Breaking News

Uncategorized

ಸುರೇಶ್ ಕುಮಾರ್ ಹೇಳಿಕೆಗೆ ಖಾಸಗಿ ಶಾಲೆಗಳ ಆನ್‍ಲೈನ್ ಕ್ಲಾಸ್ ಬಂದ್ – ಕ್ಯಾಮ್ಸ್ ಎಚ್ಚರಿಕೆ?

ಬೆಂಗಳೂರು: ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವುದಿಲ್ಲ ಎಂದು ಶಾಲೆಗಳು ಹೇಳುವಂತಿಲ್ಲ ಎಂಬ ಸುರೇಶ್ ಕುಮಾರ್ ಹೇಳಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಿಡಿದೆದ್ದಿದೆ.ಶಿಕ್ಷಣ ಸಚಿವರು ತಮ್ಮ ಹೇಳಿಕೆಗೆ ನವೆಂಬರ್ 30ರೊಳಗೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಆನ್‍ಲೈನ್ ಕ್ಲಾಸ್ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುವ ಮೂಲಕ ಸರ್ಕಾರಕ್ಕೆ ಸಡ್ಡು ಹೊಡೆದಿದೆ. ಶಿಕ್ಷಣ ಮಂತ್ರಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಸಚಿವರು ಮನುಷ್ಯತ್ವ ಇಲ್ಲದೆ ಹೇಳಿಕೆ ಕೊಡ್ತಿದ್ದಾರೆ. ಶುಲ್ಕ ಕಟ್ಟಡೇ …

Read More »

ನಿವಾರ್ ಸೈಕ್ಲೋನ್ ಮುಂದಿನ ಮೂರು ದಿನ ಮಳೆ ಸಂಭವ…………?

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ನಿವಾರ್ ಸೈಕ್ಲೋನ್ ಇನ್ನೆರಡು ದಿನಗಳಲ್ಲಿಯೇ ಅಪ್ಪಳಿಸಲಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಸೈಕ್ಲೋನ್ ಪರಿಣಾಮ ನವೆಂಬರ್ 25 ರಿಂದ 27ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ.ಬಂಗಾಲ ಉಪಸಾಗರ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನ.25 ರಂದು ತಮಿಳುನಾಡು ಹಾಗೂ ಪಾಂಡಿಚೇರಿ ಕರಾವಳಿಯಲ್ಲಿ ದಾಟಿ ಕಾರೈಕಲ್, ಮಾಮಲಪುರಂ ಹತ್ತಿರ ಸೈಕ್ಲೋನ್ ಕ್ರಾಸ್ ಆಗುತ್ತೆ. ಇದರ ಪ್ರಭಾವದಿಂದಾಗಿ ಕರಾವಳಿಯ ಕೆಲ …

Read More »

ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ

ಲಕ್ನೋ: ಲವ್ ಜಿಹಾದ್ ಕುರಿತು ಹೆಚ್ಚು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದು, ಒಂದು ವೇಳೆ ಆರೋಪ ಸಾಬೀತಾದಲ್ಲಿ 5 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವಂತೆ ಕಾನೂನು ರೂಪಿಸಲಾಗಿದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಕೇಂದ್ರ ಕಾನೂನು ಸಚಿವಾಲಯದ ಬಳಿ ಈ ಕುರಿತು ಯುಪಿ ಸರ್ಕಾರ ಚರ್ಚಿಸಿತ್ತು. ಇದೀಗ ಸುಗ್ರೀವಾಜ್ಞೆ …

Read More »

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಸಹಾಯವಾಣಿಯನ್ನು ಆರಂಭಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳುವ ಭಕ್ತಾದಿಗಳಿಗೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದರೂ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕುರಿತು ಸುದ್ದಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಯಾತ್ರಾರ್ಥಿಗಳಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಕೇರಳದ ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಹೆಲ್ಪ್ ಲೈನ್ ಆರಂಭಿಸಿ ಸರ್ಕಾರ ಆದೇಶ ಹೊರಡಿಸಿದೆ. 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ಕಾರ್ಯಕ್ರಮಕ್ಕೆ ತೆರಳುವ ಭಕ್ತರ ಸಮಸ್ಯೆ ಆಲಿಸಲು ಹಾಗೂ ಆರೋಗ್ಯ ಸಲಹೆಗಳಿಗಾಗಿ ಈ ಸಹಾಯವಾಣಿಯನ್ನು ಆರಂಭಿಸಿದೆ. ಕೊರೊನಾ ಹಿನ್ನಲೆ ಶಬರಿಮಲೆ …

Read More »

ಕೊಬ್ಬರಿ ಹೋರಿ ಹಿಡಿಯಲು ಹೋಗಿ ಗೋರಿ ಸೇರಿದ ಯುವಕ….

ಹಾವೇರಿ: ಕೊಬ್ಬರಿ ಹೋರಿ ಓಡಿಸೋ ಹಬ್ಬದಲ್ಲಿ ಹಿಡಿಯಲು ಹೋಗಿದ್ದ ಯುವಕನಿಗೆ ಹೋರಿ ಗುದ್ದಿ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು 24 ವರ್ಷದ ಚಂದ್ರು ಈರಕ್ಕನವರ ಎಂದು ಗುರುತಿಸಲಾಗಿದೆ. ಮೃತ ಚಂದ್ರು, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ನಿವಾಸಿಯವನಾಗಿದ್ದು, ಕೊಬ್ಬರಿ ಹೋರಿ ಹಬ್ಬಕ್ಕಾಗಿಯೇ ಕೆರಿಮತ್ತಿಹಳ್ಳಿಗೆ ಬಂದಿದ್ದ. ಪೊಲೀಸ್ ಇಲಾಖೆಯ ಅನುಮತಿ ನಿರಾಕರಣೆ ನಡುವೆಯೂ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಇಂದು ಕೊಬ್ಬರಿ ಹೋರಿ ಓಡಿಸೋ …

Read More »

ಒಬ್ಬನನ್ನು ಕಾಪಾಡಲು ಹೋಗಿ ನಾಲ್ವರು ನೀರುಪಾಲು

ಮಂಗಳೂರು: ನದಿ ನೀರಿನಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಮೂಡುಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮದ ಶಾಂಭವಿ ನದಿಯಲ್ಲಿ ನಡೆದಿದೆ.ಮೃತರನ್ನು ಮೂಡುಶೆಡ್ಡೆಯ ನಿಖಿಲ್ (18), ಹರ್ಷಿತಾ (20), ವೇಣೂರಿನ ಸುಭಾಶ್ (19), ಬಜ್ಪೆಯ ರವಿ(30) ಎಂದು ಗುರುತಿಸಲಾಗಿದೆ. ಇದರಲ್ಲಿ ಮೊದಲಿಗೆ ಓರ್ವ ಮುಳುಗಿದ್ದು, ಅವನನ್ನು ಕಾಪಾಡಲು ಯುವತಿ ಸೇರಿ ಮೂವರು ನೀರಿಗೆ ಇಳಿದಿದ್ದಾರೆ. ನಾಲ್ವರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Read More »

ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಅವರನ್ನು ಜೈಲಿನ ಆಸ್ಪತ್ರೆಗೆ ಸ್ಥಳಾಂತರಿಸಿ ಆಕ್ಸಿಜನ್ ಬೆಡ್ ನೀಡಲಾಗಿದೆ. ಬಿಪಿ, ಶುಗರ್, ಹೃದಯಸಂಬಂಧಿ ಖಾಯಿಲೆಗಳಿಂದ ರೋಷನ್ ಬೇಗ್ ಬಳಲುತ್ತಿದ್ದರು. 3 ದಿನಗಳ ಹಿಂದೆ ಅವರನ್ನು ಸಿಬಿಐ ಬಂಧಿಸಿ ವಿಚಾರಣೆಗೊಳಪಡಿಸಿತ್ತು. ನಂತರ ನ್ಯಾಯಾಲಯ 14 ದಿನಗಳ ನ್ಯಾಯಂಗ ವಶಕ್ಕೆ ಒಪ್ಪಿಸಿದೆ. ಈ ಮಧ್ಯೆ ರೋಷನ್ ಬೇಗ್ ಅವರನ್ನು ಇನ್ನಷ್ಟು ವಿಚಾರಣೆಗೊಳಪಡಿಸಬೇಕಿರುವುದರಿಂದ …

Read More »

ಐಎಂಎ ಹಗರಣ: ಇಬ್ಬರು ಐಪಿಎಸ್ ಅಧಿಕಾರಿಗಳ ವಿಚಾರಣೆ..!

ಸಂಸ್ಥೆಗೆ ಸಹಕಾರ ನೀಡಿದ ಆರೋಪದ ಮೇಲೆ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಪೊಲೀಸರನ್ನು ವಿಚಾರಣೆಗೊಳ ಪಡಿಸುವ ಸಾಧ್ಯತೆ ಇದೆ. ಕಾನ್‍ಸ್ಟೆಬಲ್, ಸಬ್‍ಇನ್‍ಸ್ಪೆಕ್ಟರ್‍ಗಳಿಂದ ಹಿಡಿದು ಆಗಿನ ಜಂಟಿ ಆಯುಕ್ತರವರೆಗೂ ಹಲವಾರು ಮಂದಿಯ ಹೆಸರುಗಳು ಪ್ರಕರಣದಲ್ಲಿ ಕೇಳಿಬಂದಿದೆ. ಆಗಿನ ಡಿಸಿಪಿ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ಹೆಸರನ್ನು ಪಟ್ಟಿ ಮಾಡಿಕೊಳ್ಳಲಾಗಿದ್ದು, ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸದ್ಯಕ್ಕೆ ಬಂಧಿತರಾಗಿರುವ ರೋಷನ್ ಬೇಗ್ ಅವರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, …

Read More »

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನೆಯ ಬಗ್ಗೆ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮೆಚ್ಚುಗೆ

ಬೆಳಗಾವಿ: ಕೋವಿಡ್-19 ಸಂದರ್ಭದಲ್ಲಿಯೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.100ಕ್ಕೆ ನೂರರಷ್ಟು ಪ್ರವೇಶ ಮತ್ತು ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ಗಳಿಸುತ್ತಿರುವ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನೆಯ ಬಗ್ಗೆ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಅವರು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜತೆ ಚರ್ಚೆ ನಡೆಸಿದರು. ಪ್ರತಿವರ್ಷ ಅತ್ಯುತ್ತಮ ಫಲಿತಾಂಶಗಳಿಸುತ್ತಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ …

Read More »

ಅಜಯ್ ಹಿಲೋರಿಗೆ ಸಿಬಿಐ ಅಧಿಕಾರಿಗಳು ನೋಟೀಸ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ಸಿಬಿಐ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಐಎಂಎ ಹಗರಣದಲ್ಲಿ ವಂಚಿತರ ಸಂಕಷ್ಟ ಆಲಿಸದೇ ಆರೋಪಿ ಮನ್ಸೂರ್ ಖಾನ್ ಗೆ ಸಹಕರಿಸಿದ್ದಾರೆ. ಅಲ್ಲದೇ ಕಿಕ್ ಬ್ಯಾಕ್ ಪಡೆದುಕೊಂದಿದ್ದಾರೆ ಎಂಬ ಆರೋಪ ಅಜಯ್ ಹಿಲೋರಿ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿವಂತೆ ಸಿಬಿಐ ಹಿಲೋರಿಗೆ ನೋಟೀಸ್ ನೀಡಿದೆ. ಈ ಹಿಂದೆ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳಾದ ಹೇಮಂತ್ …

Read More »