ಮೈಸೂರು,ಅ.2- ಮೈಸೂರು ಸಮೀಪದ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ನಾಳೆ ಬೆಳಗ್ಗೆ 9.15 ರಿಂದ 9.45 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ನಾಡೋಜ, ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ …
Read More »ಬಿಗ್‌ಬಾಸ್ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ?
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11) ಆರಂಭಗೊಂಡಿದೆ. ನಾನಾ ಕ್ಷೇತ್ರದ 17ಮಂದಿ ಸ್ಪರ್ಧಿಗಳು ʼಸ್ವರ್ಗ – ನರಕʼದ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನದಂದಲೇ ಬಿಗ್ ಬಾಸ್ ಕಾರ್ಯಕ್ರಮ ರಂಗೇರಿದೆ. ಸ್ವರ್ಗ ಹಾಗೂ ನರಕದ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ವಾಗ್ವಾದ ಶುರುವಾಗಿದೆ. ಮನೆಯೊಂದು ಬಾಗಿಲು ಎರಡು ಎಂಬಂತೆ ಸ್ವರ್ಗ – ನರಕದ ನಿವಾಸಿಗಳ ನಡುವೆ ಕಿತ್ತಾಟ ಶುರುವಾಗಿದೆ. ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಪ್ರಕರಣದಿಂದ ಸದ್ದಾಗಿದ್ದ ಬಿಗ್ ಬಾಸ್ …
Read More »ತಿರುಪತಿ ಲಡ್ಡು ವಿವಾದ ; ‘SIT ತನಿಖೆ’ಗೆ ತಾತ್ಕಾಲಿಕ ಸ್ಥಗಿತ
ನವದೆಹಲಿ : ತಿರುಪತಿ ಲಡ್ಡುಗಳ ಕಲಬೆರಕೆ ಪ್ರಕರಣದ ತನಿಖೆ ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲಿರುವುದರಿಂದ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಂಧ್ರಪ್ರದೇಶದ ಡಿಜಿಪಿ ತಿಳಿಸಿದ್ದಾರೆ. ಆಂಧ್ರಪ್ರದೇಶದ ಉನ್ನತ ಪೊಲೀಸ್ ದ್ವಾರಕಾ ತಿರುಮಲ ರಾವ್ ಹೇಳಿಕೆಯಲ್ಲಿ “ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಎಸ್‌ಐಟಿ ತನಿಖೆಯನ್ನು ಅಕ್ಟೋಬರ್ 3 ರವರೆಗೆ ಸ್ಥಗಿತಗೊಳಿಸಲಾಗುವುದು. ತಿರುಪತಿ ಲಡ್ಡು ಪ್ರಸಾದಂ ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಲಾಗಿದೆ ಮತ್ತು ತನಿಖೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ …
Read More »ಗೋವಾದಿಂದ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಮದ್ಯ ಜಪ್ತಿ.
ಒಂದು ಕಂಟೇನರ್ …ಎರಡು ಕಾಂಪಾರ್ಟ್ಮೆಂಟ್ … ಇದು ಖದೀಮರ ಕೈಚಳಕ !!! ಗೋವಾದಿಂದ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಮದ್ಯ ಜಪ್ತಿ. ಬೆಳಗಾವಿಯಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಗಳ ಭರ್ಜರಿ ಕಾರ್ಯಾಚರಣೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಮದ್ಯ ಜಪ್ತಿ. ಪುಷ್ಪಾ ಸಿನೆಮಾ ಮಾದರಿಯಲ್ಲಿ ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ಮದ್ಯ. ಕಂಟೇನರ್ ವಾಹನದಲ್ಲಿ ಕಂಪಾರ್ಟ್ಮೆಂಟ್ ಮಾಡಿದ್ದ ಕಿರಾತಕರು. ಡ್ರೈವರ್ ಹಿಂಬದಿಯಲ್ಲಿ ಕಂಪಾರ್ಟ್ಮೆಂಟ್ ಮಾಡಿ ಮದ್ಯದ ಬಾಕ್ಸ್ ಗಳನ್ನಿಟ್ಟು ಸಾಗಾಟ. ಹೊರಗಡೆ ಭಾಗದಲ್ಲಿ …
Read More »ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಗೋವನ್ನು ‘ರಾಜ್ಯಮಾತೆ’ ಎಂದು ಘೋಷಣೆ ಮಾಡಿ: ವಿಜಯೇಂದ್ರ ಒತ್ತಾಯ
ಗೋಮಾತೆಯನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗೋವನ್ನು ರಾಜ್ಯ ಮಾತೆ ಅಥವಾ ಕ್ಷೀರ ಮಾತೆ ಎಂದು ಘೋಷಿಸುವಂತೆ ಅವರು ಒತ್ತಾಯಿಸಿದ್ದಾರೆ. ನಂದಿನಿ ಉತ್ಪನ್ನಗಳ ಮೂಲಕ ಕರ್ನಾಟಕ ವಿಶ್ವ ಮಾನ್ಯತೆ ಪಡೆಯುತ್ತಿದೆ. ನಂದಿನಿ ಉತ್ಪನ್ನಗಳ ಧಾತೆ ಗೋ ಮಾತೆ. ಆದ್ದರಿಂದ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಗೋವನ್ನು ರಾಜ್ಯ ಮಾತೆ ಎಂದೇ ಘೋಷಿಸಲಿ …
Read More »ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆಸಿಎಂ ಕುರಿತು ಶೆಟ್ಟರ್ ಮಾತು
ಹುಬ್ಬಳ್ಳಿ: ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು. ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಸಿಎಂ ದಸರಾ ಉದ್ಘಾಟನೆ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎನ್ನುವ, ನೈತಿಕತೆ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಇನ್ನು ಮೇಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು. ಯಡಿಯೂರಪ್ಪನವರ ಮೇಲೆ ಎಫ್‌ಐಆರ್ ಆದಾಗ ಏನು ಮಾತನಾಡಿದ್ದರು. ಪ್ರಕರಣದ …
Read More »500 ರೂ.ನೋಟಿನಲ್ಲಿ ಗಾಂಧೀಜಿ ಬದಲು ‘ಅನುಪಮ್ ಖೇರ್’ ಫೋಟೋ ; 1.60 ಕೋಟಿ ಮೌಲ್ಯದ ನಕಲಿ ನೋಟು ಜಪ್ತಿ..!
500 ರೂ.ಗಳ ಹೊಸ ಕರೆನ್ಸಿ ನೋಟುಗಳು ಅಸ್ತಿತ್ವಕ್ಕೆ ಬಂದು ಸುಮಾರು ಎಂಟು ವರ್ಷಗಳಾಗಿವೆ. ಹೊಸ ಕರೆನ್ಸಿ ನೋಟುಗಳನ್ನು ಪರಿಚಯಿಸಿದಾಗ, ನಕಲಿ ಕರೆನ್ಸಿ ನೋಟುಗಳನ್ನು ವ್ಯವಸ್ಥೆಯಿಂದ ತೆಗೆದುಹಾಕಲಾಯಿತು. ಈಗ, ನಕಲಿ ಕರೆನ್ಸಿ ನೋಟುಗಳು ಮತ್ತೆ ಭಾರತದ ಮೂಲೆ ಮೂಲೆಗಳಿಗೆ ತಲುಪುತ್ತಿವೆ. ಗುಜರಾತ್ ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 1.60 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ನೋಟುಗಳಲ್ಲಿ ಮಹಾತ್ಮ ಗಾಂಧಿ ಬದಲಿಗೆ ನಟ ಅನುಪಮ್ ಖೇರ್ ಅವರ ಮುಖವಿತ್ತು. ಪೊಲೀಸ್ …
Read More »ಬಿಗ್ ಮನೆಗೆ ಸೀರಿಯಲ್ ಸುಂದರಿಯರಎಂಟ್ರಿ
ಬೆಂಗಳೂರು: ಬಿಗ್ ಬಾಸ್ ಕನ್ನಡ (Big Boss Kannada-11) ಆರಂಭವಾಗಿದೆ. ಕಿಚ್ಚ ಸುದೀಪ್ (Kiccha Sudeep) ಸ್ಟೈಲಿಸ್ಟ್ ಆಗಿ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಬಿಗ್ ಬಾಸ್ ಮನೆಯೊಳಗೆ ಹೋಗುವ ನಾಲ್ವರು ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿತ್ತು. ಇಂದು ಬಿಗ್ ಬಾಸ್ ಗೆ ಹೋಗುವ ಮೊದಲ ಸ್ಪರ್ಧಿ ತಮ್ಮದೇ ಸ್ಟೈಲ್ ನಲ್ಲಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿರುವ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. …
Read More »ಸರ್ಕಾರಿ ಭೂಮಿ ದುರ್ಬಳಕೆ: ಕುರಿಗಾಯಿಗಳ ಆಕ್ರೋಶ
ಲಿಂಗಸುಗೂರು: ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದ ಸರ್ವೆ ನಂಬರ್ 62 ಸೇರಿ ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಸೇ ರಿದ ಭೂಮಿಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ದುರ್ಬಳಕೆ ಮಾಡಿಕೊಂಡ ಕಾರಣ ಜಾನುವಾರು ಮೇಯಿಸಲು ಭೂಮಿ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಕುರಿಗಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್.ಬಿ.ಶುಗರ್ಸ್ ಕಂಪನಿಯು ಸಕ್ಕರೆ ಕಾರ್ಖಾನೆ ಸ್ಥಾಪನೆ ಹೆಸರಲ್ಲಿ ಖರೀದಿ ಮಾಡಿಕೊಂಡ ಜಮೀನಲ್ಲದೆ ಹೆಚ್ಚುವರಿ ಜಮೀನಿನಲ್ಲಿ ಕಲ್ಲು ಗುಡ್ಡ, ಗಿಡ-ಮರ ಕಿತ್ತು ಸಮತಟ್ಟುಗೊಳಿಸುತ್ತಿದೆ. ತನ್ನ …
Read More »ಸೈಬರ್ ವಂಚನೆ: ₹8.64 ಕೋಟಿ ಕಳೆದುಕೊಂಡ ಜನ
ಬೆಳಗಾವಿ: ‘ನೀವು ಗಂಭೀರವಾದ ಅಪರಾಧ ಮಾಡಿದ್ದೀರಿ. ಆನ್‌ಲೈನ್‌ನಲ್ಲಿ ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ ಕಂಡುಬಂದಿವೆ. ವಿಡಿಯೊ ಕರೆ ಮೂಲಕವೇ ನಾವು ನಡೆಸುವ ವಿಚಾರಣೆಗೆ ಹಾಜರಾಗಿ. ನಮ್ಮ ಕ್ಯಾಮೆರಾ ಕಣ್ಗಾವಲಿನಲ್ಲೇ ಇರಿ…’ ಇಂಥ ಕರೆಗಳು ನಿಮಗೂ ಬಂದರೆ ಎಚ್ಚರ. ಇಂಟರ್‌ನೆಟ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಹೀಗೆ ಕರೆ ಮಾಡುತ್ತಿರುವ ವಂಚಕರು ಹಣಕ್ಕೆ ಪೀಡಿಸುತ್ತಿದ್ದಾರೆ. ಅವರಿಗೆ ಹೆದರಿ ಮಾಹಿತಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದವರು, ನ್ಯಾಯ ಕೋರಿ ಬೆಳಗಾವಿ ನಗರ …
Read More »