ಗಂಡನ ಕುಡಿತ ಬಿಡಿಸಲು ಹೆಂಡತಿ ಪರದಾಡುವುದನ್ನ ನೋಡಿದ್ದೇವೆ. ಆದರೆ, ಇಲ್ಲಿ ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ರಿಹ್ಯಾಬ್ ಕೇಂದ್ರಕ್ಕೆ ಪತಿಯೇ ಸೇರಿಸಿದ್ದು, ದುರಂತ ಎಂಬಂತೆ ರಿಹ್ಯಾಬ್ ಕೇಂದ್ರದ ಕೆಲಸಗಾರನ ಜೊತೆಯೇ ಹೆಂಡತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ಬೆಂಗಳೂರು, ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ಪತ್ನಿಯನ್ನ ರಿಹ್ಯಾಬ್ ಕೇಂದ್ರಕ್ಕೆ ಪತಿ ಸೇರಿಸಿದ್ದ. ಆದರೆ, ರಿಹ್ಯಾಬ್ ಕೇಂದ್ರದ …
Read More »ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ,C.M.೨೬ ರಂದು ಕಳ್ಳಿಗುದ್ದಿ, ಕೌಜಲಗಿ, ಯಾದವಾಡ ಮತ್ತು ಕಲ್ಲೊಳಿಗೆ ಆಗಮನ.
ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ಧರಾಮಯ್ಯ ೨೬ ರಂದು ಕಳ್ಳಿಗುದ್ದಿ, ಕೌಜಲಗಿ, ಯಾದವಾಡ ಮತ್ತು ಕಲ್ಲೊಳಿಗೆ ಆಗಮನ. ಸಿಎಂ ಸಿದ್ಧರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕೌಜಲಗಿಯಲ್ಲಿ ಭರದ ಸಿದ್ಧತೆ. ಗೋಕಾಕ- ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬರುವ ಸೋಮವಾರದಂದು ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಪ್ರವಾಸ ಕೈಗೊಂಡಿದ್ದು, ನೂತನವಾಗಿ ನಿರ್ಮಾಣಗೊಂಡಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರದಂದು ಬೆಂಗಳೂರಿನಿAದ ವಿಶೇಷ ವಿಮಾಣದ ಮೂಲಕ ಮ.೧೨.೧೫ ಗಂಟೆಗೆ ಬೆಳಗಾವಿಗೆ …
Read More »ಅರಭಾವಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ರೇಣುಕಾ ಸಂಜು ಮಾದರ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜಶ್ರೀ ಅಪ್ಪಯ್ಯ ಗಂಗನ್ನವರ ಅವರು ಅವಿರೋಧವಾಗಿ ಅಯ್ಕೆ
ಮೂಡಲಗಿ- ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ರೇಣುಕಾ ಸಂಜು ಮಾದರ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜಶ್ರೀ ಅಪ್ಪಯ್ಯ ಗಂಗನ್ನವರ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ಸಭಾ ಭವನದಲ್ಲಿ ಜರುಗಿದ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಿದ್ದರಿಂದ ಉಭಯ …
Read More »ಹೆಂಡ್ತಿ ರೀಲ್ಸ್ ಹುಚ್ಚಾಟ ನೋಡಲಾಗದೇ ಹೊಡೆದು ಕೊಂದ ಗಂಡ
ಉಡುಪಿ, (ಆಗಸ್ಟ್ 23): ಸೋಶಿಯಲ್ ಮೀಡಿಯಾ ಮಿತವಾಗಿ ಬಳಸಿದ್ರೆ ಒಳ್ಳೆಯದು. ಅದರ ಬಳಕೆ ಅತಿಯಾದ್ರೆ ಸಂಸಾರದಲ್ಲಿ ಯಾವ ರೀತಿ ವಿರಸ ಮೂಡಿ, ಅದು ಮಹಾ ಅನಾಹುತಕ್ಕೆ ಕಾರಣ ಆಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಉಡುಪಿಯಲ್ಲಿ ಗಂಡನೊಬ್ಬ ಹೆಂಡತಿಯನ್ನು ಹೊಡೆದು ಕೊಂದಿದ್ದಾನೆ. ಕಾರಣ ಆಕೆಯ ಸೋಶಿಯಲ್ ಮೀಡಿಯಾ ಹುಚ್ಚು. ಅದರಲ್ಲೂ ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಆಕೆ ಹೆಚ್ಚು ಸಮಯ ಕಳೆಯುತ್ತಿದ್ದಳು ಎನ್ನುವ ಕ್ಷುಲ್ಲಕ ಕಾರಣ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕೇವಲ 16 ಫಾಲೋವರ್ಸ್ ಹೊಂದಿದ್ದ ಪತ್ನಿ ರೀಲ್ಸ್ …
Read More »ದೌರ್ಜನ್ಯ ತಡೆಯಲು ಸಮನ್ವಯದಿಂದ ಕೆಲಸ ಮಾಡಿ: ಡಾ.ನಾಗಲಕ್ಷ್ಮಿ ಚೌಧರಿ
ಬೆಳಗಾವಿ: ‘ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತಕ್ಷಣವೇ ಸ್ಪಂದಿಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ದೌರ್ಜನ್ಯಕ್ಕೆ ಸಂಬಂಧಿಸಿ ಸವದತ್ತಿ ತಾಲ್ಲೂಕಿನಲ್ಲಿ ಹೆಚ್ಚಿನ ದೂರು ಬಂದಿದ್ದವು. ಹಾಗಾಗಿ ಅಲ್ಲಿಗೆ ಭೇಟಿ …
Read More »ಒಕ್ಕಲೆಬ್ಬಿಸಲು ಬಂದ ಅರಣ್ಯಾಧಿಕಾರಿಗಳು: ವಿಷದ ಬಾಟಲಿ ಹಿಡಿದು ಕುಳಿತ ಮಹಿಳೆಯರು
ಒಕ್ಕಲೆಬ್ಬಿಸಲು ಬಂದ ಅರಣ್ಯಾಧಿಕಾರಿಗಳು: ವಿಷದ ಬಾಟಲಿ ಹಿಡಿದು ಕುಳಿತ ಮಹಿಳೆಯರು ಚನ್ನಮ್ಮನ ಕಿತ್ತೂರು: ತೆನೆಗಟ್ಟಿರುವ ಗೋವಿನ ಜೋಳ, ಎದೆ ಎತ್ತರ ಬೆಳೆದು ನಿಂತಿರುವ ಕಬ್ಬು ಬೆಳೆ ನಾಶ ಮಾಡಿ ಒಕ್ಕಲೆಬ್ಬಿಸಲು ಆಗಮಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ತಾಲ್ಲೂಕಿನ ದೇವಗಾಂವ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೆಲವು ಮಹಿಳೆಯರು ವಿಷದ ಬಾಟಲಿಗಳನ್ನೂ ಹಿಡಿದು ಕುಳಿತರು. 12ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳೊಂದಿಗೆ ಬಂದಿದ್ದ ಅರಣ್ಯಾಧಿಕಾರಿಗಳನ್ನು ಜಮೀನಿನ ಬಳಿ ತಡೆದರು. ಪೊಲೀಸ್ ಅಧಿಕಾರಿಗಳು ಸಂಧಾನಕ್ಕೆ ಯತ್ನಿಸಿದರು. ಬೆಳೆ …
Read More »ಮಂಡ್ಯದಲ್ಲಿ ಸಿಡಿದೆದ್ದ ಕೈ ಕಾರ್ಯಕರ್ತರು; ರಾಜ್ಯಪಾಲರ ಪ್ರತಿಕೃತಿ ದಹಿಸಿ ಆಕ್ರೋಶ
ಮಂಡ್ಯ : ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಮಂಗಳವಾರ ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮದ್ದೂರು ಪಟ್ಟಣದ ಕೊಲ್ಲಿ ವೃತ್ತದಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ತಾಲೂಕು ಕಚೇರಿ ಮುಂಭಾಗ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ …
Read More »ಸಚಿವ ಎಚ್‌ಡಿಕೆ ಮತ್ತು ಸಂಬಂಧಿಕರಿಂದ ಗೋಮಾಳ ಜಾಗ ಕಬಳಿಕೆ; ಹಿರೇಮಠ ಆರೋಪ
ಧಾರವಾಡ: ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಗೋಮಾಳದ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಆರೋಪಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ ಹಾಗೂ ಸಂಬಂಧಿಕ ಡಿ.ಸಿ.ತಮ್ಮಣ್ಣ ಕುಟುಂಬದವರು ಜಾಗವನ್ನು ಕಬಳಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಂದಾಯ ಇಲಾಖೆಯ ಉನ್ನತಧಿಕಾರಿ 2014 ಆಗಸ್ಟ್ …
Read More »ತಾಯಿ- ಮಕ್ಕಳಿಗೆ ಇನ್ನೂ ಸಿಗದ ಆಸ್ಪತ್ರೆಗಳು
ಬೆಳಗಾವಿ: ಜಿಲ್ಲೆಗೆ ಮಂಜೂರಾದ ಒಟ್ಟು ಏಳು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಇನ್ನೂ ಎರಡು ಆಸ್ಪತ್ರೆಗಳು ಕಾರ್ಯಾರಂಭ ಮಾಡಿಲ್ಲ. ಚಿಕ್ಕೋಡಿ ಹಾಗೂ ಖಾನಾಪುರದದಲ್ಲಿ ಮೂಲಸೌಕರ್ಯಗಳು ಸಿದ್ಧಗೊಂಡರೂ ಸಿಬ್ಬಂದಿ ನೇಮಕ ಹಾಗೂ ಸಣ್ಣಪುಟ್ಟ ಕೆಲಸಗಳಿಂದಾಗಿ ಇನ್ನೂ ಜನರ ಉಪಯೋಗಕ್ಕೆ ಬಂದಿಲ್ಲ. ಉಳಿದಂತೆ, ಗೋಕಾಕದಲ್ಲಿ 100 ಬೆಡ್, ಒಂಟಮೂರಿಯಲ್ಲಿ 30 ಬೆಡ್, ನಿಪ್ಪಾಣಿ 30 ಬೆಡ್, ಸವದತ್ತಿ 60 ಬೆಡ್, ಬೈಲಹೊಂಗಲ 100 ಬೆಡ್‌ನ ಆಸ್ಪತ್ರೆಗಳು ಕೆಲಸ ಆರಂಭಿಸಿವೆ. ಚಿಕ್ಕೋಡಿಯಲ್ಲಿ 100 ಹಾಸಿಗೆ …
Read More »ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ
ಬೆಳಗಾವಿ: ಯಾವುದೇ ಸೂಚನೆಯನ್ನು ನೀಡದೆ ಬರುವ ಜವರಾಯನ ಅಟ್ಟಹಾಸಕ್ಕೆ ಮಧ್ಯಮ ವಯಸ್ಸಿನವರ ಪ್ರಾಣಪಕ್ಷಿ ಹಾರಿಹೋಗುತ್ತಿದೆ. ಬದುಕು ಹೇಗೆಲ್ಲ ಅಂತ್ಯವಾಗುತ್ತೆ ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಹೃದಯವು ಯಾವ ಕ್ಷಣದಲ್ಲಿ ಕೈಕೊಡುತ್ತೆ ಎಂಬುದು ಊಹಿಸಲು ಆಗುತ್ತಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ (Heart Attack) ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ …
Read More »