Breaking News

Uncategorized

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 33,974 ವಿದ್ಯಾರ್ಥಿಗಳು ಪದವಿ

ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) 8ನೇ ಘಟಿಕೋತ್ಸವ ಅ. 5ರಂದು ಬೆಳಿಗ್ಗೆ 11.30ಕ್ಕೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು. ‘ರಾಜ್ಯಪಾಲ ವಿ.ಆರ್. ವಾಲಾ ಅಧ್ಯಕ್ಷತೆ ವಹಿಸುವರು. ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅತಿಥಿಯಾಗಿ ಭಾಗವಹಿಸುವರು. ಬೆಂಗಳೂರಿನ ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪಾರ್ವತಿಗೆ …

Read More »

ಕಲ್ಯಾಣ್​ ದೈಹಿಕ ಹಿಂಸೆ ನೀಡ್ತಿದ್ದಾರೆ, ನನಗೆ ವಿಚ್ಛೇದನ ಬೇಕು: ಕೋರ್ಟ್​ ಮೊರೆಹೋದ ಪ್ರೇಮಕವಿ ಪತ್ನಿ

ಬೆಳಗಾವಿ: ತಮ್ಮ ಪತ್ನಿ ಅಶ್ವಿನಿ ಕಿಡ್ನಾಪ್ ಆಗಿದ್ದಾರೆಂದು ಚಿತ್ರಸಾಹಿತಿ ಕೆ.ಕಲ್ಯಾಣ್ ನಗರದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅಶ್ವಿನಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಕಿಡ್ನ್ಯಾಪ್‌ ಬಗ್ಗೆ ಪೊಲೀಸ್​ ಇನ್​ಸ್ಪೆಕ್ಟರ್​ ಶ್ರೀದೇವಿ ಪಾಟೀಲ್‌ರಿಂದ ವಿಚಾರಣೆ ನಡೆಸಲಾಗುತ್ತಿದ್ದು ಇನ್ನೊಂದು ಕೊಠಡಿಯಲ್ಲಿ ಅಶ್ವಿನಿ ತಂದೆ ಶಿವಾನಂದ ವಾಲಿ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಕೆ.ಕಲ್ಯಾಣ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. …

Read More »

ಡ್ರಗ್ಸ್​​ ಲಿಂಕ್​: ಕೊರೊನಾ ಇದೆ ನನ್ನ ಮುಟ್ಟಬೇಡಿ ಅಂತಿರೋ ಆ ನಟಿ ಯಾರು?

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧಿಸಿ ಬಾಲಿವುಡ್ ಮತ್ತು ಸ್ಯಾಂಡಲ್​ವುಡ್​ನಲ್ಲಿ ಕೇವಲ ನಟಿಯರೇ ವಿಚಾರಣೆಗೆ ಒಳಪಡುತ್ತಿದ್ದಾರೆ. ಡ್ರಗ್ಸ್ ಕೇಸ್​​ನಲ್ಲಿ ನಟಿಯರದ್ದೇ ಕೈ ಕಾಣಿಸುತ್ತಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿರುವ ಟ್ವೀಟ್ ಕುತೂಹಲ ಕೆರಳಿಸಿದೆ. ಡ್ರಗ್ಸ್ ಕೇಸ್​ನಲ್ಲಿ ಜೈಲು ಸೇರಿರುವ ಸಂಜನಾಗೂ, ಪ್ರಶಾಂತ್ ಸಂಬರಗಿಗೂ ಹಾವು ಮುಂಗುಸಿಯ ನಂಟು. ಆಗಾಗ ಒಬ್ಬರನೊಬ್ಬರು ಕಾಲೆಳಿತಾನೇ ಇರ್ತಾರೆ. ಅಲ್ಲದೆ ಪ್ರಕರಣ ಸಂಬಂಧ ಜೈಲು ಸೇರಿದ ಮೇಲೆ ನಟಿಮಣಿಯರು ಒಂದಲ್ಲಾ ಒಂದು ತಕರಾರು ಮಾಡುತ್ತಲೇ …

Read More »

ನಾನವನಲ್ಲ ನಾನವನಲ್ಲ; ಸತ್ಯಾಸತ್ಯತೆ ಹೊರ ಬರಲಿ: ಟಿವಿ 9ಗೆ ಮಾಜಿ ಸಿಎಂ HDK ಹೇಳಿದ್ದೇನು?

ಬೆಂಗಳೂರು: ಌಂಕರ್​ ಅನುಶ್ರೀ ವಿಚಾರವಾಗಿ ಸತ್ಯಾಸತ್ಯತೆ ಹೊರಗೆ ಬರಬೇಕೆಂಬುದು ನಾನು ಕೇಳುತ್ತೇನೆ ಎಂದು ಟಿವಿ9ಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ. ಹಾಗೆ ಕರೆ ಮಾಡಿದ್ದರೆ.. ಅವರೊಬ್ಬ ದೇಶದ್ರೋಹಿ ಆಷ್ಟೇ ರಾಜ್ಯದ ಜನರಿಗೆ ಸತ್ಯಾಸತ್ಯತೆ ತಿಳಿಯಬೇಕು. ಯಾವ ಮಾಜಿ ಸಿಎಂ ಒತ್ತಡ ಹಾಕಿದ್ದಾರೆಂದು ತಿಳಿಯಲಿ. ಹೀಗೆ, ಒತ್ತಡ ಹಾಕಿದ್ದರೆ ಅವರೊಬ್ಬ ಸಮಾಜದ್ರೋಹಿ, ದೇಶದ್ರೋಹಿ ಆಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಇಂತಹ ಪ್ರಕರಣಗಳಲ್ಲಿ ಯಾರಿಗೂ ರಕ್ಷಣೆ ಕೊಡಲ್ಲ. ನಮ್ಮ ಪಕ್ಷದವರೇ ಆದರೂ …

Read More »

ಆಸ್ತಿಗೋಸ್ಕರ K ಕಲ್ಯಾಣ್ ನನ್ನನ್ನು ಮದುವೆ ಆಗಿದ್ದಾರೆ -ಪ್ರೇಮಕವಿ ವಿರುದ್ಧ ಪತ್ನಿ ಪ್ರತಿದೂರು

ಬೆಳಗಾವಿ: ತಮ್ಮ ಪತ್ನಿ ಅಶ್ವಿನಿ ಕಿಡ್ನಾಪ್ ಆಗಿದ್ದಾರೆಂದು ಕೆ.ಕಲ್ಯಾಣ್ ನಗರದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಇದೀಗ, ಪ್ರಕರಣ ತಿರುವು ಪಡೆದುಕೊಂಡಿದೆ. ಹೌದು, ಇದೀಗ ಪ್ರೇಮಕವಿ ಹಾಗೂ ಖ್ಯಾತ ಚಿತ್ರಸಾಹಿತಿ ಕೆ.ಕಲ್ಯಾಣ್​ ಪತ್ನಿ ಅಶ್ವಿನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಕಲ್ಯಾಣ್ ಮತ್ತು ನನ್ನ ನಡುವೆ ವೈಮನಸ್ಸು ಉಂಟಾಗಿದೆ. ಕಲ್ಯಾಣ್ ಆಸ್ತಿ ವಿಚಾರಕ್ಕೆ ನನ್ನನ್ನ ಮದುವೆ ಆಗಿದ್ದಾರೆ ಅಂತ ಅಶ್ವಿನಿ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ. …

Read More »

ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ಸಿಬಿಐ ವಹಿಸಿ: ಅಥಣಿ ವಾಲ್ಮೀಕಿ ಸಮುದಾಯ ಮನವಿ.

  ಅಥಣಿ: ಉತ್ತರ ಪ್ರದೇಶ ರಾಜ್ಯದಲ್ಲಿ ಕುಮಾರಿ ಮನೀಷಾ ವಾಲ್ಮೀಕಿ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಷ್ಟ್ರಪತಿ ಅವರಿಗೇ ಅಥಣಿ ವಾಲ್ಮೀಕಿ ಸಮುದಾಯದಿಂದ ಮನವಿ ಪತ್ರ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಭೀಮಗೌಡ ಪರಮಗೌಡರ್ ಮಾತನಾಡಿ, ಮನೀಷಾ ಹಿಂದುಳಿದ ವರ್ಗಗಳ ಸಮುದಾಯದಿಂದ ಬಂದಿದ್ದರಿಂದ ತನಿಖೆ ಇದುವರೆವಿಗೂ ವೇಗ ಪಡಿಕೊಂಡಿಲ್ಲ, ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ದೇಶದ ತುಂಬೆಲ್ಲ ವಾಲ್ಮೀಕಿ …

Read More »

ಸೋಮವಾರ ಗೋಕಾಕ ನಗರ ಬಂದ್ ಕರೆ ನೀಡಿದ್ದಾರೆ.

ಗೋಕಾಕ್: ನಗರದಲ್ಲಿ ರಾಜಸ್ತಾನ ವ್ಯಾಪಾರಿಗಳ ಕಳಪೆ ಗುಣಮಟ್ಟದ ವಸ್ತುಗಳ ಕಡಿಮೆ ಬೆಲೆ ಮಾರಾಟದಿಂದ ಸ್ಥಳೀಯ ವ್ಯಾಪಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ರಾಜಸ್ತಾನ ಹಠಾವೋ..ಗೋಕಾಕ್ ಬಚಾವೋ ಎಂಬ ಅಭಿಯಾನದ ಮೂಲಕ ವ್ಯಾಪಾರಸ್ಥ ಸಂಘದಿಂದ ಸೋಮವಾರ ಗೋಕಾಕ ನಗರ ಬಂದ್ ಕರೆ ನೀಡಿದ್ದಾರೆ.     ಗೋಕಾಕ್ ನಗರದಲ್ಲಿ ರಾಜಸ್ತಾನಿ ವ್ಯಾಪಾರಿಗಳು ಕಳಪೆ ಗುಣಮಟ್ಟದ ವಸ್ತು, ಸಾಮಗ್ರಿಗಳನ್ನು ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ವ್ಯಾಪಾರಸ್ಥರು ತೊಂದರೆಯಾಗಿದೆ. ವ್ಯಾಪಾರದಲ್ಲಿ ಮೊದಲೇ ನಷ್ಟ …

Read More »

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ಅವರನ್ನು ಸೇನೆಗೆ ಸೇರಿದ ವಾಲ್ಟರ್ ರೀಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈಟ್ ಹೌಸ್ ನಿಂದ ಹೆಲಿಕಾಪ್ಟರ್ ಮೂಲಕ ಡೊನಾಲ್ಡ್ ಟ್ರಂಪ್ ವಾಲ್ಟರ್ ರೀಡ್ ಆಸ್ಪತ್ರೆಗೆ ತೆರಳಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ತೆರಳುವ ಮುನ್ನ ವಿಡಿಯೋದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ತಾವು ಆಸ್ಪತ್ರೆಗೆ ದಾಖಲಾಗುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ ಕೊರೊನಾ ದೃಢಪಟ್ಟಿರುವ ಪತ್ನಿ ಮೆಲಾನಿಯಾ …

Read More »

ಬೊಲೆರೊ ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರು

ಸವದತ್ತಿ: ಇಲ್ಲಿನ ಧಾರವಾಡ ರಸ್ತೆಯಲ್ಲಿರುವ ಪುರಸಭೆ ಕಸ ವಿಲೇವಾರಿ ಸಂಕೀರ್ಣದ ಸಮೀಪ ಶುಕ್ರವಾರ ರಾತ್ರಿ ಬೊಲೆರೊ ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರು. ತಾಲ್ಲೂಕಿನ ಚುಂಚನೂರ ಹಾಗೂ ಜಕಬಾಳ ಗ್ರಾಮಗಳ ಕೂಲಿ ಕಾರ್ಮಿಕರು ಧಾರವಾಡ ಜಿಲ್ಲೆಯ ಮೊರಬ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ವಾಪಸಾಗುವಾಗ ಘಟನೆ ನಡೆದಿದೆ. ‘ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿವೆ. ಮೃತರಲ್ಲಿ ಮೂವರ ಗುರುತಷ್ಟೆ ಪತ್ತೆಯಾಗಿದೆ. ಅವರು …

Read More »

ಸುರೇಶ ಅಂಗಡಿ ಅವರ ಕುಟುಂಬದವರಿಗೆ ಶುಕ್ರವಾರ ರಾತ್ರಿ ಸಾಂತ್ವನ ಹೇಳಿದರು.

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮುಖಂಡರು ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ದಿ.ಸುರೇಶ ಅಂಗಡಿ ಅವರ ಕುಟುಂಬದವರಿಗೆ ಶುಕ್ರವಾರ ರಾತ್ರಿ ಸಾಂತ್ವನ ಹೇಳಿದರು. ಶಾಸಕರಾದ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್ ಮತ್ತು ಮಹಾಂತೇಶ ಕೌಜಗಲಿ ಧೈರ್ಯ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ‘ಸುರೇಶ ಅಂಗಡಿ ಬಹಳ ಸೌಮ್ಯ ಸ್ವಭಾವದವರಾಗಿದ್ದರು. ನನ್ನೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಭೇಟಿಯೂ ಆಗಿದ್ದೆ. ಸಚಿವರಾದ ನಂತರವೂ …

Read More »