ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಆರ್ .ಅಶೋಕ ಆರೋಪಕ್ಕೆ ಡಿಕೆ ಶಿವಕುಮಾರ್ ಗರಂ ಒಳಗಡೆ ಏನ ಪ್ರಶ್ನೆ ಕೇಳಿದಾರೇ ಏನ ಉತ್ತರ ಕೊಟ್ಟಿದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು. ಅದರ ಬಗ್ಗೆ ನಿಮಗೇನು ಗೊತ್ತು . ವಾಪಸ್ ವಿಚಾರಣೆಗೆ ಕರಿಯಬಹುದು. ಬಿಜೆಪಿ ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿದಾರಾ ಅನ್ನೋ ಹೇಳಿಕೆಗೆ ಡಿಕೆ ಗರಂ ಆಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರವ ಕೊಟ್ಟು ಲೋಕಾಯುಕ್ತ ಕಚೇರಿಗೆ ಸಿಎಮ್ ಹಾಜರಾಗಿದ್ದರೆ …
Read More »ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಜಿಲ್ಲಾ ಮಟ್ಟದ ಸಮನ್ವಯ/ಪ್ರಗತಿ ಪರಿಶೀಲನಾ ಸಭೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಜಿಲ್ಲಾ ಮಟ್ಟದ ಸಮನ್ವಯ/ಪ್ರಗತಿ ಪರಿಶೀಲನಾ ಸಭೆ ಮಹಿಳೆಯರ ಮೇಲಿನ ದೌರ್ಜನ್ಯತಡೆಗಟ್ಟಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ : ಮಹಿಳೆಯರ ಸುರಕ್ಷತೆ-ಸಬಲೀಕರಣಕ್ಕೆ ವಿಶೇಷ ಗಮನ ನೀಡಬೇಕು. ಮಹಿಳಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸಹಾಯವಾಣಿ, ಬಾಲ್ಯ ವಿವಾಹ, ಮತ್ತು ಪೋಕ್ಸೋ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ …
Read More »ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ. ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
ದಾಂಡೇಲಿ: ಧಾರವಾಡದಿಂದ ದಾಂಡೇಲಿ ಗೆ ಬರುತ್ತಿದ್ದೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರೋರ್ವರಿಗೆ ಹೃದಯಾಘಾತವಾದ ಘಟನೆ ಸೋಮವಾರ(ನ.4) ಬೆಳಿಗ್ಗೆ ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಪುಂಡಲಿಕ್ ಚಂದರಗಿ ಎಂಬವರೇ ಹೃದಯಘಾತಕ್ಕೊಳಗಾದ ಪ್ರಯಾಣಿಕರಾಗಿದ್ದಾರೆ. ಚಂದರಗಿ ಅವರು ಧಾರವಾಡದಿಂದ ಸಾರಿಗೆ ಬಸ್ಸಿನಲ್ಲಿ ದಾಂಡೇಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ದಾಂಡೇಲಿಗೆ ಬಸ್ ಬರುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಇನ್ನಿತರ ಪ್ರಯಾಣಿಕರು ನಿರ್ವಾಹಕರಿಗೆ ಮಾಹಿತಿಯನ್ನು ನೀಡಿದ್ದಾರೆ. ಕುಳಿತಲ್ಲೇ …
Read More »ಮಠ ಗುರುಪ್ರಸಾದ್ “ನಿಗೂಢ ಸಾವು”: ಇರುವ ಅನುಮಾನಗಳೇನು ?
ಕನ್ನಡ ಚಿತ್ರರಂಗದಲ್ಲಿ ಹೊಸ ಮಾದರಿಯ, ಹಾಸ್ಯ ಹಾಗೂ ಭಿನ್ನ ಸಿನಿಮಾಗಳನ್ನು ಕೊಟ್ಟಿದ್ದ ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅವರ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಿನಿಮಾರಂಗದಲ್ಲಿ ಸೋಲು – ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದವರಲ್ಲಿ ಗುರುಪ್ರಸಾದ್ ಅವರು ಸಹ ಒಬ್ಬರು. ಗುರುಪ್ರಸಾದ್ ಕನ್ನಡದಲ್ಲಿ ಐದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಗುರುಪ್ರಸಾದ್ ಕೇವಲ ನಿರ್ದೇಶಕ ಮಾತ್ರವಲ್ಲ. ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು. ನಟ ಹಾಗೂ …
Read More »ಮುಡಾದ ಮತ್ತೊಂದು ಹಗರಣ ಬಯಲಿಗೆ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದ ಮತ್ತೊಂದು ಹಗರಣ ಬಯಲಾಗಿದೆ. ಅಧಿಕಾರಿಗಳೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ವಂಚನೆ ಪ್ರಕರಣದಲ್ಲಿ ಪ್ರಾಧಿಕಾರದ ಹೊರಗುತ್ತಿಗೆ ನೌಕರರು, ಅಧಿಕರಿಗಳು, ಬ್ಯಾಂಕ್ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂದು ಮೈಸೂರು ಉಳಿಸಿ ಹೋರಾಟಗಾರರ ವೇದಿಕೆ ಆರೋಪಿಸಿದೆ. ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಶಾಖೆಯ ಕೆಲ ಸಿಬ್ಬಂದಿಗಳು ಹಾಗೂ ಕೆಲ ಅಧಿಕಾರಿಗಳು ಮುಡಾ ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ 93 ಗ್ರಾಹಕರಿಂದ …
Read More »ಹಾಸನಾಂಬೆ ದೇಗುಲಕ್ಕೆ ಹರಿದು ಬಂತು ದಾಖಲೆಯ 9 ಕೋಟಿಗೂ ಅಧಿಕ ಆದಾಯ
ಹಾಸನ : ಹಾಸನದ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನ ಇಂದು ಅಂತ್ಯವಾಗಲಿದೆ. ಈ ವೇಳೆ ಕಳೆದ 11 ದಿನಗಳಲ್ಲಿ ದಾಖಲೆ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಹಾಸನಾಂಬೆ ದೇಗುಲಕ್ಕೆ 9 ಕೋಟಿಗೂ ಅಧಿಕ ಆದಾಯ ಬಂದಿದೆ. ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲು, ಕ್ಷಣಗಣನೆ ಶುರುವಾಗಿದೆ.ಈಗಾಗಲೇ ಭಕ್ತರಿಂದ ದೇವಾಲಯ ಆವರಣ ತುಂಬಿ ತುಳುಕುತ್ತಿದೆ.ಬೆಳಿಗ್ಗೆ 11.50ರ ನಂತರ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ವಿಶ್ವರೂಪದ ದರ್ಶನ ಬಳಿಕ …
Read More »ಅದ್ಧೂರಿ ರಾಜ್ಯೋತ್ಸವಕ್ಕೆ ಚಾಲನೆ
ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿ ಕೂಡ ಕರ್ನಾಟಕ ರಾಜ್ಯೋತ್ಸವಕ್ಕೆ, ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಮಧ್ಯರಾತ್ರಿಯೇ ಚಾಲನೆ ನೀಡಲಾಯಿತು. ಕಿಕ್ಕಿರಿದು ಸೇರಿದ ಕನ್ನಡ ಮನಸ್ಸುಗಳು ಇನ್ನಿಲ್ಲದಂತೆ ಸಂಭ್ರಮಿಸಿದವು. ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಜೈಕಾರ, ಜಯಘೋಷಗಳು, ಸಂಭ್ರಮ ಮುಗಿಲುಮುಟ್ಟಿತು. ನಡುರಾತ್ರಿಯೇ ಅಪಾರ ಸಂಖ್ಯೆಯ ಯುವಕ, ಯಿವತಿಯರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು. ಎಲ್ಲರ ಕೈಯಲ್ಲಿ ಹಳದಿ- ಕೆಂಪು ಬಣ್ಣದ ಕನ್ನಡ ಬಾವುಟಗಳು. ಹಳದಿ ಕೆಂಪು ಬಣ್ಣದ ಬಲೂನುಗಳ ಹಾರಾಟ. …
Read More »ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ ಎರಡು ಪಟ್ಟು ಏರಿಕೆ
ಬೆಂಗಳೂರು, ಅಕ್ಟೋಬರ್ 31: ಕರ್ನಾಟಕ 50ನೇ ವರ್ಷದ ಸಂಭ್ರಮಾಚದರಣೆಯಲ್ಲಿದೆ. ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 50 ಮಹಿಳಾ ಸಾಧಕಿಯರು ಹಾಗೂ 50 ಪುರುಷ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಈಗಾಗಲೇ ಘೋಷಣೆ ಮಾಡಿದೆ. ಇದೀಗ ಅದರ ಮೊತ್ತವನ್ನು ಹೆಚ್ಚಿಸಿದೆ. ನವೆಂಬರ್ 1ರಂದು ನಡೆಯಲಿರುವ ಕನ್ನಡೋತ್ಸವ ಸಂಭ್ರಮಾಚರಣೆಯಲ್ಲಿ ಈ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸಲಾಗಿತ್ತು. ಈ ಪ್ರಶಸ್ತಿಯ ಮೊತ್ತವನ್ನು 50,000 ಎಂದು ಮೊದಲು …
Read More »ದೀಪಾವಳಿ ಬಂದರೆ ಸಾಕು ಭರ್ಜರಿ ಖಾದ್ಯಗಳ ರಸದೌತಣ
ದೀಪಾವಳಿ ಬಂದರೆ ಸಾಕು ಭರ್ಜರಿ ಖಾದ್ಯಗಳ ರಸದೌತಣ. ಬಗೆಬಗೆಯ ತಿನುಸುಗಳ ಸೊಗಸೂ ಇರುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಗಡಿ ಜಿಲ್ಲೆಗಳಲ್ಲಿ ಕನ್ನಡ- ಮರಾಠಿ ಮಿಶ್ರ ಸಂಸ್ಕೃತಿ ಖಾದ್ಯಗಳನ್ನು ಸವಿಯುವುದೇ ಸಡಗರ. ಸಿಹಿಯೂ, ಖಾರವೂ, ಕರಿದ ಪದಾರ್ಥಗಳೂ, ಬೇಕರಿ ತಿನಿಸುಗಳೂ… ಒಂದೇ ಎರಡೇ. ತಿಂಡಿಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ಹಬ್ಬ. ‘ಬಲೀಂದ್ರ ಪೂಜೆ’ ಅಮಾವಾಸ್ಯೆಯ ವಿಶೇಷ. ಈ ದಿನದಿಂದಲೇ ವಿಕ್ರಮ ಸಂವತ್ಸರ ಆರಂಭವಾಗುತ್ತದೆ. ವರ್ತಕರು, ಉದ್ಯಮಿಗಳಿಗೆ ಈ ದಿನ ಅತ್ಯಂತ …
Read More »ರಿವಾಲ್ವರ್ ಇಟ್ಟುಕೊಂಡ ಆಂಜನೇಯ
ಚಿಕ್ಕೋಡಿ: ದೇವರ ಆಯುಧಗಳು ಎಂದರೆ, ಗದೆ, ಬಿಲ್ಲು, ಖಡ್ಗ, ತ್ರಿಶೂಲ, ಶಂಖ, ಚಕ್ರ ನೋಡಿರುತ್ತೀರಿ. ಆದರೆ, ಪಿಸ್ತೂಲ್ ಅನ್ನೇ ಆಯುಧವಾಗಿಸಿಕೊಂಡ ದೇವರನ್ನು ನೋಡಬೇಕಾದರೆ ತಾಲ್ಲೂಕಿನ ಜಾಗನೂರಿಗೆ ಬರಬೇಕು. ಇಲ್ಲಿನ ಆಂಜನೇಯ ತನ್ನ ಸೊಂಟಕ್ಕೆ ಪಿಸ್ತೂಲ್ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಜಾತ್ರೆ, ಉತ್ಸವ, ಹನುಮ ಜಯಂತಿ, ರಾಮನವಮಿ ಸೇರಿ ವಿಶೇಷ ಸಂದರ್ಭ ಹನುಮಾನ ದೇವರ ಮೂರ್ತಿ ಅಲಂಕರಿಸುವಾಗ, ಪಿಸ್ತೂಲ್ ಇರಿಸುವ ಪರಿಪಾಠ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೀಪಾವಳಿ ಪ್ರಯುಕ್ತ ನ.1, 2ರಂದು ವೈಭವದಿಂದ …
Read More »