Breaking News

Uncategorized

ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ

ಬೆಂಗಳೂರು (ಜ. 1): ಹೊಸ ವರ್ಷದ ಆರಂಭದ ದಿನವಾದ ಇಂದಿನಿಂದ ಕರ್ನಾಟಕದಲ್ಲಿ SSLC ಹಾಗೂ Second PUC ತರಗತಿಗಳು ಆರಂಭವಾಗಲಿವೆ. ಸಕಲ‌ ಸಿದ್ಧತೆಗಳೊಂದಿಗೆ ವಿಧ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ. ಇಂದು ಬೆಳಗ್ಗೆ 10 ಗಂಟೆಯಿಂದ ತರಗತಿಗಳು ಆರಂಭವಾಗಲಿವೆ. ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಖಾಸಗಿ ಸಂಸ್ಥೆ ಹಾಗೂ ಅನುದಾನ ರಹಿತ ಸಂಸ್ಥೆಗಳಿಗೆ ಎಸ್ಒಪಿ ಕೊಟ್ಟು ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ. …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 1 ರಿಂದ 5ರವರೆಗೆ ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 1 ರಂದು ಮಧ್ಯಾಹ್ನ 2.30 ಗಂಟೆಗೆ ಗುವಾಹಟಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ಗೋಕಾಕ ಆಗಮಿಸಿ ವಾಸ್ತವ್ಯ ಮಾಡುವರು. ದಿ. 2 ರಂದು ಮುಂಜಾನೆ 11.15 ಗಂಟೆಗೆ ತಾಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ …

Read More »

ಭಾರತದಲ್ಲಿ ತಯಾರಾದ ಲಸಿಕೆಗಳನ್ನು ಜನರಿಗೆ ನೀಡಲಾಗುವುದು

ಅಹ್ಮದಾಬಾದ್: 2021ನೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ, ಕಾಳಜಿಯನ್ನು ಮರೆಯದೆ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕೊರೋನಾ ಲಸಿಕೆ ಬಂದ ನಂತರವೂ ಇದನ್ನು ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕಿವಿಮಾತು ಹೇಳಿದ್ದಾರೆ. ರಾಜ್ ಕೋಟ್ ನಲ್ಲಿ ಏಮ್ಸ್ ಸಂಸ್ಥೆ ನಿರ್ಮಾಣಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹೊಸ ಕೊರೋನಾ ಕೇಸುಗಳು ದೇಶದಲ್ಲಿ …

Read More »

ಮೃತ ಕುಟುಂಬಸ್ಥರಿಗೆ ಧನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೊಳಿ

    ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಹೊಲದಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಶಿನಿನಲ್ಲಿ ಸೀರೆ ಸಿಲುಕಿ ಮರಣ ಹೊಂದಿದ್ದ ಪಾಶ್ಚಾಪುರದಲ್ಲಿರುವ ಮೃತ ಯಮನವ್ವ ದುಂಡಪ್ಪ ಉಪ್ಪಾರ ಇವರ ಮನೆಗೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೊಳಿಯವರ ಪುತ್ರ ರಾಹುಲ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರು ಮೃತ ಕುಟುಂಬದ ಸದಸ್ಯರಿಗೆ ಧನ ಸಹಾಯ ಮಾಡಿದರು. ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಗಣಿ ದರ್ಗಾ ಮಾತನಾಡಿ ಇವತ್ತಿನ …

Read More »

ಈ ಬಾರಿ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ.

ಬೆಂಗಳೂರು(ಡಿ.31): ಪ್ರತಿ ಬಾರಿ ನ್ಯೂ ಇಯರ್ ಬಂತು ಅಂದ್ರೆ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಜಗಮಗಿಸುತ್ತಿದ್ದವು. ನೋಡುಗರ ಕಣ್ಣಿಗೆ ಅದೇ ಹಬ್ಬದಂತೆ ಇರ್ತಿತ್ತು. ಆದ್ರೆ ಈ ಬಾರಿ ಹೊಸ ವರ್ಷಕ್ಕೆ ಬ್ರಿಗೇಡ್ ರಸ್ತೆ ಬಿಕೋ ಎನ್ನುತ್ತಿದೆ. ಪ್ರತಿವರ್ಷ ಹೊಸ ವರ್ಷಾಚರಣೆ ವೇಳೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದ ಬ್ರಿಗೇಡ್ ರಸ್ತೆಯಲ್ಲಿ ಈ ಬಾರಿ ನೀರವ ಮೌನ ಹಾಗೂ ಬಿಕೋ ಎನ್ನುವಂತ …

Read More »

ದೆಹಲಿಯಲ್ಲಿ ರಾತ್ರಿ ಕಫ್ರ್ಯೂ

ನವದೆಹಲಿ, ಡಿ.31-ರೂಪಾಂತರ ವೈರಸ್ ಕಾರಣ ದೆಹಲಿ ಸರ್ಕಾರ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆ ತನಕ ನಗರಾದ್ಯಂತ ಕಫ್ರ್ಯೂ ವಿಧಿಸಿದೆ. ಹೊಸ ವರ್ಷ ಆಚರಣೆಗಾಗಿ ನಡೆಸುವ ದೊಡ್ಡ ಗುಂಪು ಗಳನ್ನು ತಪ್ಪಿಸುವ ಸಲುವಾಗಿ ಡಿ.31 ರಾತ್ರಿಯಿಂದ ಜ.1 ವರೆಗೆ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದೆ. ಬ್ರಿಟನ್ ಯಿಂದ ಬಂದಿರುವ ರೂಪಾಂತರ ಕೊರೊನಾ ವೈರಾಣು ಪರಿಣಾಮ ಮತ್ತು ಅದರ ಹರಡುವಿಕೆಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ …

Read More »

Bsy ಸುದ್ದಿ ಗೋಷ್ಠಿ ಅಚ್ಚರಿಯ ವಿಷಯಗಳ ಹೇಳಿಕೆ

ಬೆಂಗಳೂರು: ಹೊಸ ವರ್ಷದ ಹೊಸ್ತಿಲಲ್ಲಿರುವ ಜನರಿಗೆ ಕೊರೊನಾ ಅಟ್ಟಹಾಸದಿಂದಾಗಿ ಸಂಭ್ರಮಾಚರಣೆಗೆ ಅವಕಾಶ ನೀಡದೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ. ವರ್ಷಾಂತ್ಯಕ್ಕೆ ಕುಣಿದು ಕುಪ್ಪಳಿಸಲು ಅವಕಾಶ ನೀಡದೆ, ಕಟ್ಟು ನಿಟ್ಟಿನ ಮಾರ್ಗಸೂಚಿ ಹೊರಡಿಸಿರುವ ಗೃಹ ಇಲಾಖೆ ಆ ಮೂಲಕ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್​ ಹಾಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಇಂದು‌ ಮಧ್ಯಾಹ್ನ 12 ಗಂಟೆಯಿಂದಲೇ 144 ಸೆಕ್ಷನ್ ಜಾರಿಯಲ್ಲಿರಲಿದೆ. ಸಂಜೆ 6ರ ಬದಲು‌ ಮಧ್ಯಾಹ್ನ 12ರಿಂದಲೇ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. …

Read More »

ಒಂಬತ್ತು ವರ್ಷ ಕಳೆದರೂ ಇಂದು ದಿನವೂ ಅವರು ನಮ್ಮನ್ನು ಅಗಲಿದ್ದಾರೆ ಎಂದು ಅನಿಸಿಲ್ಲ ಅಂತಾರೆ ಸಣ್ಣ ಸಾಹುಕಾರರು

ಒಂಬತ್ತು ವರ್ಷ ಕಳೆದರೂ ಇಂದು ದಿನವೂ ಅವರು ನಮ್ಮನ್ನು ಅಗಲಿದ್ದಾರೆ ಎಂದು ಅನಿಸಿಲ್ಲ ಅಂತಾರೆ ಸಣ್ಣ ಸಾಹುಕಾರರು ಹೌದು ಇಂದು ಶ್ರೀ ಲಕ್ಷ್ಮಣರಾವ್ ರಾವ ಜಾರಕಿಹೊಳಿ ದಂಪತಿಗಳ ಪುಣ್ಯ ಸ್ಮರಣೆ, ಇವತ್ತು ಶ್ರೀ ಲಖನ ಜಾರಕಿಹೊಳಿ ಅವರು ತಂದೆ ತಾಯಿಯ ಬಗ್ಗೆ ಮಾತನಾಡಿ ನಮ್ಮ ಬೆನ್ನೆಲುಬು, ನಮ್ಮ ನಡೆದು ಬಂದ್ ದಾರಿಗೆ ದಾರಿದೀಪ, ನಮ್ಮ ಪ್ರತಿಯೊಂದು ಏಳುಬೀಳು ಎಲ್ಲವನ್ನೂ ಮೆಟ್ಟಿನಿಂತು, ನಮ್ಮ ಎಲ್ಲ ಸಹೋದರರನ್ನು ಒಂದು ಒಳ್ಳೆಯ ಮಾರ್ಗ ದರ್ಶನ, …

Read More »

ಆಸ್ಪತ್ರೆಗೆ ತೆರಳುತ್ತಿದ್ದವರು ಮಸಣಕ್ಕೆ

ಧಾರವಾಡ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಸವದತ್ತಿ ಬಳಿ ನಡೆದಿದೆ. ಮೃತರನ್ನು ನಾಗರಾಜ ಇಚ್ಚಂಗಿ (30), ವಿಜಯಾ (42) ಹಾಗೂ ರೇವಣಸಿದ್ದೇಶ್ವರ ಇಚ್ಚಂಗಿ (46) ಎಂದು ಗುರುತಿಸಲಾಗಿದೆ. ರೇವಣಸಿದ್ದೇಶ್ವರ ಎಂಬುವವರಿಗೆ ಡಯಾಲಿಸಿಸ್ ಮಾಡಿಸಲೆಂದು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಹಾಗೂ ಲಾರಿ ಎರಡೂ ವಾಹನಗಳ ಚಾಲಕರಿಗೆ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. …

Read More »

ಈ ವರ್ಷ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಕ್ಕೂ ಅಡ್ಡಿ

ನವದೆಹಲಿ: ಕೊರೊನಾ ಭೀತಿಯಿಂದಾಗಿ ಈ ವರ್ಷ ಎಲ್ಲಾ ಹಬ್ಬ, ಆಚರಣೆ, ಸಡಗರ-ಸಂಭ್ರಮಗಳಿಗೆ ಬ್ರೇಕ್ ಬಿದ್ದಿದ್ದು. ಇದೀಗ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಕ್ಕೂ ಅಡ್ಡಿಯುಂಟಾಗಿದೆ. ದೆಹಲಿಯ ರಾಜಪಥದಲ್ಲಿ ನಡೆಯುವ ವಿಜೃಂಭಣೆಯ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಮದಲ್ಲಿ ಕೊರೊನಾ ಕಾರಣದಿಂದಾಗಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಪ್ರತಿವರ್ಷ ವಿಜಯ್ ಚೌಕ್ ನಿಂದ ಆರಂಭವಾಗಿ ಕೆಂಪುಕೋಟೆವರೆಗೂ ಸಾಗುತ್ತಿದ್ದ ಪರೇಡ್ ಈ ವರ್ಷ ನ್ಯಾಷನಲ್ ಸ್ಟೇಡಿಯಂವರೆಗೆ 3.3 ಕಿ.ಮೀ ವರೆಗೆ ಸಾಗಲಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ 1,5,000 ಲಕ್ಷ …

Read More »