Breaking News

ಬೆಳಗಾವಿ:ಡಿಕೆಶಿಗೆ ಶುಭಕಾಲ ಬರಲಿದೆ: ಚನ್ನರಾಜ ಹಟ್ಟಿಹೊಳಿ

Spread the love

ಬೆಳಗಾವಿ: ಸಂಕಷ್ಟದ ಸಮಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿದು ಸಂಘಟನೆ ಮೂಲಕ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪಾತ್ರ ದೊಡ್ಡದಿದೆ. ಹೀಗಾಗಿ ಅವರು ಮುಖ್ಯಮಂತ್ರಿ ಆಗಲಿ ಎಂಬುದು ಕಾರ್ಯಕರ್ತರ ಬಯಕೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ  ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪ್ರತಿಯೊಬ್ಬರ ಶ್ರಮವಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸಿ 136 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ. ಡಿ.ಕೆ.ಶಿವಕುಮಾರಗೆ ಶುಭಕಾಲ ಹತ್ತಿರ ಬಂದಿದ್ದು, ಪಕ್ಷಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿರುವ ಅವರು ಪಕ್ಷ ಮುಜುಗರಕ್ಕೆ ಒಳಗಾಗುವಂತಹ ಕೆಲಸ ಮಾಡುವುದಿಲ್ಲ. ರೆಸಾರ್ಟ್ ರಾಜಕಾರಣ, ಗುಂಪುಗಾರಿಕೆ ಮನೋಭಾವ ಅವರಲ್ಲಿ ಇಲ್ಲವೇ ಇಲ್ಲ.
ಸತ್ಯಕ್ಕೆ ದೂರವಾದ ವದಂತಿಗಳಿಗೆ ಆದ್ಯತೆ ನೀಡುವ ಅಗತ್ಯವಿಲ್ಲ ಎಂದರು. ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿರುವ ಹಿನ್ನೆಲೆ ರಾಜ್ಯಾದ್ಯಂತ 100 ಜಿಲ್ಲಾ ಭವನ ನಿರ್ಮಾಣ, ಪಕ್ಷ ಸಂಘಟನೆ ಸೇರಿ ವಿವಿಧ ವಿಷಯ ಕುರಿತು ಚರ್ಚಿಸಲು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸದಿರಿ ಎಂದರು.

Spread the love

About Laxminews 24x7

Check Also

ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ: ಅಶೋಕ್‌ ಪಟ್ಟಣ್

Spread the loveಕೊಪ್ಪಳ: ಸಿದ್ದರಾಮಯ್ಯ  ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ ಇದೆ ಎಂದು ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ