Breaking News

Uncategorized

ಅಕ್ರಮ ಅಕ್ಕಿ ಸಾಗಾಟಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ಕಿತ್ತೂರು : ಖಚಿತ ಮಾಹಿತಿ ಮೇರೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಕಿತ್ತೂರು ಪೋಲಿಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಹಾವೇರಿಯಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯ ಲಾರಿಗಳನ್ನು ಕಿತ್ತೂರು ಗಜರಾಜ ಪ್ಯಾಲೇಸ್ ಎದುರಿಗೆ ರಾಷ್ಟ್ರಿಯ ಹೆದ್ದಾರಿ 4 ರಲ್ಲಿ ವಶಕ್ಕೆ ಪಡೆದು, ಚಾಲಕರು ಹಾಗೂ ಕ್ಲೀನರ್‍ಗಳನ್ನು ಬಂಧಿಸಿದ್ದಾರೆ. ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ 12 ಲಕ್ಷ ಮೌಲ್ಯದ ತಲಾ 50ಕೆಜಿಯ 1040 ಚೀಲ ರೇಷನ್ ಅಕ್ಕಿ, …

Read More »

ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲ ಪತ್ತೆ, ಮತ್ತಿಬ್ಬರು ಅರೆಸ್ಟ್

ಬೆಂಗಳೂರು,ಜ.25- ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಹತ್ವದ ಪ್ರಗತಿ ಸಾಸಿದ್ದು, ಸೋರಿಕೆಯ ಮೂಲವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ಕರ್ನಾಟಕ ಲೋಕಸೇವಾ ಆಯೋಗದ ಇಬ್ಬರು ಸಿಬ್ಬಂದಿಗಳನ್ನು ಬಂಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ)ದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ರಮೇಶ್, ಪರೀಕ್ಷಾ ವಿಭಾಗದಲ್ಲಿ ಶೀಘ್ರ ಲಿಫಿಗಾರರಾಗಿರುವ ಸನಾಬೇಡಿ ಅವರನ್ನು ಬಂಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಸನಾಬೇಡಿ ಪರೀಕ್ಷಾ ವಿಭಾಗದ ನಿಯಂತ್ರಕರಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ ರಮೇಶ್‍ಗೆ …

Read More »

ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌, ಕಾಂಗ್ರೇಸ್ – ಬಿಜೆಪಿ ಸರಕಾರ : ಡಿಕೆಶಿ ವ್ಯಂಗ್ಯ

ಮೈಸೂರು: ನಮ್ಮ ಸದಸ್ಯರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌. ಕಾಂಗ್ರೆಸ್- ಬಿಜೆಪಿ ಸರ್ಕಾರ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ನಮ್ಮವರನ್ನು ಕರೆದುಕೊಂಡು ಹೋಗಿ ಗಿಫ್ಟ್ ಕೊಟ್ಟಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಸುಭದ್ರವಾಗಿದೆ. ಎಲ್ಲರೂ ಅತ್ಯಂತ ಒಗ್ಗಟ್ಟಿನಿಂದ ಸಹಕಾರ ಕೊಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಲೇವಡಿ‌ ಮಾಡಿದರು. ಈ ಸರ್ಕಾರ ಬಲಿಷ್ಠವಾಗಿದೆ. ಬಹಳಷ್ಟು ಸಂಖ್ಯಾ ಬಲವಿದೆ. ಸರ್ಕಾರದಲ್ಲಿರುವವರು ಎಲ್ಲರೂ ತುಂಬಾ ಒಗ್ಗಟ್ಟಾಗಿದ್ದಾರೆ. ಸರ್ಕಾರದಲ್ಲಿ ಏನೇನು ಗೊಂದಲವಿಲ್ಲ. …

Read More »

ಬಸವಕಲ್ಯಾಣ ಉಪ ಚುನಾವಣೆ: ಡಿಸಿಎಂ ಸವದಿಯತ್ತ ಬಿಜೆಪಿ ಒಲವು, ಕೈ ನಿಂದ ಧರ್ಮಸಿಂಗ್‌ ಪುತ್ರ?

ಬೆಂಗಳೂರು: ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಗೆ ಡಿಸಿಎಂ ಲಕ್ಷ್ಮಣ ಸವದಿ ಹೆಸರು ಕೇಳಿ ಬರುತ್ತಿದೆ. ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಹೇಗಾದರೂ ಮಾಡಿ ಗೆಲುವು ಸಾಧಿಸಲು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಈಗ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೆಸರು ಮುನ್ನೆಲೆಗೆ ಬಂದಿದೆ. ಲಕ್ಷ್ಮಣ ಸವದಿ ಗಡಿ ಭಾಗದಲ್ಲಿ ಮರಾಠ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಬಸವ ಕಲ್ಯಾಣ ಕ್ಷೇತ್ರದಲ್ಲಿ ಆ ಸಮುದಾಯದ ಮತಗಳನ್ನು ಸೆಳೆಯಬಹುದು ಎಂಬ …

Read More »

BREAKING : ಕೋಲಾರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿ, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ಕೋಲಾರ : ಜಿಲ್ಲೆಯ ಮುಳುಬಾಗಿಲು ತಾಲೂಕಿನ ಸೀಗೇಹಳ್ಳಿ ಗೇಟ್ ಬಳಿ, ಇಂದು ಬೆಳಿಗ್ಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದಂತ ಶಾಲಾ ವಾಹನ ಪಲ್ಟಿ ಆಗಿದೆ. ಶಾಲಾ ವಾಹನ ಪಲ್ಟಿಯಾಗಿದ್ದರಿಂದ ಅದರಲ್ಲಿದ್ದಂತ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೀಗೇಹಳ್ಳಿ ಗೇಟ್ ಬಳಿ ಇಂದು ಬೆಳಿಗ್ಗೆ ನಂಗಲಿಯಿಂದ ಮುಳಬಾಗಿಲು ಪಟ್ಟಣದ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದಂತ ವಾಹನ ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದಾಗಿ ವಾಹನದಲ್ಲಿದ್ದಂತ …

Read More »

ಬಜೆಟ್ 2021 ಬಗ್ಗೆ ತಿಳಿಯಲು ವಿಶೇಷ APP : ನಿರ್ಮಲಾ ಸೀತಾರಾಮನ್

ನವದೆಹಲಿ,: 2021-22ನೇ ಸಾಲಿನ ಬಜೆಟ್ ಇದೇ ಮೊದಲ ಬಾರಿಗೆ ಕಾಗದರಹಿತವಾಗಿ ಮಂಡನೆಯಾಗುತ್ತಿದೆ. 2021ರ ಫೆಬ್ರವರಿ 1 ರಂದು ಆಯವ್ಯಯ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವಿಶೇಷ ಮೊಬೈಲ್ ಆಪ್ಲಿಕೇಷನ್ ಹೊರ ತರಲಾಗಿದೆ. ಡಿಜಿಟಲ್ ಆಡಳಿತದ ಅನುಕೂಲತೆಗಳನ್ನು ಬಳಸಿಕೊಂಡು ಸಂಸತ್ ಸದಸ್ಯರಿಗೆ ಮತ್ತು ಸಾಮಾನ್ಯ ಜನರಿಗೆ ಬಜೆಟ್ ನ ದಾಖಲೆಗಳು ತಾಕಲಾಟವಿಲ್ಲದೇ ಸುಗಮವಾಗಿ ದೊರಕಿಸಿಕೊಡಲು ”ಕೇಂದ್ರ ಬಜೆಟ್ ನ ಮೊಬೈಲ್ ಆಯಪ್ ” ಅನ್ನು ಹಣಕಾಸು …

Read More »

56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ

ಚೆನ್ನೈ, : ತಮಿಳುನಾಡಿನಲ್ಲಿ ಚುನಾವಣಾ ಪೂರ್ವ ಪ್ರಚಾರದ ಎರಡನೆಯ ದಿನವಾದ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ಚೀನಾ ಪಡೆಗಳು ಭಾರತದ ಜಾಗವನ್ನು ಅತಿಕ್ರಮಿಸಿಕೊಂಡಿವೆ. ಆದರೆ 56 ಇಂಚ್ ಎದೆಯ ವ್ಯಕ್ತಿಗೆ ನಮ್ಮ ನೆರೆಯ ದೇಶದ ಹೆಸರನ್ನು ಕೂಡ ಹೇಳಲು ಆಗುತ್ತಿಲ್ಲ ಎಂದು ಟೀಕಿಸಿದರು.

Read More »

ಸಂಬಳ ನೀಡದೇ ಸತಾಯಿಸಿದ್ದಕ್ಕೆ 5 ಬಸ್ ಗಳಿಗೆ ಬೆಂಕಿ ಯಿಟ್ಟ

ಮುಂಬೈ: ಕೊರೊನಾ ಸಂಕಷ್ಟದಿಂದ ಕಂಗೆಟ್ಟಿದ್ದರೂ ಸಂಬಳ ನೀಡದೇ ಸತಾಯಿಸಿದ್ದಕ್ಕೆ ಮಾಲೀಕನ ವಿರುದ್ಧ ಕೋಪಗೊಂಡ ಬಸ್ ಚಾಲಕನೊಬ್ಬ 5 ಬಸ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆರೋಪಿ ಬಸ್ ಚಾಲಕ 24 ವರ್ಷದ ಅಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಆತ್ಮಾರಾಂ ಟ್ರ್ಯಾವಲ್ಸ್ ಬಸ್ ನ 5 ಬಸ್ ಗಳು ಬೆಂಕಿಗಾಹುತಿಯಾಗಿದ್ದವು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಇದೀಗ ಸತ್ಯಬಯಲಾಗಿದೆ. 2020ರ ಡಿಸೆಂಬರ್ ನಲ್ಲಿ …

Read More »

ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬೈಕ್‌ ಸವಾರನೊಬ್ಬ ಕೂದಲೆಳೆ ಅಂತರ ದಲ್ಲಿ ಕಾಡಾನೆಯಿಂದ ಪಾರಾದ

ಆಲೂರು: ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬೈಕ್‌ ಸವಾರನೊಬ್ಬ ಕೂದಲೆಳೆ ಅಂತರ ದಲ್ಲಿ ಕಾಡಾನೆಯಿಂದ ಪಾರಾದ ಘಟನೆ ತಾಲೂಕಿನ ಕೆ.ಹೊಸ ಕೋಟೆ ಹೋಬಳಿ ಮಠದಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಿಂದ ಒಂಟಿ ಸಲಗವೊಂದು ದಿಢೀರ್‌ ರಸ್ತೆಗೆ ಬಂದಿದೆ. ಈ ವೇಳೆ ಬೈಕ್‌ ಸವಾರ ಆನೆಗೆ ಅಡ್ಡಲಾಗಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಬೈಕ್‌ ಸವಾರನಿಗೆ ಹಿಂತಿರುಗಿ ಹೋಗುವಂತೆ ಕೂಗಾಡಿದ್ದಾರೆ. ಆದರೂ, ಯುವಕ ನುಗ್ಗಿ ಬಂದಿದ್ದು, ಆಶ್ಚರ್ಯ …

Read More »

ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಒತ್ತು‌:ಶಶಿಕಲಾ ಜೊಲ್ಲೆ

ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ. ಹೀಗಾಗಿ ಈ ಭಾಗಕ್ಕೆ ವಿಶೇಷವಾಗಿ ಹೆಚ್ಚು ಒತ್ತು‌ ನೀಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ. ಹೀಗಾಗಿ ಈ ಭಾಗಕ್ಕೆ ವಿಶೇಷವಾಗಿ ಹೆಚ್ಚು ಒತ್ತು‌ ನೀಡುತ್ತೇವೆ. ಅಂಗನವಾಡಿ ಮೂಲಕ ಮಕ್ಕಳ ಆರೋಗ್ಯ ತಪಾಸಣೆ ಆರಂಭಗೊಂಡಿದೆ. 2 ಸಾವಿರ …

Read More »