Breaking News

Uncategorized

ಸೆಂಟ್ರಲ್ ವಿಸ್ತಾ : ನೂತನ ಸಂಸತ್ ಭವನ ನಿರ್ಮಾಣ ಕಾರ್ಯ ಶುರು

ನವದೆಹಲಿ ಜ.15- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯಡಿ ರೂಪಿಸಲಾದ ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ದೊರೆತಿದೆ. ಕಳೆದ ಒಂದು ತಿಂಗಳ ಹಿಂದೆ ಬೃಹತ್ ಸಂಸತ್ ಭವನ ನಿರ್ಮಾಣ ಯೋಜನೆಯ ಅದ್ಧೂರಿ ಶಂಕು ಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಟ್ಟಿಗೆ ಇಡುವ ಮೂಲಕ ನೆರವೇರಿಸಿದ್ದರು. ತ್ರಿಕೋನಾಕೃತಿಯಲ್ಲಿ ನಿರ್ಮಾಣವಾಗಲಿರುವ ಪಾರ್ಲಿಮೆಂಟ್ ಕಟ್ಟಡ 2022ರ 75ನೇ ಸ್ವಾತಂತ್ರ್ಯೋತ್ಸವ ದಿನಕ್ಕೆ ಪೂರ್ಣಗೊಳ್ಳಲಿದೆ. ನೂತನ …

Read More »

ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲೇಬೇಕು.

ನವದೆಹಲಿ: ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲೇಬೇಕು. ಅಲ್ಲಿಯ ವರೆಗೆ ಕಾಂಗ್ರೆಸ್ ಪಟ್ಟು ಸಡಿಲಿಸುವುದಿಲ್ಲ. ಈ ಕಾಯ್ದೆಗಳು ರೈತರಿಗೆ ಯಾವುದೇ ನೆರವನ್ನುಂಟು ಮಾಡುವುದಿಲ್ಲ. ರೈತರನ್ನು ಮುಗಿಸಲೆಂದೇ ಕೃಷಿ ಕಾಯ್ದೆ ಜಾರಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಜಾರಿ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಪಕ್ಷವು ಶುಕ್ರವಾರ ‘ಕಿಸಾನ್ ಅಧಿಕಾರ್ ದಿವಸ್’ ಆಚರಿಸುತ್ತಿದೆ. …

Read More »

ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇವೆ ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ:ಸತೀಶ ಜಾರಕಿಹೊಳಿ

ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇವೆ ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಶುಕ್ರವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಮೇಶ ಜಾರಕಿಹೊಳಿ ಮುಸ್ಲಿಂ ಪರವಾಗಿ ಹೋರಾಟ ಮಾಡಿದ್ದರು. ಮುಂದೆಯೂ ಇರುತ್ತಾರೆ ಎನ್ನುವ ವಿಶ್ವಾಸ ಇದೆ.ರಮೇಶ ಜಾರಕಿಹೊಳಿ ಅಧಿಕಾರ ಎಂಜಾಯ್ ಮಾಡಲಿ ಆದರೆ ಹಿಂದಿನ ಹೋರಾಟ ಮುಂದುವರೆಸಬೇಕು ಎಂದು ಸಲಹೆ‌ ನೀಡಿದರು. ನಮ್ಮ ತಂದೆ ಪತ್ರ ಚಳವಳಿಯಲ್ಲಿ ಹೋರಾಟ …

Read More »

ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾದ ಸಂದರ್ಭದಲ್ಲಿ ಕೇಳಿ ಬಂದಿದ್ದ ಸಿಡಿ ಪ್ರಕರಣ: ಡಿ.ಕೆ.ಶಿ

ಬೆಂಗಳೂರು – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಯಡಿಯೂರಪ್ಪ ಅವರ ಆಪ್ತ ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾದ ಸಂದರ್ಭದಲ್ಲಿ ಕೇಳಿ ಬಂದಿದ್ದ ಸಿಡಿ ಪ್ರಕರಣ ಈಗ ಮತ್ತೊಮ್ಮೆ ಸಿಡಿದಿದೆ. ಯಾರದ್ದೋ ಸಿಡಿಯನ್ನು ಮಾರಾಟ ಮಾಡಲು ಯತ್ನಿಸಿದ್ದರಂತೆ, ನಂತರ ಹೈಕಮಾಂಡ್ ಗೆ ತಲುಪಿಸಿದ್ದಾರಂತೆ, ಸಚಿವರೊಬ್ಬರು ಇದರ ಹಿಂದಿದ್ದಾರಂತೆ. ಆ ಹಿನ್ನೆಲೆಯಲ್ಲಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದರಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದರು. ನನಗೆ ಮಾಧ್ಯಮ ಸ್ನೇಹಿತರೇ ಈ ವಿಷಯ ತಿಳಿಸಿದ್ದಾರೆ ಎಂದೂ ಅವರು ಹೇಳಿದ್ದರು. …

Read More »

ರಾಜ್ಯ ರಾಜಕೀಯದಲ್ಲಿ ಯತ್ನಾಳ್​ ಸಿಡಿಸಿದ ಸಿಡಿ ಸ್ಫೋಟ; ಬಹಿರಂಗ ಹೇಳಿಕೆ ನೀಡದಂತೆ ಎಲ್ಲಾ ನಾಯಕರುಗಳಿಗೆ ಬಿಜೆಪಿ ಸೂಚನೆ

ಬೆಂಗಳೂರು (ಜನವರಿ 15); ಬಿಜೆಪಿ ಪಕ್ಷದೊಳಗೆ ಕಳೆದ ಕೆಲ ದಿನಗಳಿಂದ ಒಳಬೇಗುದಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಮಾತನಾಡುವವರ ಸಂಖ್ಯೆಯೂ ಏರುತ್ತಲೇ ಇದೆ. ಈ ನಡುವೆ ಗುರುವಾರ ಹೊಸ ಬಾಂಬ್ ಸಿಡಿಸಿದ್ದ ಮಾಜಿ ಕೇಂದ್ರ ಸಚಿವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, “ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಆ ಸಿಡಿಯನ್ನು ಮಾಡಿದ್ದೇ ಅವರ …

Read More »

ಸುದೀಪ್‌ಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ

ಭಾರತೀಯ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ವಿಶೇಷವಾಗಿ ಅವರ ಅಭಿಮಾನಿಗಳು ಕೈಗೊಂಡ ಮಹತ್ವದ ಕೆಲಸಕ್ಕಾಗಿ ಲೋಕಸಭೆ ಸದಸ್ಯೆ ಮೇನಕಾ ಗಾಂಧಿ ಅವರು ದೂರವಾಣಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ಮೂಕಪ್ರಾಣಿ ವಿಚಾರದಲ್ಲಿ ತಾವು ಮತ್ತು ತಮ್ಮ ಅಭಿಮಾನಿಗಳು ಮಾಡಿದ ಕೆಲಸ ನಿಜಕ್ಕೂ ಸ್ವಾಗತಾರ್ಹ, ನಿಮ್ಮಿಂದ ಇಂತಹ ಕೆಲಸಗಳು ಮತ್ತಷ್ಟು ಆಗಲಿ ಎಂದು ಶ್ಲಾಘಿಸಿದ್ದಾರೆ.ಅಂದ್ಹಾಗೆ, ಕಿಚ್ಚ ಸುದೀಪ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ …

Read More »

ತಮ್ಮ ಬಾಡಿಗಾರ್ಡ್‌ಗೆ ಸರ್ಪ್ರೈಸ್ ಉಡುಗೊರೆ ಕೊಟ್ಟ ಸುದೀಪ್

ನಟ ಕಿಚ್ಚ ಸುದೀಪ್ ತಮ್ಮ ಸುತ್ತಲಿರುವವರನ್ನು ಬಹಳ ಕೇರ್ ಮಾಡುತ್ತಾರೆ. ಕುಟುಂಬಕ್ಕೆ ಅತಿ ಹೆಚ್ಚು ಮೌಲ್ಯ ನೀಡುವ ಸುದೀಪ್, ತಮ್ಮ ಆಪ್ತ ಸಿಬ್ಬಂದಿಗಳನ್ನೂ ಸಹ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ತಮ್ಮ ಜೊತೆಗೇ ಇರುವ ಅಂಗರಕ್ಷಕ (ಬಾಡಿಗಾರ್ಡ್) ಸಾಯಿ ಕಿರಣ್ ಗೆ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ ಕಿಚ್ಚ ಸುದೀಪ್. ಸಾಯಿಕಿರಣ್ ಅಲಿಯಾಸ್ ಕಿಚ್ಚ ಕಿರಣ್‌ ಗೆ ಬುಲೆಟ್ ಬೈಕ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ನಟ ಕಿಚ್ಚ …

Read More »

ಏರುತ್ತಲೇ ಇದೆ ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ಕರ್ನಾಟಕ ಜನತೆಯ ಜೇಬುಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಿಡಿ

ನವದೆಹಲಿ,  – ಅಂತಾರಾಷ್ಟ್ರೀಯ ತೈಲ ದರಗಳಲ್ಲಿ ಹೆಚ್ಚಳವಾಗುವ ಮೂಲಕ ಈ ವಾರದಲ್ಲಿ ಎರಡನೇ ಬಾರಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನೇರವಾಗಿ 25 ಪೈಸೆ ಹೆಚ್ಚಳವಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿದ್ದ ಕರ್ನಾಟಕ ಜನತೆಯ ಜೇಬುಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಿಡಿ ಬಿದ್ದಿದೆ. ಗುರುವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.30 ರೂ.,ಡೀಸೆಲ್ ಬೆಲೆ ಪ್ರತಿ ಲೀ.ಗೆ 79.40 ಪೈಸೆಯಾಗುವ ಮೂಲಕ ಬಳಕೆದಾರರು 0.25 ಪೈಸೆ ಹೆಚ್ಚು …

Read More »

70ರ ಅಜ್ಜಿಗೆ ಪೊಂಗಲ್‌ ಗಿಫ್ಟ್ ಕೊಡಿಸಿದ ಅವಳಿ ಸಹೋದರರು! ಬಾಲಕರ ಕಾರ್ಯಕ್ಕೆ ಶ್ಲಾಘನೆ

ತಮಿಳುನಾಡು: ಮಕ್ಕಳ ನಿಷ್ಕಲ್ಮಶ ಮನಸ್ಸಿಗೆ ಕನ್ನಡಿ ಹಿಡಿದಿರುವಂಥ ಪ್ರಸಂಗವೊಂದು ತಮಿಳುನಾಡಿನಲ್ಲಿ ಸಂಕ್ರಾಂತಿಯ ದಿನದಂದೇ ನಡೆದಿದೆ. ಪೊಂಗಲ್‌ ಪ್ರಯುಕ್ತ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳ ಮೂಲಕ 2,500 ರೂ. ನಗದು, ಕಬ್ಬು ಮತ್ತು ಬಟ್ಟೆಬರೆಗಳನ್ನು ನೀಡುವುದಾಗಿ ಘೋಷಿಸಿತ್ತು. ಮಾನಸಿಕ ಅಸ್ವಸ್ಥೆ ಮಗಳನ್ನು ಸಾಕುವ ಜವಾಬ್ದಾರಿಯನ್ನು ಹೊತ್ತಿರುವ ವಿಧವೆ, 70 ವರ್ಷದ ವೃದ್ಧೆ ಸುಬ್ಬುಲಕ್ಷ್ಮಿ ಹೇಗಾದರೂ ಮಾಡಿ, ಆ ಉಡುಗೊರೆ ಸ್ವೀಕರಿಸಿಕೊಂಡು ಬರೋಣ ಎಂದು ತೀರಾ ಅನಾರೋಗ್ಯದ ನಡುವೆಯೂ ನಡಿಗೆ ಆರಂಭಿಸಿದರು. ಸ್ವಲ್ಪ …

Read More »

ಪಂಚಮಸಾಲಿ ಮಠಕ್ಕೆ ₹ 10 ಕೋಟಿ ಮಂಜೂರು, ನಾಲ್ಕೈದು ದಿನಗಳಲ್ಲಿ ಖಾತೆಗೆ: ಬಿಎಸ್‌ವೈ

ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಅಭಿವೃದ್ಧಿಗಾಗಿ ₹ 10 ಕೋಟಿ ಅನುದಾನ ಮಂಜೂರು ಮಾಡಿದ್ದೇನೆ. ನಾಲ್ಕೈದು ದಿನಗಳಲ್ಲಿ ಮಠದ ಖಾತೆಗೆ ವರ್ಗಾವಣೆಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಹರಿಹರದಲ್ಲಿ ಆಯೋಜಿಸಿದ್ದ ಹರಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸನ್ಮಾನಿಸಿದರು. ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮಿ ಅವರೂ ಇದ್ದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ನಡೆದ ಹರಜಾತ್ರಾ ಮಹೋತ್ಸವದ ಸ್ವಾವಲಂಬಿ …

Read More »