Breaking News

Uncategorized

ಬೆಂಗಳೂರಿಗೆ ಬಂದುತನ್ನ ಅಣ್ಣನ ಆಶೀರ್ವಾದ ಪಡೆದರಜನಿಕಾಂತ್

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿಗೆ ಬಂದು ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವ ತನ್ನ ಅಣ್ಣನ ಆಶೀರ್ವಾದ ಪಡೆದುಕೊಂಡಿದ್ದಾರೆ. ಸೌತ್ ಇಂಡಿಯನ್ ಸೂಪರ್ ಸ್ಟಾರ್ ರಜಿನಿಕಾಂತ್ ಅವರು, ಇದೇ ಡಿಸೆಂಬರ್ 31ಕ್ಕೆ ತಮ್ಮ ಹೊಸ ಪಕ್ಷವನ್ನು ಲಾಂಚ್ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬೆಂಗಳೂರಿಗೆ ಬಂದಿರುವ ರಜನಿಕಾಂತ್ ಅವರು, ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಸೋದರ ಸತ್ಯನಾರಾಯಣ್ ರಾವ್ ಅವರನ್ನು ಭೇಟಿ ಮಾಡಿ ರಾಜಕೀಯ ಪಕ್ಷ ಘೋಷಣೆ …

Read More »

3 ವರ್ಷದ ಬಾಲಕಿ ಮೇಲೆ ಅತ್ಯಾಚಾರ- ಇಬ್ಬರಿಗೆ 20 ವರ್ಷ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಇಬ್ಬರು ನೆರೆಹೊರೆಯವರಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.ಲೈಂಗಿಕ ಅಪರಾಧಗಳಿಗೆ ಮಕ್ಕಳ ವಿಶೇಷ ಸಂರಕ್ಷಣಾ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ನ್ಯಾಯಾಲಯವು 19 ವರ್ಷದ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. 2018 ರಲ್ಲಿ ನೆರೆ ಮನೆಯ 3 ವರ್ಷದ ಬಾಲಕಿಯ ಮೇಲೆ ಈ ಇಬ್ಬರು ಅತ್ಯಾಚಾರ ನಡೆಸಿದ್ದರು. ಈ ಕುರಿತಾಗಿ ತನಿಖೆ ನಡೆಯುತ್ತಿತ್ತು. ಇದೀಗ ಈ …

Read More »

ಕೊರೊನಾದಿಂದಾಗಿ ಬಡತನಕ್ಕೆ ಸಿಲುಕಿದ 100ಕೋಟಿ ಜನ..!

ನವದೆಹಲಿ : ಮಹಾಮಾರಿ ಕೊರೊನಾದಿಂದಾಗಿ ಮುಂದಿನ 10 ವರ್ಷದಲ್ಲಿ ಸುಮಾರು 100 ಕೋಟಿ ಜನ ಕಡುಬಡತನಕ್ಕೆ ಸಿಲುಕಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್‍ಡಿಪಿ) ನಡೆಸಿರುವ ಸಮೀಕ್ಷೆ ಪ್ರಕಾರ ಕೊರೊನಾದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ 207 ಮಿಲಿಯನ್ ಜನ ಕಡು ಬಡತನಕ್ಕೆ ದೂಡಲ್ಪಟ್ಟಿದ್ದಾರೆ. 2030ರ ವೇಳೆಗೆ ಒಂದು ಬಿಲಿಯನ್ ಸರಿಸುಮಾರು 100 ಕೋಟಿ ಜನ ಬಡತನಕ್ಕೆ ಸಿಲುಕಲಿದ್ದಾರೆ ಎಂದು ಹೇಳಲಾಗಿದೆ. ಕೊರೊನಾದಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. …

Read More »

ಕೃಷಿ ಕಾಯ್ದೆ ವಿರೋಧಿಸಿ ನಾಳೆ ಭಾರತ್ ಬಂದ್ – ಕರ್ನಾಟಕದಲ್ಲೂ ಬಂದ್‍ಗೆ ಕರೆ

ಬೆಂಗಳೂರು: ಕೇಂದ್ರದ ವಿರುದ್ಧ ಅನ್ನದಾತನ ಹೋರಾಟದ ಕಿಚ್ಚು, ನೂತನ ಕೃಷಿ ಮಸೂದೆಯ ವಿಚಾರಕ್ಕೆ ದೆಹಲಿಯಂಗಳದಲ್ಲಿ ಈಗ ಹಸಿರು ಹೋರಾಟದ ಕಾವು. ಈಗ ಇದು ಬೆಂಗಳೂರಿನಲ್ಲೂ ಆರಂಭವಾಗಲಿದೆ. ಅಧಿವೇಶನದ ಬೆನ್ನಲ್ಲೆ ನಾಳೆ ಭಾರತ್ ಬಂದ್ ಪ್ರಯುಕ್ತ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೂ ಕರೆಕೊಟ್ಟಿದೆ. ಈ ಮಧ್ಯೆ ನಾಳೆಯುಂದ ಕುರುಬೂರು ಶಾಂತಕುಮಾರ್ ಹಾಗೂ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ಸರ್ಕಲ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯೂ ನಡೆಯಲಿದೆ. ನಾಳೆ ಸರ್ಕಾರದ ವಿರುದ್ಧ ಹೋರಾಟದ …

Read More »

ಮುಂದುವರಿದ ‘ಸಂಪುಟ’ ಸಸ್ಪೆನ್ಸ್ – ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ

ಬೆಂಗಳೂರು: ಬಿಜೆಪಿ ಮನೆಯ ಸಚಿವಾಕಾಂಕ್ಷಿ ಹಕ್ಕಿಗಳಿಗೆ ಇವತ್ತು ಬೆಳಗ್ಗೆ ಇದ್ದ ನಿರೀಕ್ಷೆ, ಕಾತರ ಸಂಜೆ ಹೊತ್ತಿಗೆ ಇಳಿದಿತ್ತು. ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜತೆ ಸಿಎಂ ಯಡಿಯೂರಪ್ಪ ಚರ್ಚಿಸಿ ನಮ್ಮನ್ನ ನಾಳೆ ಬೆಳಗ್ಗೆಯೊಳಗೆ ಸಚಿವರಾಗಿ ಮಾಡೇಬಿಡ್ತಾರೆಂಬ ನಿರೀಕ್ಷೆ ಠುಸ್ ಆಗಿದೆ. ಕಾವೇರಿ ನಿವಾಸದಲ್ಲಿ ಮಧ್ಯಾಹ್ನ ಸಿಎಂ ಮತ್ತು ಅರುಣ್ ಸಿಂಗ್ ನಡುವಿನ ಸಂಪುಟ ವಿಸ್ತರಣೆ ಕುರಿತ ಮಾತುಕತೆ ವಿಫಲವಾಗಿದೆ. ಹೈಕಮಾಂಡ್ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಡದೇ ತನ್ನ …

Read More »

ಸರ್ಕಾರ ಟ್ರ್ಯಾಕ್ ತಪ್ಪಿದೆ, ಸರಿ ಮಾಡ್ಲೇಬೇಕು – ಬಿಎಸ್‍ವೈ ವಿರುದ್ಧ ದೂರುಗಳ ಸುರಿಮಳೆ!

ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಎಲ್ಲವೂ ಕುದಿಮೌನ. ಉಗುಳುವಂತಿಲ್ಲ, ನುಂಗುವಂತಿಲ್ಲ. ಬರೀ ಸೌಂಡ್ ಮಾಡಿ ಕೆಲಸ ಮಾಡದ ಆಡಳಿತ ಯಂತ್ರದ ರಿಪೇರಿ ಮಾಡಬೇಕು ಎನ್ನುವ ಕೂಗು ಕೇಳಿಬಂದಿದೆ. ಸಂಪುಟ ವಿಸ್ತರಣೆ ಗೊಂದಲ, ನಿಗಮ ಮಂಡಳಿ ನೇಮಕಾತಿ ಗೊಂದಲ, ಸರ್ಕಾರದ ನಿರ್ಧಾರಗಳ ಗೊಂದಲಗಳ ಬಗ್ಗೆ ಇವತ್ತು ಪಕ್ಷದ ವೇದಿಕೆಯಲ್ಲಿ ಭರ್ಜರಿಯಾಗಿಯೇ ಸೌಂಡ್ ಮಾಡಿತ್ತು. ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು 6ಕ್ಕೂ ಹೆಚ್ಚು ಸಚಿಚರು, ಇಬ್ಬರು ಸಂಸದರು, ಇಬ್ಬರು ಶಾಸಕರು …

Read More »

ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಸೋಮವಾರ (ಡಿ.7) ಮತ್ತು ಎರಡನೇ ಹಂತದ ಚುನಾವಣೆಗೆ ಶುಕ್ರವಾರ(ಡಿ.11): ಎಂ.ಜಿ.ಹಿರೇಮಠ

ಬೆಳಗಾವಿ:  ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಸೋಮವಾರ (ಡಿ.7) ಮತ್ತು ಎರಡನೇ ಹಂತದ ಚುನಾವಣೆಗೆ ಶುಕ್ರವಾರ(ಡಿ.11) ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ (ಡಿ.6) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಧಿಸೂಚನೆ ಹೊರಡಿಸಿದ ಬಳಿಕ ನಾಮಪತ್ರಗಳನ್ನು ಸ್ವೀಕಾರ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಮೊದಲನೇ ಹಂತಕ್ಕೆ ಡಿ.11; ಎರಡನೇ ಹಂತಕ್ಕೆ ಡಿ.16 ಕಡೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೊದಲನೇ ಹಂತಕ್ಕೆ ಡಿ.12; …

Read More »

ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ EVM ಬಳಿಸುತ್ತಿಲ್ಲ…

ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ EVM ಅಂದ್ರೆ ಮತ ಯಂತ್ರಗಳನ್ನು ಬಳಿಸುತ್ತಿಲ್ಲ,ಬ್ಯಾಲೇಟ್ ಬಾಕ್ಸ್ ಗಳನ್ನು ಬಳಸಲಾಗುತ್ತಿದೆ.ಈ ಬಾರಿ ಬಟನ್ ಒತ್ತುವ ಪರಿಸ್ಥಿತಿ ಇಲ್ಲವೇ ಇಲ್ಲ,ಅಭ್ಯರ್ಥಿಯ ಗುರುತಿನ ಎದುರು ಶಿಕ್ಕಾ ಹೊಡೆದ್ರ ವೋಟ್ ಪಕ್ಕಾ…… ಬೆಳಗಾವಿ, ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಸೋಮವಾರ (ಡಿ.7) ಮತ್ತು ಎರಡನೇ ಹಂತದ ಚುನಾವಣೆಗೆ ಶುಕ್ರವಾರ(ಡಿ.11) ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ (ಡಿ.6) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ …

Read More »

ಅಧಿವೇಶನದಲ್ಲಿ ಸರ್ಕಾರದ ಬೆವರಿಳಿಸಲು ಪ್ರತಿ ಪಕ್ಷ ಕಾಂಗ್ರೆಸ್ ಸಜ್ಜು

ಬೆಂಗಳೂರು, ಡಿ.6- ಗೋಹತ್ಯೆ ನಿಷೇಧ, ಲವ್‍ಜಿಹಾದ್, ಭೂ ಸುಧಾರಣೆ, ಎಪಿಎಂಸಿಯಂತಹ ವಿವಾದಿತ ಕಾಯ್ದೆಗಳ ಅಂಗೀಕಾರಕ್ಕೆ ವಿಧಾನಮಂಡಲದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಇಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಉಭಯ ಸದನಗಳ ನಾಯಕರ ಹಾಗೂ ಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರದ ನಡವಳಿಕೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತವಾಯಿತು. ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾನೂನುಗಳನ್ನು ಜಾರಿಗೆ ತರುತ್ತಿಲ್ಲ. …

Read More »

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ನಾಳೆಯಿಂದ

ಬೆಂಗಳೂರು, ಡಿ.6- ಹಿಂದೆಂದಿಗಿಂತಲೂ ಭಾರೀ ಬಿರುಸಿನ ಸ್ಪರ್ಧೆ ಕಂಡಿರುವ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ನಾಳೆಯಿಂದ ಆರಂಭಗೊಳ್ಳಲಿದೆ. ರಾಜ್ಯದ ಒಟ್ಟು 5,762 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ 2,930 ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆದರೆ, ಎರಡನೇ ಹಂತದಲ್ಲಿ 2,832 ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆಯಲಿದೆ. 113 ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ಡಿ. 22ರಂದು ನಡೆಯಲಿದೆ. ಮೊದಲ …

Read More »