Breaking News
Home / Uncategorized (page 77)

Uncategorized

ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಸದಲಗಾ ಪಟ್ಟಣದ ಬಳಿ ದೂಧಗಂಗಾ ನದಿಗೆ ಸ್ನಾನಕ್ಕೆ ತೆರಳಿದ್ದ ಮಹಾದೇವ ಪುನ್ನಪ್ಪ ಖುರೆ (72) ಎಂಬುವರು ಮೊಸಳೆ ದಾಳಿಗೆ ಸಿಲುಕಿ, ಮೃತಪಟ್ಟಿದ್ದಾರೆ. ಅವರು ಈಜುತಿದ್ದ ವೇಳೆ ಕಾಲನ್ನು ಮೊಸಳೆ ಎಳೆದೊಯ್ಯಿತು. ಅವರ ಮೃತದೇಹ ಪತ್ತೆಯಾಗಿದೆ ಎಂದು ಸದಲಗಾ ಠಾಣೆ ಪೊಲೀಸರು ತಿಳಿಸಿದ್ದಾರೆ.

Read More »

ಭಾವೈಕ್ಯದ ಸಾವಳಗಿ ಜಾತ್ರೆಗೆ ಸಾಂಸ್ಕೃತಿಕ ಮೆರಗು

ಮೂಡಲಗಿ: ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಗೋಕಾಕ ತಾಲ್ಲೂಕಿನ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆ 9 ದಿನಗಳ ಕಾಲ ವೈಭವದಿಂದ ನೆರವೇರಿತು. ಹಿಂದೂ-ಮುಸ್ಲಿಮರು ಶ್ರದ್ಧೆಯಿಂದ ಪಾಲ್ಗೊಂಡು, ಸಾಮರಸ್ಯದ ಸಂದೇಶ ಸಾರಿದರು. ಜಾತ್ರೆ ಅಂಗವಾಗಿ ತಳಿರು-ತೋರಣಗಳಿಂದ ಮಠ ಅಲಂಕೃತಗೊಂಡಿತ್ತು. ಆವರಣದ ತುಂಬೆಲ್ಲ ರಂಗೋಲಿ ಚಿತ್ತಾರ ಅರಳಿತ್ತು. ಜಾನಪದ, ವಚನ ಸಾಹಿತ್ಯ, ಸಂಸ್ಕಾರ ಮತ್ತು ಸಂಸ್ಕೃತಿ, ಆರೋಗ್ಯದ ಸೂತ್ರಗಳು, ದೇಶಭಕ್ತಿ, ಸರ್ವಧರ್ಮಗಳ ಸಾಮರಸ್ಯ ಮತ್ತಿತರ ವೈವಿಧ್ಯಮಯವಾದ ವಿಷಯಗಳ ಕುರಿತು ಪ್ರತಿದಿನ ವಿದ್ವಾಂಸರು ಉಪನ್ಯಾಸ ನೀಡಿ, ಗ್ರಾಮೀಣ …

Read More »

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಪ್ರೀತಂಗೌಡ ಆಪ್ತರು ಎಸ್​ಐಟಿ ವಶಕ್ಕೆ!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ವಿಶೇಷ ತನಿಖಾ ಅಧಿಕಾರಿಗಳು ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್​ ಮತ್ತು ಕಚೇರಿಯ ಸಿಬ್ಬಂದಿ ಚೇತನ್​​ನನ್ನು ವಶಕ್ಕೆ ಪಡೆದುಕೊಂಡು ಹಾಸನದ ಸೆನ್ ಠಾಣೆಯಲ್ಲಿ ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. …

Read More »

ಗಡಿಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ತತ್ತರಿಸಿದ ಬಾಳೆ ಬೆಳೆಗಾರರು

ಚಾಮರಾಜನಗರ, ಮೇ, 12: ಗಡಿಜಿಲ್ಲೆ ಚಾಮರಾಜನಗರದಲ್ಲಿ ಸುರಿದ ಮಳೆಗೆ ಜನರು ಹರ್ಷಗೊಂಡಿದ್ದರೆ, ಬಾಳೆ ಬೆಳೆಗಾರರು ಮಾತ್ರ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ (ಮೇ 11) ಸುರಿದ ಬಿರುಗಾಳಿ ಮಳೆಗೆ ಹತ್ತಾರು ಸಾವಿರ ಬಾಳೆ ಗಿಡಗಳು ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ತಣ್ಣೀರೆರಚಿದಂತಾಗಿದೆ. ಚಾಮರಾಜನಗರ ತಾಲೂಕಿನ ದೇವರಾಜಪುರ, ಬ್ಯಾಡಮೂಡ್ಲು, ಉತ್ತುವಳ್ಳಿ, ದೊಡ್ಡಮೋಳೆ, ಡೊಳ್ಳಿಪುರ ಸೇರಿದಂತೆ ಹತ್ತಾರು ಊರುಗಳಲ್ಲಿ ಕಟಾವಿಗೆ ಬಂದಿದ್ದ ನೂರಾರು ಹೆಕ್ಟೇರ್‌ ಬಾಳೆ ನೆಲಕಚ್ಚಿದ್ದು, …

Read More »

ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

ಬೆಳಗಾವಿ: ಗೋವಾದಿಂದ ಆಂಧ್ರಪ್ರದೇಶದ ಕ್ಕೆ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಮದ್ಯವನ್ನು ಯಮಕನಮರಡಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಮಹಾರಾಷ್ಟ್ರದ ಸಂತೋಷ ಹಲಸೆ ಹಾಗೂ ಸದಾಶಿವ ಗೇರಡೆ ಎಂದು ತಿಳಿದು ಬಂದಿದೆ. ಗೋವಾದಿಂದ ಆಂಧ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಯಮಕನಮರಡಿ ಪೊಲೀಸರು ತಡೆದು 28 ಲಕ್ಷ ಮೌಲ್ಯದ 16848 ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಲಾರಿಯಲ್ಲಿ ಹಾರ್ಡ್‌ವೇರ್ ಸಾಮಗ್ರಿಗಳಿವೆ ಎಂದು ಸುಳ್ಳು ದಾಖಲೆ ತೋರಿಸಿ ಸಾಗಾಟ ಮಾಡುತ್ತಿದ್ದರು …

Read More »

ಟಯರ್‌ ಒಡೆದು ಕ್ರೂಸರ್‌ ಪಲ್ಟಿಮೂವರ ದುರ್ಮರಣ

ಸಂಬರಗಿ: ಹಿಂಬದಿಯ ಟಯರ್‌ ಒಡೆದ ಕಾರಣ ಕ್ರೂಸರ್‌ ಪಲ್ಟಿಯಾಗಿ ಮೂವರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜತ್ತ-ಸಾಂಗೋಲಾ ರಾಜ್ಯ ಹೆದ್ದಾರಿಯ ಸೋನಂದ್‌ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಾಳಿಗೆರೆ ಗ್ರಾಮದ ಗೀತಾ ರವೀಂದ್ರ ದೊಡಮನಿ (36), ಮಹಾದೇವಿ ಶ್ರೀಶೈಲ ಚೌಗಲಾ (40) ಹಾಗೂ ಮಲಾಬಾದ ಗ್ರಾಮದ ಕಸ್ತೂರಿ ಶಂಕರ ಭಿರಡಿ (50) ಮೃತಪಟ್ಟವರು. ಬರಗಾಲ ಹಿನ್ನೆಲೆಯಲ್ಲಿ ಗಡಿಗ್ರಾಮದ ಜನರು ನಿತ್ಯ ದ್ರಾಕ್ಷಿ ತೋಟದಲ್ಲಿ ಕೆಲಸಕ್ಕೆಂದು ಮಹಾರಾಷ್ಟ್ರದ …

Read More »

ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

ಬೆಳಗಾವಿ: ಬಿಸಿಲಿನಿಂದ ಬಸವಳಿದಿದ್ದ ಬೆಳಗಾವಿ ಜನತೆಗೆ ಶನಿವಾರ ಮಳೆರಾಯ ತಂಪೆರೆದಿದ್ದು, ಮಳೆ ಆಗಮನದಿಂದ ಜನರು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಬರದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆಗಮನದಿಂದ ಸಾರ್ವಜನಿಕರು ಸಮಾಧಾನವಾಗಿದ್ದಾರೆ. ಭಾರೀ ಮಳೆ ಆಗಮನದಿಂದ ಇಳೆ ತಂಪಾಗಿದ್ದು, ರೈತರ ಮೊಗದಲ್ಲಿ ಸಂತಸವಾಗಿದೆ. ಈ ವರ್ಷದ ಅತ್ಯಂತ ಜೋರಾದ ಮಳೆ ಸುರಿದಿದೆ. ಮಧ್ಯಾಹ್ನ 4 ಗಂಟೆ ನಂತರ ನಗರದಲ್ಲಿ …

Read More »

ಒಂಟಿ ಸಲಗ ಸಾವು; ವಿದ್ಯುತ್ ಹರಿಸಿ ಕೊಂದ ಆರೋಪ

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಸಮೀಪದ ಕಂಚಿನ ಕಲ್ಲು ದುರ್ಗದ ಖಾಸಗಿ ಕಾಫಿ ತೋಟದಲ್ಲಿ ಒಂಟಿ ಸಲಗ ಸಾವಪ್ಪಿದೆ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತಯಾರಿ ನಡೆಸಿತ್ತು ಎನ್ನಲಾಗಿದೆ. ಇಲಾಖೆ ಸಿಬ್ಬಂದಿ ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ತನಿಖೆ ಮಾಡಿ ಪ್ರಕರಣ ದಾಖಲು ಮಾಡಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಮೂಡಿಗೆರೆ,ಆಲ್ದೂರು ಸುತ್ತಮುತ್ತ ಆನೆ ಮಾನವ …

Read More »

ಮಿತ್ರ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿದ ಕರಾವಳಿ ಚಿತ್ರತಂಡ

ಸ್ಯಾಂಡಲ್ ವುಡ್ ನಲ್ಲಿ ಸುಮಾರು ವರ್ಷಗಳಿಂದ ಕಾಮಿಡಿ ಕಲಾವಿದನಾಗಿ ಮಿಂಚಿರುವ ಮಿತ್ರ ಅವರ ಜನ್ಮದಿನವಾಗಿದ್ದು ಕರಾವಳಿ ಚಿತ್ರ ತಂಡ ಕರಾವಳಿ ಇಂದು ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದೆ ಮಿತ್ರ ಕರಾವಳಿ ಸಿನಿಮಾದಲ್ಲಿ ಅವರು ಮಬ್ಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಈ ಚಿತ್ರವನ್ನು ಗುರುದತ್ತ ಗಾಣಿಗ ನಿರ್ದೇಶಿಸಿದ್ದು ಸಚಿನ್ ಬಸ್ರೂರು ಸಂಗೀತ ಸಂಯೋಜನೆ ನೀಡಿದ್ದಾರೆ ನಿರ್ದೇಶಕ …

Read More »

ಸಾಲ ವಾಪಸ್‌ ನೀಡದ್ದಕ್ಕೆ ಕೊಲೆ

ಬೆಂಗಳೂರು: ಕೈ ಸಾಲ ವಾಪಸ್‌ ನೀಡಿಲ್ಲ ಎಂಬ ವಿಚಾರಕ್ಕೆ ಸ್ನೇಹಿತನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪರಾರಿಯಾಗಿದ್ದ ಆರೋಪಿಯನ್ನು ಶ್ರೀರಾಮಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ವಿಠಲ್‌ ಅಲಿಯಾಸ್‌ ಪಾಂಡು (45) ಬಂಧಿತ. ‘ಮೇ 1ರಂದು ಓಕಳಿಪುರದ ವಾಟಾಳ್‌ ನಾಗರಾಜ್‌ ರಸ್ತೆಯ ರಾಜೀವ್‌ ಗಾಂಧಿ ಸಿಗ್ನಲ್‌ ಮುಕ್ತ ಕಾರಿಡಾರ್‌ ಕೆಳಸೇತುವೆ ಬಳಿ ಮೃತದೇಹ ಇರುವ ಮಾಹಿತಿ ಆಧರಿಸಿ ಹೊಯ್ಸಳ ಗಸ್ತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು.ಕೊಳೆತ ಸ್ಥಿತಿಯಲ್ಲಿ ಶವ ಇತ್ತು. ಮೃತನ …

Read More »