ಬೆಳಗಾವಿ: ಕುಂದಾ ನಗರಿಯಿಂದ ಬೆಂಗಳೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂಗಳಾದ ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪ್ರಯಾಣ ಬೆಳೆಸಿದ್ದಾರೆ.ಬೆಳಗಾವಿಯಿಂದ 7.40ಕ್ಕೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜೊತೆಯಾಗಿ ಫ್ಲೈಟ್ ಏರಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆ ಸಿಎಂ ಸೇರಿದಂತೆ ಬಹುತೇಕ ಎಲ್ಲ ಕಮಲ ನಾಯಕರು ಬೆಳಗಾವಿಗೆ ಆಗಮಿಸಿದ್ದರು. ಇತ್ತ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ …
Read More »ಕೊಟ್ಟ ಮಾತು ಉಳಿಸಿಕೊಂಡ B.S.Y. – ಮದಲೂರು ಕೆರೆಗೆ ತಲುಪಿದ ಹೇಮಾವತಿ ನೀರು
ತುಮಕೂರು: ಇಂದು ಹೇಮಾವತಿ ನಾಲೆಯಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿದು ಬಂದಿದ್ದು, ಸಿಎಂ ಯಡಿಯೂರಪ್ಪ ಉಪಚುನಾವಣೆ ವೇಳೆ ಶಿರಾ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.ಳೆದ ತಿಂಗಳು ನಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಮದಲೂರು ಕೆರೆಗೆ ನೀರನ್ನು ಹರಿಸುತ್ತೇವೆ ಎಂಬ ಪ್ರಮುಖ ಅಜೆಂಡಾವನ್ನು ಇಟ್ಟುಕೊಂಡಿತ್ತು. ಅದರಂತೆ ಇಂದು ಮದಲೂರು ಕೆರೆಗೆ ನೀರು ಬಂದು ತಲುಪಿದೆ. ನವೆಂಬರ್ 30ರಂದು ಕಳ್ಳಂಬೆಳ್ಳ ಕೆರೆಯಿಂದ ನೀರು ಬಿಡಲಾಗಿತ್ತು. ಸತತ …
Read More »ಮುಂಬೈ ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಇದೆ. ಮಹಾರಾಷ್ಟ್ರದ ಸರ್ಕಾರ ಹತ್ತು ಕೋಟಿ ಹಣ ನೀಡುತ್ತಿದೆ:ಮರಾಠಿ ದ್ವೇಷ ಬಿಡಿ – ಯತ್ನಾಳ್
ಬೆಂಗಳೂರು: ಮುಂಬೈ ಬೊರಿವಿಲಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ಅದಕ್ಕೆ ಮಹಾರಾಷ್ಟ್ರದ ಸರ್ಕಾರ ಹತ್ತು ಕೋಟಿ ಹಣ ನೀಡುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಿ ಹಾಗೂ ಮರಾಠರ ಮೇಲೆ ಇರುವ ದ್ವೇಷ ಬಿಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಈ ಸಂಬಂಧ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್ ಪ್ರಕಟಿಸಿ ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ …
Read More »ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಶನಿವಾರ ರೈತರೊಂದಿಗೆ 5ನೇ ಸುತ್ತಿನ ಮಾತುಕತೆ
ನವದೆಹಲಿ: ಕೃಷಿ ಮಸೂದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಶನಿವಾರ ರೈತರೊಂದಿಗೆ 5ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಈ ನಡುವಲ್ಲೇ ಕೇಂದ್ರ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜಧಾನಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿವಾಸಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ಮಾತುಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. …
Read More »ಡಿ.8ರಂದು ಕರೆ ನೀಡಿರುವ ‘ಭಾರತ್ ಬಂದ್’ಗೂ ತಮ್ಮ ಬೆಂಬಲವ್ಯಕ್ತಪಡಿಸಿರುವ ಎಡ ಪಕ್ಷಗಳ ಸಂಘಟನೆಗಳು
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಈಗಾಗಲೇ ಬೆಂಬಲ ವ್ಯಕ್ತಪಡಿಸಿರುವ ಎಡ ಪಕ್ಷಗಳ ಸಂಘಟನೆಗಳು ಡಿ.8ರಂದು ಕರೆ ನೀಡಿರುವ ‘ಭಾರತ್ ಬಂದ್’ಗೂ ತಮ್ಮ ಬೆಂಬಲವನ್ನು ವಿಸ್ತರಿಸಿವೆ. ದೇಶಾದ್ಯಂತ ರೈತರ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್), ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಹಾಗೂ ಅಖಿಲ ಭಾರತ ಫಾರ್ವರ್ಡ್ ಪಕ್ಷಗಳು ಶುಕ್ರವಾರ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತ …
Read More »ಕರ್ನಾಟಕ ಬಂದ್ ಗೆ ರಾಜ್ಯದ ಹಲವೆಡೆ ನೀರಸ ಪ್ರತಿಕ್ರಿಯೆಬಸ್ ಮೇಲೆ ಕಲ್ಲು ತೂರಾಟ
ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯದ ಹಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವೆಡೆಗಳಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹೊಸೂರು ರಸ್ತೆಯ ಹಳೇ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು …
Read More »ಬಂದ್ ವೇಳೆ ಕುಡುಕನ ರಂಪಾಟಕ್ಕೆ ಪೊಲೀಸರು ಸುಸ್ತು
ಗದಗ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಇಂದು ಬೀದಿಗಿಳಿದಿವೆ. ಈ ಮಧ್ಯೆ ಕುಡುಕನೋರ್ವ ರಂಪಾಟ ಮಾಡಿದ್ದು, ಪೊಲೀಸರೇ ಸುಸ್ತಾದ ಘಟನೆ ಗದಗ್ ನಲ್ಲಿ ನಡೆದಿದೆ. ಹೌದು. ಸರ್ಕಾರದ ವಿರುದ್ಧ ಗದಗ ನಗರದ ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಕುಡುಕ ರಾದ್ಧಾಂತ ಮಾಡಿದ್ದಾನೆ. ಕುಡುಕನ ರಗಳೆಗೆ ಪೊಲೀಸರು ಹಾಗೂ ಪ್ರತಿಭಟನೆಕಾರರು ಸುಸ್ತಾಗಿದ್ದಾರೆ. ಪ್ರತಿಭಟನೆಯಲ್ಲಿ ಕುಡುಕನ ರಂಪಾಟ ಪೊಲೀಸರಿಗೆ ಪ್ರಾಣ …
Read More »ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಬಂದ್
ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಲ್ಲಿರುವ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ನೆರಳೆ ಮತ್ತು ಹಸಿರು ಮಾರ್ಗಗಳನ್ನು ಜೋಡಿಸುವ ಕಂಪೇಗೌಡ ನಿಲ್ದಾಣದಿಂದ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಆದರೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಈ ನಿಲ್ದಾಣವನ್ನು ಬಂದ್ ಮಾಡಲಾಗಿದೆ.ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬಂದ್ ಮಾಡುತ್ತಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಬಂದ್ ಆದ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಬಂದ ಪ್ರಯಾಣಿಕರು ವಾಪಸ್ ತೆರಳುತ್ತಿದ್ದಾರೆ.
Read More »ವಾಶಿಂಗ್ ಮಷಿನ್ ರಿಪೇರಿ ನೆಪದಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
ಬೆಳಗಾವಿ: ವಾಶಿಂಗ್ ಮಷಿನ್ ರಿಪೇರಿ ಮಾಡುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕಂಗ್ರಾಳಿ ಕೆ.ಎಚ್. ವಿಶಾಲ ಗಲ್ಲಿಯ ಮಾರುತಿ ಪರಶುರಾಮ ಜಾಧವ (೨೬), ವೈಭವ ನಗರದ ಶುಭಂ ರಾಜು ಬಾತಖಂಡೆ (೨೫) ಬಂಧಿತರು. ನ. 30 ರಂದು ರಾತ್ರಿ 9 ಗಂಟೆಗೆ ಶಿವಾಜಿ ನಗರದ ಶೋಭಾ ಗುರುರಾವ್ ಕಾಥವಟೆ ಎಂಬುವವರ ಮನೆಗೆ ವಾಶಿಂಗ್ ಮಶಿನ್ ರಿಪೇರಿ …
Read More »ಬಿ.ಎಸ್.ಯಡಿಯೂರಪ್ಪ ಸಭಾಭವನದ ಉದ್ಘಾಟನೆ ನೆರವೇರಿಸಿದ ವಿಜಯೇಂದ್ರ
ಬೆಳಗಾವಿ: ಬೆಳಗಾವಿಯ ಆಟೋನಗರದ ಗುರು ರೋಡ್ ಲೈನ್ಸ್ ಕಚೇರಿ ಆವರಣದಲ್ಲಿ ಗುರು ರೋಡ್ ಲೈನ್ಸ್ ಸಂಸ್ಥಾಪಕರಾದ ಗುರುದೇವ ಪಾಟೀಲ ಅವರ ಇಚ್ಚಾಶಕ್ತಿಯಿಂದ ನೂತನವಾಗಿ ನಿರ್ಮಿಸಲಾದ ಬಿ.ಎಸ್.ಯಡಿಯೂರಪ್ಪ ಸಭಾಭವನದ ಉದ್ಘಾಟನೆಯನ್ನು ಬಿ.ವೈ.ವಿಜಯೇಂದ್ರ ಅವರು ನೆರವೇರಿಸಿದರು. ಉದ್ಘಾಟನಾಪರ ಮಾತನಾಡಿದ ಅವರು,”ಪಕ್ಷದ ಕಾರ್ಯಕರ್ತ, ಅಪ್ಪಟ ಅಭಿಮಾನಿಯಾದ ಗುರುದೇವ ಪಾಟೀಲ ಅವರ ಸಂಕಲ್ಪಶಕ್ತಿಯಿಂದ ತಮ್ಮ ಸ್ವಂತ ಜಾಗದಲ್ಲಿ, ಸ್ವಂತ ಖರ್ಚಿನಲ್ಲಿ ತಂದೆಯವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿದ್ದು ವೈಯಕ್ತಿಕವಾಗಿ ನನಗೆ ಅಭಿಮಾನ ತಂದಿದೆ ಎಂದರು. ರಾಜ್ಯದಲ್ಲಿ ರಾಜಕಾರಣಿಯಾಗಿ, …
Read More »