Breaking News

Uncategorized

ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಸರ್ವೆಯರ್ ಹಾಗೂ ಖಾಸಗಿ ವ್ಯಕ್ತಿ

ವಿಜಯಪುರ: ಜಮೀನಿನ ತತ್ಕಾಲ್ ಪೋಡಿ ಮಾಡಲು ₹ 47,500 ಲಂಚ ಕೇಳಿದ್ದ ಸರ್ವೆಯರ್ ಮಲ್ಲಪ್ಪ ಜಂಬಗಿ, ಖಾಸಗಿ ಸಹಾಯಕ ಗುರುದತ್ತ ಬಿರಾದಾರ‌ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ನಾಲ್ಕು ಎಕರೆ ಜಮೀನಿನ ತತ್ಕಾಲ್ ಪೋಡಿ ಮಾಡಲು ಪ್ರಕಾಶ್ ಸಿಂಗ್ ಎಂಬುವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚಬತೆಗೆದುಕೊಳ್ಳುವಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ₹ 47,500 ನಗದು ವಶಪಡಿಸಿಕೊಂಡು ಸರ್ವೇಯರ್ ಮಲ್ಲಪ್ಪ ಹಾಗೂ ಸಹಾಯಕ ಗುರುದತ್ತನನ್ನು ಲೋಕಾಯುಕ್ತ ಎಸ್ಪಿ ಮಲ್ಲೇಶ, …

Read More »

ವಿಮಾನ ನಿಲ್ದಾಣ: ಕಲಬುರಗಿಯ ಜನರಿಗೆ ಎಎಐನಿಂದ ಸಿಹಿಸುದ್ದಿ

ಕಲಬುರಗಿ, ಮೇ 18: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಕಲಬುರಗಿ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ನಗರದ ಸೇಡಂ ರಸ್ತೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಇದ್ದು, 2022ರಲ್ಲಿ ಲೋಕಾರ್ಪಣೆಗೊಂಡಿದೆ. ವಿಮಾನ ನಿಲ್ದಾಣಗಳ ಪ್ರಾಧಿಕಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸ್ಟಿಸ್ಟಮ್ (ಐಎಲ್‌ಎಸ್) ಬಳಕೆಗೆ ಚಾಲನೆ ನೀಡಿದೆ. ಎಎಐ ಜಂಟಿ ಪ್ರಧಾನ ವ್ಯವಸ್ಥಾಪಕ (ಸಿಎನ್‌ಎಸ್) ಆರ್. ದಿವಾಕರ್ ಈ ಸೌಲಭ್ಯಕ್ಕೆ ಚಾಲನೆ ನೀಡಿದರು.ಸುಮಾರು 12.12 ಕೋಟಿ ರೂ. ವೆಚ್ಚ ಮಾಡಿ …

Read More »

ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ್ಯಾಕ್ಟರ್ ಗೆ ಸಿಲುಕಿ ಬಾಲಕ ಸಾವು

ಮೈಸೂರು: ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್‌ಗೆ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಂಜನಗೂಡು (Nanjangudu) ತಾಲೂಕಿನ ದೇವರಸನಹಳ್ಳಿಯ ವರ್ಷದ ಬಾಲಕ ಭವಿಷ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ತನ್ನ ತಾಯಿಯ ಜೊತೆ ಅಜ್ಜಿಯ ಮನೆಗೆಂದು ಭವಿಷ್ (8) ಬಂದಿದ್ದ ವೇಳೆಯಲ್ಲಿ ಈಘಟನೆ ನಡೆದಿದೆ. ಬಾಲಕನ ಒತ್ತಾಯಕ್ಕೆ ಟ್ರ್ಯಾಕ್ಟರ್ ಮೇಲೆ ಸೋದರಮಾವ ಕೂರಿಸಿದ್ದಾರೆ. ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್​ನಿಂದ ಆಯತಪ್ಪಿ ಬಾಲಕ ಕೆಳಗೆ ಬಿದ್ದು, ಟ್ರ್ಯಾಕ್ಟರ್​ನ ರೋಟರಿಗೆ ಸಿಲುಕಿದಾಗ ದೇಹ ತುಂಡಾಗಿ …

Read More »

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ

ಹುಬ್ಬಳ್ಳಿ: ಇಲ್ಲಿನ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್ ವಿಶ್ವ ಸಾವಂತನ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆರು ತಿಂಗಳ ಹಿಂದೆಯೇ ವಿಶ್ವ ಎಂಬಾತ ಬಾಲಕಿ ಬೆನ್ನುಬಿದ್ದು, ಕಿರುಕುಳ ಕೊಟ್ಟು 55 ಗ್ರಾಂ ಚಿನ್ನಾಭರಣ, 8 ಸಾವಿರ ರೂ. ಇಸಿದುಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಿ ಬಾಲಕಿಯ ತಂದೆ-ತಾಯಿಯು ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆತನ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಸೆಕ್ಷನ್ 420, 504, 506 ಅಡಿಯಲ್ಲಿ …

Read More »

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಐಪಿಎಲ್ ಖುಷಿ ಕಿತ್ತುಕೊಂಡ ವರುಣ

ಬೆಂಗಳೂರು ಮೇ 18: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ವರುಣನ ಅರ್ಭಟ ಶುರುವಾಗಿದೆ. ಮುಂದಿನ ಕೆಲ ದಿನಗಳವರೆಗೆ ಮಳೆ ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಗರದ ವಿಜಯನಗರ, ರಾಜಾಜಿನಗರ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕೆಆರ್ ಮಾರುಕಟ್ಟೆ, ಗಾಂಧಿ ಬಜಾರ್ ಸೇರಿದಂತೆ ಹಲವೆಡೆ ಮಳೆ ತೀವ್ರಗೊಂಡಿದೆ. ಏಕಾಏಕಿ ಮಳೆ ಜೋರಾಗಿ ಸುರಿಯುತ್ತಿದ್ದು ಸಂಜೆವರೆಗೂ ಮಳೆಯಾಗುವ ಸಾಧ್ಯತೆ ಇದೆ. ಇಂದು ಬೆಳಗ್ಗೆ …

Read More »

ಯಾವ ನೋಟಿಸ್ ಗು ಬಗ್ಗದ ಪ್ರಜ್ವಲ್ : ಇದೀಗ ಕೋರ್ಟ್ ಮೂಲಕ ‘ವಾರೆಂಟ್’ ಜಾರಿಗೆ ‘SIT’ ಸಿದ್ಧತೆ

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೇಶದಿಂದ ದೇಶಕ್ಕೆ ಜಿಗಿಯುತ್ತ ತಲೆಮರಿಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಎಸ್‌ಐಟಿ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಕೋರ್ಟ್ ಮೂಲಕ ವಾರೆಂಟ್ ಜಾರಿ ಮಾಡುವ ಮುಖಾಂತರ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ಗೆ ವಿಚಾರಣೆಗೆ ಹಾಜರಾಗುವಂತೆ ಹಲವಾರು ಬಾರಿ ನೋಟಿಸ್ ನೀಡಿದ್ದರು. ಅಲ್ಲದೆ …

Read More »

55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ

ಪಣಜಿ: ನವೆಂಬರ್ ತಿಂಗಳಲ್ಲಿ ನಡೆಯಲಿರುವ 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‍ಎಫ್‍ಐ) ಪೋಸ್ಟರ್ ಪ್ರಸ್ತುತ ನಡೆಯುತ್ತಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅನಾವರಣಗೊಳಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್‌ 20-28 ರವರೆಗೆ ಪಣಜಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಭಾರತವು ಪ್ರತಿ ವರ್ಷ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತದೆ. ಈ ವರ್ಷ, ಕೇನ್ಸ್ ನಲ್ಲಿ ನಡೆದ ಈ ಉತ್ಸವದಲ್ಲಿ ‘ಇಂಡಿಯಾ ಪೆವಿಲಿಯನ್’ ಅನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ …

Read More »

ಹೆಂಡ್ತಿಯನ್ನು ‘ಡುಮ್ಮಿ’ ಎನ್ನುತ್ತಿದ್ದ ಗಂಡ: ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣು!

ಬೆಂಗಳೂರು: ದಪ್ಪ ಇರುವುದಕ್ಕೆ ಪತಿಯ ನಿಂದನೆಗೆ ಬೇಸತ್ತು ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಮಂಜುನಾಥನಗರ ನಿವಾಸಿ ಸಂಧ್ಯಾ (31) ಅಂತ ತಿಳಿದು ಬಂದಿದೆ. ಮೃತ ಸಂಧ್ಯಾ ದಪ್ಪ ಇರುವುದಕ್ಕೆ ಪತಿಯ ನಿಂದನೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ವಿಚಾರಕ್ಕೆ ದಾಂಪತ್ಯ ಕಲಹ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಗಳು ಸಂಧ್ಯಾ ಆತ್ಮಹತ್ಯೆಗೆ ಅಳಿಯ ಜಯಪ್ರಕಾಶ್‌ ಹಾಗೂ ಕುಟುಂಬಸ್ಥರ ದೈಹಿಕ, ಮಾನಸಿಕ ಕಿರುಕುಳವೇ ಕಾರಣ ಎಂದು …

Read More »

ಲೋಕಸಭಾ ಚುನಾವಣೆ 2024: ಮನೆಯಲ್ಲೇ ಮತದಾನ ಮಾಡಿದ ಅನ್ಸಾರಿ, ಮನಮೋಹನ್‌ ಸಿಂಗ್‌, ಜೋಶಿ | ಫೋಟೋ ನೋಡಿ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಮತ್ತು ಮಾಜಿ ಕೇಂದ್ರ ಸಚಿವ ಡಾ.ಮುರಳಿ ಮನೋಹರ್ ಜೋಶಿ ಅವರು ಮನೆ ಮತದಾನ ಸೌಲಭ್ಯವನ್ನು ಬಳಸಿಕೊಂಡು ಮತ ಚಲಾಯಿಸಿದ್ದಾರೆ ಎಂದು ದೆಹಲಿ ಚುನಾವಣಾ ಆಯೋಗ ತಿಳಿಸಿದೆ. ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿ ಗುರುವಾರ ಹಿರಿಯ ಮತದಾರರು ಮತ್ತು ಅಂಗವಿಕಲರಿಗೆ (ಪಿಡಬ್ಲ್ಯೂಡಿ) ಮನೆ ಮತದಾನ ಸೌಲಭ್ಯವನ್ನು ಪ್ರಾರಂಭಿಸಿದೆ ಮತ್ತು …

Read More »

ತೆರಬಂಡಿ ಸ್ಪರ್ಧೆಯ ಹೋರಿ ದಾಖಲೆಯ 10.10 ಲಕ್ಷಕ್ಕೆ ಖರೀದಿಸಿದ ರೈತ

ಮಹಾಲಿಂಗಪುರ: ರೈತ ದೇಶದ ಬೆನ್ನೆಲುಬಾದರೆ, ರೈತನ ಬೆನ್ನಲುಬು ಎತ್ತು. ಆದರೆ ಇತ್ತಿಚಿಗೆ ಯಾಂತ್ರಿಕ ಉಪಕರಣಗಳು ಹೆಚ್ಚಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳಿಗೆ ಎತ್ತುಗಳನ್ನು ಬಳಸುವುದು ಕಡಿಮೆಯಾಗಿದೆ. ಗ್ರಾಮೀಣ ಭಾಗದ ರೈತರು ಎತ್ತು ಮತ್ತು ಹೋರಿಗಳನ್ನು ಇಂದಿಗೂ ಸಾಕುತ್ತಿದ್ದಾರೆ. ಪಟ್ಟಣದ ಪುರಸಭೆಯ ಹಿರಿಯ ಸದಸ್ಯರು, ಪ್ರಗತಿಪರ ರೈತ ಯಲ್ಲನಗೌಡ ಪಾಟೀಲ ಅವರು ಇಂದಿಗೂ ತಮ್ಮ ಮನೆಯಲ್ಲಿ ಎತ್ತು ಮತ್ತು ಹೋರಿಗಳನ್ನು ಸಾಕುತ್ತಾ, ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರತಿಯೊಂದು ಜಾತ್ರೆ ಉತ್ಸವಗಳಲ್ಲಿ ನಡೆಯುವ ತೆರಬಂಡಿ, ಕಲ್ಲು …

Read More »