ್ದ ಪರಿಣಾಮ ಗುಡಿಬಂಡೆ – ಚಿಕ್ಕಬಳ್ಳಾಪುರ ಮಾರ್ಗ ಬಂದ್ ಆಗಿದೆ . ಇನ್ನು ರಸ್ತೆಯ ಮೇಲೆ ನಾಲ್ಕು ಅಡಿಗೂ ಎತ್ತರಕ್ಕೆ ನೀರು ಹರಿಯುತ್ತಿದ್ದು, ರಸ್ತೆ ದಾಟಲು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಕೊನೆಗೂ ರಸ್ತೆ ದಾಟಲಾಗದೆ ವಾಹನ ಸವಾರರು ವಾಪಸ್ ತೆರಳುತ್ತಿದ್ದಾರೆ.

 


Spread the love

About Laxminews 24x7

Check Also

SIR ಬಗ್ಗೆ ಚುನಾವಣಾ ಆಯೋಗದಲ್ಲಿ ಭಿನ್ನಮತವಿಲ್ಲ, ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದ ಕೂಡಿವೆ: ಆಯೋಗ ಸ್ಪಷ್ಟನೆ

Spread the loveನವದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ  ಬಗ್ಗೆ ಚುನಾವಣಾ ಆಯೋಗದಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ