Breaking News

Uncategorized

ಉಡುಪಿಯಲ್ಲಿ ಸೌಂಡ್ ಮಾಡ್ತಿದೆ ಬಿದಿರು ಪಟಾಕಿ

ಉಡುಪಿ: ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ನಿಮ್ಮ ಪಟಾಕಿ ರಗಳೆಯೇ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ತಾವೇ ಪಟಾಕಿ ತಯಾರು ಮಾಡಲು ಮುಂದಾಗಿದ್ದಾರೆ. ಭೂಮಿ ಅದುರಿ ಬಾನು ಬಿರಿಯುವ ಪಟಾಕಿಗೆ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ. ಕಣ್ಣು ಬಿಡಲಾಗದ, ದಟ್ಟ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್  ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯ ಹಗ್ಗ ಜಗ್ಗಾಟಕ್ಕೆ ಶನಿವಾರ ತೆರೆ

ಬೆಳಗಾವಿ: ಭಾರೀ ಕುತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್  ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯ ಹಗ್ಗ ಜಗ್ಗಾಟಕ್ಕೆ ಶನಿವಾರ ತೆರೆ ಬಿದ್ದಿದ್ದು, ಅಧ್ಯಕ್ಷ,ಉಪಾಧ್ಯಕ್ಷ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳಿಗ್ಗೆ ಘಟಾನುಘಟಿ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ ಅವಿರೋಧ ಆಯ್ಕೆ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಇದರಿಂದ ರಮೇಶ ಕತ್ತಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಢವಳೇಶ್ವರ ಅವರನ್ನು ಆಯ್ಕೆ ಮಾಡಿದ್ದಾರೆ. ಸಭೆ ಬಳಿಕ …

Read More »

ನಟಿ ಮಯೂರಿ ದೀಪಾವಳಿ ದಿನದಂದೇ ಗುಡ್ ನ್ಯೂಸ್ಬಹಿರಂಗ

ಬೆಂಗಳೂರು: ನಟಿ ಮಯೂರಿ ದೀಪಾವಳಿ ದಿನದಂದೇ ಗುಡ್ ನ್ಯೂಸ್ ಒಂದನ್ನು ಬಹಿರಂಗಪಡಿಸಿದ್ದಾರೆ. ಮದುವೆ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದ ಮಯೂರಿ, ಇದೀಗ ತಾನು ತಾಯಿಯಾಗುತ್ತಿರುವ ವಿಚಾರ ಕೂಡ ತಿಳಿಸಿದ್ದಾರೆ. ಈಗಾಗಲೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಕೊಂಡಿದ್ದು, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಶುಭದಿನದಂದು ನಾವು ಪುಟ್ಟ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.ಇದೇ ವರ್ಷ ಜೂನ್ 12ರಂದು ತನ್ನ ಬಹುಕಾಲದ ಗೆಳೆಯ ಅರುಣ್ …

Read More »

ಗೆಳೆಯರಿಬ್ಬರ ಹಳೇ ವೈಷಮ್ಯ ಮುಖಕ್ಕೆ ಆ್ಯಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆ

ಕಾರವಾರ: ಕುಚುಕು ಗೆಳೆಯರಿಬ್ಬರಲ್ಲಿ ಗಣಪತಿ ವಿಸರ್ಜನೆ ವೇಳೆ ಉಂಟಾದ ಬಿನ್ನಾಭಿಪ್ರಾಯ ದೀಪಾವಳಿಯಲ್ಲಿ ಸಿಡಿದಿದೆ. ಗೆಳೆಯರಿಬ್ಬರ ಹಳೇ ವೈಷಮ್ಯ ಮುಖಕ್ಕೆ ಆ್ಯಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆಯಾಗಿದೆ. ಇಂದು ರಾತ್ರಿ ಕಾರವಾರದ ಗ್ರೀನ್ ಸ್ಟ್ರೀಟ್ ಬಳಿ ಈ ಘಟನೆ ನಡೆದಿದೆ. ಕಾರವಾರದ ಮಾಜಾಳಿಯ ಹರೀಶ್ ಮತ್ತು ನಿತೇಶ್ ನಾಯ್ಕ ಇಬ್ಬರೂ ಮೊದಲು ಸ್ನೇಹಿತರಾಗಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ನಿತೇಶ್ ನಾಯ್ಕಗೆ ಹರೀಶ್ ಗ್ರೀನ್ ಸ್ಟ್ರೀಟ್ ಬಳಿ ಆಸಿಡ್ ಅಂಶವಿರುವ …

Read More »

ಅದ್ಯಕ್ಷ ಉಪಾದ್ಯಕ್ಷರ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು ಅದ್ಯಕ್ಷ ಉಪಾದ್ಯಕ್ಷರ ಹೆಸರುಗಳನ್ನು ಇವತ್ತೇ ರಾತ್ರಿ ಹತ್ತು ಗಂಟೆಗೆ ಡಿಕ್ಲೇರ್ ಮಾಡುತ್ತೇವೆ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು ಅದ್ಯಕ್ಷ ಉಪಾದ್ಯಕ್ಷರ ಹೆಸರುಗಳನ್ನು ಇವತ್ತೇ ರಾತ್ರಿ ಹತ್ತು ಗಂಟೆಗೆ ಡಿಕ್ಲೇರ್ ಮಾಡುತ್ತೇವೆ ಎಂದು ಕೆಏಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಸಂಕಮ್ ಹೊಟೇಲ್ ನಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಅದ್ಯಕ್ಷ ಆಗಬೇಕೆನ್ನುವ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ ಲಕ್ಷ್ಮಣ ಸವದಿ,ರಮೇಶ್ ಜಾರಕಿಹೊಳಿ,ಮತ್ತು ಉಮೇಶ್ ಕತ್ತಿ ಮತ್ತು ಇನ್ನುಳಿದ …

Read More »

ದೆಹಲಿಯಲ್ಲಾಗಿರುವ ಬೆಳವಣಿಗೆಗಳB.S.Y.ಗೆ ಮಾಹಿತಿ ನೀಡಿದಶಂಕರಗೌಡ ಪಾಟೀಲ್

ಬೆಳಗಾವಿ – ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳ ಕುರಿತು ದೆಹಲಿಯಲ್ಲಾಗಿರುವ ಬೆಳವಣಿಗೆಗಳ ಮಾಹಿತಿ ನೀಡಿದರು.             ಕಳೆದ ನಾಲ್ಕು ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದ ಅವರು, ಹಲವು ಕೇಂದ್ರದ ಮಂತ್ರಿಗಳ ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಹಾಗೂ ಯೋಜನೆಗಳ ಬಗ್ಗೆ ಚರ್ಚಿಸಿದ ನಂತರ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ರಾಜ್ಯದ …

Read More »

ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ-

ಬೆಂಗಳೂರು: ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನಡೆಯಿತು. ಮಗ ಕರ್ಣ ಮತ್ತು ಹಿಮವಂತ್, ರವಿ ಬೆಳಗೆರೆ ಅವರ ಅಂತಿಮ ಕಾರ್ಯವನ್ನು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿಸಿದರು. ತೇಗ, ಮಾವು, ಸಾರ್ವೆ ಸೇರಿದಂತೆ ವಿವಿಧ 1 ಟನ್‍ಗೂ ಹೆಚ್ಚು ಮರದ ಸೌದೆಗಳನ್ನು ಅಂತ್ಯ ಸಂಸ್ಕಾರದ ವೇಳೆ ಬಳಕೆ ಮಾಡಲಾಗಿತ್ತು. ಶಿವರಾಂ ಅವರು ಅಂತ್ಯ ಸಂಸ್ಕಾರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ನಿನ್ನೆ ಮಧ್ಯರಾತ್ರಿ ಸುಮಾರು 12.15ರ …

Read More »

ಮದುವೆ ಮಂಟಪಕ್ಕೆ ಮದುಮಗಳು ಬುಲೆಟ್‍ನಲ್ಲಿ ಸೋಲೋ ರೈಡ್ ಮೂಲಕ ಎಂಟ್ರಿ

ಮಂಗಳೂರು: ಮದುವೆ ಮಂಟಪಕ್ಕೆ ಮದುಮಗಳು ಬುಲೆಟ್‍ನಲ್ಲಿ ಸೋಲೋ ರೈಡ್ ಮೂಲಕ ಎಂಟ್ರಿ ಕೊಟ್ಟು ಮದುವೆಗೆ ಬಂದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಸುರತ್ಕಲ್ ಮೂಲದ ಪೂಜಾ, ಆಕಾಶ್ ಎಂಬ ವರನನ್ನು ಇತ್ತೀಚೆಗೆ ಮದುವೆಯಾಗಿದ್ದಾರೆ. ಮದುವೆ ಸಮಯದಲ್ಲಿ ಮಂಟಪಕ್ಕೆ ಬುಲೆಟ್ ಮೂಲಕ ಎಂಟ್ರಿ ಕೊಟ್ಟ ಮದುಮಗಳ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ವಧು ಪೂಜಾ ಅವರಿಗೆ ಬುಲೆಟ್ ಎಂದರೆ ಸಖತ್ ಇಷ್ಟ. ಪೂಜಾ …

Read More »

ಗೆಳತಿ ನಂತ್ರ ಎನ್‍ಸಿಬಿ ವಿಚಾರಣೆಗೆ ಹಾಜರಾದ ಅರ್ಜುನ್ ರಾಂಪಾಲ್

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಕಪೂರ್ ಎನ್‍ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಬೆಳಗ್ಗೆ 11.10ಕ್ಕೆ ಎನ್‍ಸಿಬಿ ಕಚೇರಿ ಆಗಮಿಸಿದ ನಟನನ್ನ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದಕ್ಕೂ ಮುನ್ನ ಗುರುವಾರ ತಡರಾತ್ರಿ ರಾಂಪಾಲ್ ಗೆಳೆಯ ಪಾಲ್ ಬಾರ್ಟೆಲ್ ನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗುರುವಾರ ವಿಚಾರಣೆಗೆ ಹಾಜರಾಗಿದ್ದ ಪಾಲ್ 10 ಗಂಟೆಯ ಬಳಿಕ ಅಧಿಕಾರಿಗಳು ಬಂಧಿಸುವ ಮೂಲಕ ಶಾಕ್ ನೀಡಿದ್ದರು. ಬಂಧಿತ ಪಾಲ್ ಆಸ್ಟ್ರೇಲಿಯಾ ಮೂಲಕ ಆರ್ಕಿಟೆಕ್ಟ್ …

Read More »

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟರನ್ನು ರಕ್ಷಿಸಲು ನೈಜ ಪತ್ರಕರ್ತರ ಕತ್ತು ಹಿಸುಕಲಾಗುತ್ತಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ಟ್ ರನಲ್ಲಿ ಬಿಜೆಪಿ ವಿರುದ್ಧ ಆಕ್ರೋಶ

ನವದೆಹಲಿ: “ಬಿಜೆಪಿ ನಾಯಕರ ಭ್ರಷ್ಟಾಚಾರ ಬಯಲಿಗೆಳೆದ ಪತ್ರಕರ್ತನನ್ನು ಅನುಮಾನಾಸ್ಪದವಾಗಿ ಹತ್ಯೆ ಮಾಡಲಾಗಿದೆ. ಅವರ ಕುಟುಂಬಕ್ಕೆ ತನ್ನ ಸಂತಾಪಗಳು. ಇದು ಮಧ್ಯಪ್ರದೇಶ ಅಥವಾ ಉತ್ತರ ಪ್ರದೇಶವಿರಲಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟರನ್ನು ರಕ್ಷಿಸಲು ನೈಜ ಪತ್ರಕರ್ತರ ಕತ್ತು ಹಿಸುಕಲಾಗುತ್ತಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ಟ್ ರನಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಕೂಡ ಈ ವಿಷಯ ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ, ಉತ್ತರ ಪ್ರದೇಶ ಪತ್ರಕರ್ತ ವಿನಯ್ ತಿವಾರಿ …

Read More »