ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಸತತ ಮಳೆಯಿಂದಾಗಿ ನಗರದ ಹೊರವಲಯದ ಬಸವನ ಕುಡಚಿಯ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ, ಜನರು ಪರದಾಡುವಂತಾಯಿತು. ಕೆಎಲ್ಇ ಸಂಕಲ್ಪ ವೆಲ್ನೆಸ್ ಸೆಂಟರ್ಗೆ ಸಹ ನೀರು ನುಗ್ಗಿದ ಪರಿಣಾಮ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳಿಗೆ ಹಾನಿಯಾಯಿತು. ಈ ನೀರು ಹೊರಹಾಕಲು ಮಹಾನಗರ ಪಾಲಿಕೆಯವರು ಬುಧವಾರ ಬೆಳಿಗ್ಗೆಯಿಂದ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದು ಕಂಡುಬಂತು. ‘ವಾರದಿಂದ ನಮ್ಮಲ್ಲಿ ಸತತ ಮಳೆಯಾಗುತ್ತಿದೆ. …
Read More »ಅಂಗನವಾಡಿಗೆ ನೇಮಕ: ಅರ್ಜಿ ಆಹ್ವಾನ
ಖಾನಾಪುರ: ತಾಲ್ಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇರುವ ನಾಲ್ವರು ಅಂಗನವಾಡಿ ಕಾರ್ಯಕರ್ತೆಯರು ಮತ್ತು 21 ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಆನ್-ಲೈನ್ ಮೂಲಕವೇ ಸಲ್ಲಿಸಬೇಕು. ಆ.11 ಕೊನೆಯ ದಿನ. ಖಾಲಿ ಇರುವ ಹುದ್ದೆಗಳ ವಿವರ, ಮೀಸಲಾತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗೆ ಪಟ್ಟಣದ ಜಾಂಬೋಟಿ ರಸ್ತೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.
Read More »ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ನನ್ನನ್ನು ಅಕ್ರಮವಾಗಿ ಸಿಲುಕಿಸುವ ಮೂಲಕ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಆರೋಪ ಮಾಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಅವ್ಯವಹಾರದ ತನಿಖೆ ವೇಳೆ ED ಅಕ್ರಮ ಎಸಗಿಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರು ಧರಣಿ ನಡೆಸಿದರು. …
Read More »ಚಿಕ್ಕೋಡಿ: ಕನ್ನಡ ನಾಮಫಲಕ ಅಳವಡಿಸಲು ಒತ್ತಾಯ
ಚಿಕ್ಕೋಡಿ: ತಾಲ್ಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ಭಾಷೆಯ ಫಲಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. ತಾಲ್ಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳ ಮೇಲೆ ಅನ್ಯ ಭಾಷೆಯ ನಾಮ ಫಲಕಗಳೇ ರಾರಾಜಿಸುತ್ತಿದ್ದು, ಶೇ 60ರಷ್ಟು ಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದರೂ ಅಂಗಡಿಗಳ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳ ಮುಂದಿರುವ ಫಲಕಗಳಲ್ಲಿ ಕನ್ನಡ …
Read More »ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ: ಕಾಣದ ಸಂಭ್ರಮ
ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ವೀರರಾಣಿ ಕಿತ್ತೂರು ಚನ್ನಮ್ಮ ತಮ್ಮ ಸೈನ್ಯದೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಘಳಿಗೆಗೆ ಇದೇ ವರ್ಷ ಅಕ್ಟೋಬರ್ 23ಕ್ಕೆ 200 ವರ್ಷ ಪೂರ್ಣಗೊಳ್ಳಲಿದೆ. ಈ ಮಹತ್ವದ ಘಟ್ಟಕ್ಕೆ ಪೂರಕವಾಗಿ ಸಂಭ್ರಮಾಚರಣೆ ಕಂಡು ಬಂದಿಲ್ಲ. ಅದಕ್ಕೆ ಸಿದ್ಧತೆಯೂ ನಡೆದಿಲ್ಲ. ‘ಪ್ರತಿ ವರ್ಷ ಅಕ್ಟೋಬರ್ 23ರಿಂದ 25ರವರೆಗೆ ಉತ್ಸವ ನಡೆಯುತ್ತದೆ. ಜಿಲ್ಲಾಡಳಿತ ಅದೇ ತಿಂಗಳು ತರಾತುರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ, ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಿ ಸುಮ್ಮನಾಗುತ್ತದೆ. ಆದರೆ, ಹೀಗೆ …
Read More »ಗುಡ್ಡ ಕುಸಿತ: ಗೋವಾ-ಕರ್ನಾಟಕ ಸಂಚಾರ ಅಸ್ತವ್ಯಸ್ತ
ಪಣಜಿ: ಭಾರಿ ಮಳೆಯಿಂದಾಗಿ ಗುರುವಾರ ನಸುಕಿ ಜಾವ ಗೋವಾದ ಘಾಟ್ ವಿಭಾಗದಲ್ಲಿ ಗುಡ್ಡ ಕುಸಿದಿದ್ದು, ಬೃಹತ್ ಮಣ್ಣಿನ ರಾಶಿ ರಸ್ತೆಗೆ ಬಿದ್ದಿದೆ. ಪರಿಣಾಮ ಗೋವಾ-ಕರ್ನಾಟಕ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಗೋವಾದ ದಕ್ಷಿಣ ಗಡಿಯಲ್ಲಿರುವ ಅನಮೋಡ್ ಘಾಟ್ ಪ್ರದೇಶದ ಶ್ರೀ ದೂಧ್ಸಾಗರ್ ದೇವಸ್ಥಾನದ ಬಳಿ ಗುಡ್ಡ ಕುಸಿದಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯಿಂದ ಅದನ್ನು ತೆರವುಗೊಳಿಸುವ ಕಾರ್ಯ ಮುಂದುವರಿಯುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. …
Read More »ಶಾಲೆಯಲ್ಲೇ ಹೆಡ್ ಮಾಸ್ಟರ್-ಶಿಕ್ಷಕಿಯ ಕಾಮದಾಟ!
ವಿದ್ಯೆ ಕಲಿಸುವ ಶಾಲೆಯನ್ನು ದೇಗುಲ ಅಂತಾನೂ ಕರೀತಾರೆ. ನಮ್ಮ ತಲೆಯಲ್ಲಿ ಜ್ಞಾನದ ಬೀಜ ಬಿತ್ತಿ, ಅಕ್ಷರ ಕಲಿಸುವ ಶಿಕ್ಷಕರು ಗುರು ಸಮಾನರು. ಅಂತಹ ಶಿಕ್ಷಣವನ್ನು ಬೋಧಿಸಲು ಇರುವ ಗೂಡು ಅಂದರೆ ಶಾಲೆ ದೇಗುಲಕ್ಕೆ ಸಮಾನ ಅನ್ನೋ ಮಾತಿದೆ. ಆದರೆ ಗುರು ಸಮಾನರಾದ ಶಿಕ್ಷಕರು ದೇವಾಲಯಕ್ಕೆ ಸಮಾನವಾದ ಶಾಲೆಯಲ್ಲೇ ಮಾಡಬಾರದ ಕೆಲಸ ಮಾಡಿ ತಗ್ಲಾಕ್ಕೊಂಡಿರುವ ಘಟನೆ ನಡೆದಿದೆ. . ವಿದ್ಯೆ ಬೋಧಿಸುವ ಶಿಕ್ಷಕರು ಶಾಲಾ ಕೊಠಡಿಯಲ್ಲೇ ಪ್ರಣಯದಲ್ಲಿ ಮುಳುಗಿರುವ ವಿಡಿಯೋ ಸಾಮಾಜಿಕ …
Read More »ವಾಲ್ಮೀಕಿ, ಮುಡಾ ಆಯ್ತು ಈಗ ಅಪೆಕ್ಸ್ ಬ್ಯಾಂಕ್ ನಲ್ಲಿ 2000 ಕೋಟಿ ರೂ.ಗೂ ಹೆಚ್ಚು ಹಗರಣ!
ವಾಲ್ಮೀಕಿ, ಮುಡಾ ಆಯ್ತು ಈಗ ಅಪೆಕ್ಸ್ ಬ್ಯಾಂಕ್ ನಲ್ಲಿ 2000 ಕೋಟಿ ರೂ.ಗೂ ಹೆಚ್ಚು ಹಗರಣ! ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ಹಗರಣವಾಯ್ತು, ಮುಡಾದಲ್ಲಿ ಹಗರಣವಾಯ್ತು ಈಗ ಅಪೆಕ್ಸ್ ಬ್ಯಾಂಕ್ ನಲ್ಲಿ ಸಾವಿರಾರು ಕೋಟಿ ರೂ.ಹಗರಣ ನಡೆದಿದೆ ಎಂದು ರಾಜ್ಯ ಬಿಜೆಪಿ ಮತ್ತೊಂದು ಗಂಭೀರ ಆರೋಪ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಗರಣಗಳ ಸರಣಿ ಧಾರಾವಾಹಿಯೇ ಕಾಂಗ್ರೆಸ್ ಸರ್ಕಾರ. ವಾಲ್ಮೀಕಿ ನಿಗಮದಲ್ಲಿ ಹಗರಣವಾಯ್ತು, ಮುಡಾದಲ್ಲಿ ಹಗರಣವಾಯ್ತು, …
Read More »ವರ್ಗಾವಣೆ ನಿಯಮ ಬದಲು ಸರ್ಕಾರದ ವಿರುದ್ಧ ಖಾಕಿ ಕೆಂಡ!
ಬೆಂಗಳೂರು ;ಪೊಲೀಸ್ ಕಾನ್ಸ್ಟೆಬಲ್ಗಳ ಅಂತರ ಜಿಲ್ಲಾ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವರ್ಗಾವಣೆ ಬಯಸುವವರಿಗೆ ಈಗಿರುವ 7 ವರ್ಷ ಸೇವಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನು 10 ವರ್ಷ ಅವಧಿಗೆ ಹೆಚ್ಚಳ ಮಾಡುವ ಸಿದ್ಧತೆ ನಡೆಸಿರುವ ಮಾಹಿತಿ ಹಿನ್ನೆಲೆಯಲ್ಲಿ ನಾಲ್ಕು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪೊಲೀಸ್ ಕಾನ್ಸ್ಟೆಬಲ್ಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬ ಸಮೇತ ಪ್ರತಿಭಟನೆಗಿಳಿಯುವ ಎಚ್ಚರಿಕೆ ಕೊಟ್ಟಿದ್ದಾರೆ. ಮೊದಲಿಗೆ ಎರಡೂವರೆ ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಿದರೆ ಕಾನ್ಸ್ಟೆಬಲ್ಗಳನ್ನು …
Read More »ಕಿಚ್ಚ ಸುದೀಪ್ ರೆಸ್ಟೋರೆಂಟ್ ಮೇಲೆ ದಾಳಿ
ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಒಡೆತನದ ತೆಲಂಗಾಣದಲ್ಲಿರುವ ರೆಸ್ಟೋರೆಂಟ್ ನಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ತೆಲಂಗಾಣದ ಆಹಾರ ಮತ್ತು ಸುರಕ್ಷತೆ ಆಯುಕ್ತರ ನೇತೃತ್ವದ ಕಾರ್ಯಪಡೆ ತೆಲಂಗಾಣದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿದ್ದು, ಸಿಕಂದರಬಾದ್ ನಲ್ಲಿರುವ ಕಿಚ್ಚ ಸುದೀಪ್ ಒಡೆತನದ `ವಿವಾಹ ಭೋಜನಮುಡು’ ರೆಸ್ಟೋರೆಂಟ್ ನಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ ಇದು ಕನ್ನಡದ ಖ್ಯಾತ ನಟ ಕಿಚ್ಚ …
Read More »
Laxmi News 24×7