Breaking News

Uncategorized

ದೆಹಲಿ ಗಣರಾಜ್ಯೋತ್ಸವ ಪೆರೇಡೆಗೆ ಬೈಲಹೊಂಗಲದ ಕೃಷ್ಣಾ ಬಡಿಗೇರ ಆಯ್ಕೆ

ಬೈಲಹೊಂಗಲ : ಪಟ್ಟಣದ ಮೂರುಸಾವಿರ ಮಠದ ಎಸ್.ಜಿ.ವಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕದ ವಿದ್ಯಾರ್ಥಿ ಕೃಷ್ಣಾ ಬಡಿಗೇರ ಇದೇ ಜ.26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡಗೆ ಆಯ್ಕೆಯಾಗಿದ್ದಾನೆ. ಬಿಕಾಂ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎನ್.ಸಿ.ಸಿ ಘಟಕದಲ್ಲಿ ಸೀನಿಯರ್ ಅಂಡರ್ ಆಫೀಸರ ಇದ್ದಾನೆ. ರಾಜ್ಯದಿಂದ ಒಟ್ಟು 26 ಕೆಡೆಟಗಳು ದೆಹಲಿಯ ಗಣರಾಜ್ಯೋತ್ಸವ ಪರೇಡನಲ್ಲಿ ಭಾಗವಹಿಸುತ್ತಿದ್ದು, ಬೆಳಗಾವಿಯಿಂದ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿದ್ದು . 25 ನೇ …

Read More »

ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ:

ಹೊಸದಿಲ್ಲಿ: ಆರ್ ಜೆಡಿ ಮುಖ್ಯಸ್ಥ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಮತ್ತೆ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಗೆ ಏರ್ ಲಿಫ್ಟ್ ಮೂಲಕ ಕರೆದೊಯ್ಯಲಾಗಿದೆ. ಲಾಲೂ ಪ್ರಸಾದ್ ಯಾದವ್ ಅವರನ್ನು ಶುಕ್ರವಾರ ರಾಂಚಿಯ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಏರ್‌ಲಿಫ್ಟ್‌ ಮೂಲಕ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಾಜಿ ಉಪ ಸಿಎಂ ತೇಜಶ್ವಿ ಯಾದವ್, …

Read More »

ಹಿಂದಿ ರಾಷ್ಟ್ರ ಭಾಷೆ ಅಲ್ಲ:ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದನ್ನು ಶಾಲಾ ಹಂತದಿಂದಲೇ ತಿಳಿಸಬೇಕಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ. 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ‌ನಿಯೋಜಿತ ಅಧ್ಯಕ್ಷರಾದ ಸಾಹಿತಿ ದೊಡ್ಡರಂಗೇಗೌಡರು ‘ಹಿಂದಿ ರಾಷ್ಟ್ರ ಭಾಷೆ’ ಎಂದು ಶುಕ್ರವಾರ ಹೇಳಿಕೆ ನೀಡಿದ್ದರು. ಆ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಿಖಿಲ್‌ ಕುಮಾರಸ್ವಾಮಿ ಶನಿವಾರ ಟ್ವೀಟ್‌ ಮಾಡಿದ್ದಾರೆ. ‘ಹಿಂದಿ ನಮ್ಮ ರಾಷ್ಟ್ರ ಭಾಷೆ ಕನ್ನಡಿಗರಾದ ನಾವು …

Read More »

ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ : ಈವರೆಗೆ 14 ಲೀಕಾಸುರರ ಬಂಧನ..!

ಬೆಂಗಳೂರು, ಜ.24- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್‍ಡಿಎ) ಹುದ್ದೆ ನೇಮಕಾತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ಪೊಲೀಸರು ಈವರೆಗೂ 14 ಮಂದಿ ಆರೋಪಿಗಳನ್ನು ಬಂಸಿದ್ದಾರೆ.ಬಂತ ಆರೋಪಿಗಳಿಂದ 35 ಲಕ್ಷ ನಗದು ಮತ್ತು 4 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಿನ್ನೆ ನಮಗೆ ಖಚಿತ ಮಾಹಿತಿ ಬಂದಿತ್ತು. ಆ ಆಧಾರದ …

Read More »

ಮಂಗಳೂರು ಬ್ರಾಂಡ್ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ

ಮಂಗಳೂರು, – ಮಂಗಳೂರಿನ ಬ್ರಾಂಡ್ ಹಾಳಾಗುವಂತಹ ದುಷ್ಕøತ್ಯ ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಮಂಗಳೂರಿನ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಂಗಳೂರು ಸುಂದರ ನಗರ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಇಲ್ಲಿಗೆ ಹಲವಾರು ಮಂದಿ ಬರುತ್ತಾರೆ. ಮಂಗಳೂರಿಗೆ ಒಂದು ಬ್ರಾಂಡ್ ಇದೆ. ಅದನ್ನು ಹಾಳು ಮಾಡುವಂತೆ ಇತ್ತೀಚೆಗೆ ಕೆಲ ಕೃತ್ಯಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆಕೆಲವು ವ್ಯಕ್ತಿಗಳು ಧಾರ್ಮಿಕ ಕೇಂದ್ರಗಳಿಗೆ ಆಕ್ಷೇಪಾರ್ಹ ವಸ್ತುಗಳನ್ನು …

Read More »

ನಿಯಮಗಳನ್ನೇ ಗಾಳಿಗೆ ತೂರಿ ಸಚಿವರನ್ನೇ ಹಿಂದಿಕ್ಕಿದ ಅಧಿಕಾರಿಗಳು..!

ಬೆಂಗಳೂರು, – ರಾಜಕೀಯ ಬೆಳವಣಿಗೆಗಳು ಆಡಳಿತ ವ್ಯವಸ್ಥೆಯ ಮೇಲೆ ಹೇಗೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಅರಣ್ಯ ಸಚಿವರ ಖಾತೆ ಬದಲಾವಣೆ ಯಾಗುತ್ತಿರುವ ಸಂದರ್ಭ ಬಳಸಿಕೊಂಡು ಇಲಾಖೆಯ ಹಿರಿಯ ಅಧಿಕಾರಿಗಳು ಹಿಂದಿನ ಸಚಿವರ ಆದೇಶವನ್ನೂ ದಿಕ್ಕರಿಸಿ ಸುಮಾರು 75 ಮಂದಿ ಅಧಿಕಾರಿಗಳಿಗೆ ಉನ್ನತ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಕೈಗೊಂಡಿದ್ದಾರೆ.ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳ ಹುದ್ದೆಯಿಂದ ವಲಯ ಅರಣ್ಯ ಅಧಿಕಾರಿಗಳ ಹುದ್ದೆಗೆ 40 ಮಂದಿಗೆ ಬಡ್ತಿ …

Read More »

ಬಿಗ್ ಬಾಸ್ ಸೀಸನ್ 8 ಫೆಬ್ರವರಿ ತಿಂಗಳಲ್ಲಿ ಬರಲಿದೆ

ಬೆಂಗಳೂರು: ಬಹುನಿರೀಕ್ಷಿತ ಹಾಗೂ ಚರ್ಚೆಗಳಿಗೆ ಈಡಾಗುವ ಬಿಗ್ ಬಾಸ್ ಮತ್ತೆ ಬರುತ್ತಿದೆ. ಈ ಕುರಿತು ಅಧಿಕೃತ ಘೋಷಣೆಗಳು ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಸೀಸನ್ 8 ಫೆಬ್ರವರಿ ತಿಂಗಳಲ್ಲಿ ಬರಲಿದೆ ಎಂದು ತಿಳಿದುಬಂದಿದೆ. ಸಾಧಾರಣವಾಗಿ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿತ್ತು. ಆದರೆ ಕೊರೋನಾ ಕಾಲಘಟ್ಟದಿಂದ ಸಾಧ್ಯವಾಗದ ಕಾರಣ ಮುಂದೂಡಿದ್ದು, ಇದೀಗ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಅಧಿಕೃತವಾಗಿ ಪೋಸ್ಟ್ ಮಾಡಿರುವ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ …

Read More »

ನೇತ್ರಾವತಿ ನದಿಯಲ್ಲಿ ಹೆಚ್ಚಾದ ತ್ಯಾಜ್ಯ ಸಂಗ್ರಹ; ಪರಿಸರ ಉಳಿಸುವಂತೆ ಜಾಗೃತಿ ಮೂಡಿಸುತ್ತಿದೆ ಹಸಿರು ದಳ

ದಕ್ಷಿಣ ಕನ್ನಡ(ಜ.23): ನದಿಗೆ,ರಸ್ತೆ ಬದಿಗೆ ತ್ಯಾಜ್ಯ ಎಸೆಯದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡರೂ, ಜನ ಮಾತ್ರ ಈ ಅವ್ಯವಸ್ಥೆಯಿಂದ ಹೊರ ಬಂದಿಲ್ಲ. ನಿರಂತರವಾಗಿ ರಸ್ತೆ ಹಾಗು ನದಿಗಳಿಗೆ ತ್ಯಾಜ್ಯ ಹಾಕುವುದರಿಂದಾಗಿ ರಸ್ತೆ ತುಂಬಾ ದುರ್ವಾಸನೆ ಹಾಗೂ ನದಿ ನೀರು ಮಲಿನವಾಗುತ್ತಿದೆ. ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇದೀಗ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಆರಂಭಗೊಂಡಿದೆ. ಮುಖ್ಯವಾಗಿ ಮಂಗಳೂರು ಹೊರವಲಯದ ನೇತ್ರಾವತಿ ನದಿಗೆ ಪ್ರತಿನಿತ್ಯ 2 ರಿಂ3 ಕ್ವಿಂಟಾಲ್ ನಷ್ಟು …

Read More »

ನಮ್ಮಲ್ಲಿ ಯಾವ ಬಾಂಬೆ ಟೀಮೂ ಇಲ್ಲ, ಬೆಂಗಳೂರು ಟೀಮೂ ಇಲ್ಲ.

ಚಾಮರಾಜನಗರ (ಜ. 23): ನಮ್ಮಲ್ಲಿ ಯಾವ ಬಾಂಬೆ ಟೀಮೂ ಇಲ್ಲ, ಬೆಂಗಳೂರು ಟೀಮೂ ಇಲ್ಲ. ಈಗ ನಮ್ಮದೆಲ್ಲ ಯಡಿಯೂರಪ್ಪನವರ ಟೀಂ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾತನಾಡಿದ ಬಿ.ಸಿ. ಪಾಟೀಲ್, ನಮ್ಮಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ. ಬಿಜೆಪಿಯಿಂದ ತಾಳಿ ಕಟ್ಟಿಸಿಕೊಂಡು ಮದುವೆಯಾಗಿ ಶಾಸಕರಾದ  ಮೇಲೆ  ಯಾವ ಟೀಮೂ ಇಲ್ಲ. ನಮ್ಮಲ್ಲಿರೋದು ಒಂದೇ ಟೀಮು; …

Read More »

BSY ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ : ಸಿದ್ದರಾಮಯ್ಯ ಆರೋಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರ ಕುಮ್ಮಕ್ಕು ಕಾರಣ ಎಂದು ದೂರಿದರು. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ …

Read More »