ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ಹೊಸದೇನಲ್ಲ. ಆಗಾಗ ದಾಳಿ ನಡೆಯುತ್ತಲೇ ಇರುತ್ತೆ. ಅಕ್ಕಿ ಕಳ್ಳರು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅಕ್ಕಿ ಕಳ್ಳಕೋರರಿಗೆ ದಾಳ ಉರುಳಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಅಕ್ರಮಕ್ಕೆ ಕಡಿವಾಣ ಹಾಕುವುದು ತಡವಾಗುವ ವಿಷಯವೇ ಅಲ್ಲ. ಆದರೆ ಅಕ್ರಮಕ್ಕೆ ಕಡಿವಾಣ ಹಾಕಿದರೆ ಬೊಕ್ಕಣ ತುಂಬಲ್ಲವೆಂದು ಆಗಾಗ ಹುಲಿಯಂತೆ ದಾಳಿ ಮಾಡಿ ಇಲಿಯಂತೆ ಒಂದಿಷ್ಟು ಅಕ್ಕಿ ಚೀಲ ಹಿಡಿದು ಬಿಲ್ಡಪ್ ಕೊಡುತ್ತಾರೆ ಆಹಾರ ಇಲಾಖೆಯ …
Read More »ರೈತರು ಭಯೋತ್ಪಾಕರೇ ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ?: ಕೋಡಿ ಕಿಡಿ
ಬೆಂಗಳೂರು; “ಬಿಜೆಪಿ ನಾಯಕರು ರೈತರಿಗೆ ಪಾಕಿಸ್ತಾನ, ಖಲಿಸ್ತಾನಿಗಳ ಬೆಂಬಲ ಇದೆ ಅಂತ ಬೊಬ್ಬೆ ಇಡೋಕೆ ಶುರುಮಾಡಿದ್ದಾರೆ. ರೈತರನ್ನೇ ದೇಶದ್ರೋಹಿಗಳು ಅಂತ ಕರೆಯೋ ಕಾಲ ಬಂದಿದೆ. ರೈತರಿಗೆ ಪಾಕಿಸ್ತಾನದ ನಂಟು ಅಂತ ಆರೋಪ ಹೊರಿಸುತ್ತಿದ್ದಾರೆ. ಇದು ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ? ನಿಮಗೆ ಎಲ್ಲಿಲ್ಲದ ದುರಹಂಕಾರ ಬರೋಕೆ ಕಾರಣ ರೈತರೇ. ಹೊತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ.? ಅದಕ್ಕೆ ಹೀಗೆ ಮಾತನಾಡುತ್ತಿದ್ದೀರ. ಇನ್ನೂ ನಮ್ಮ ಕೃಷಿ ಮಂತ್ರಿಗೆ ನೆಟ್ಟಗೆ ಮಾತಾಡೋಕೆ …
Read More »ಶ್ರೀರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ಸಮರ್ಪಿಸಿದ್ದಾರೆ. ಡಾ.ಸೋನಾಲಿ ಸರ್ನೋಬತ್
ಬೆಳಗಾವಿ – ನಿಯತಿ ಫೌಂಡೇಶನ್ ಅಧ್ಯಕ್ಷೆ, ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯೆ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶಕಿ ಡಾ.ಸೋನಾಲಿ ಸರ್ನೋಬತ್ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ಸಮರ್ಪಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಅವರಿಗೆ ಡಾ.ಸೋನಾಲಿ ಸರ್ನೋಬತ್ ಮತ್ತು ಡಾ.ಸಮೀರ್ ಸರ್ನೋಬತ್ ಚೆಕ್ ಹಸ್ತಾಂತರಿಸಿದರು.
Read More »ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಮಾತ್ರ – ಕಾಂಗ್ರೆಸ್ ಕಿಡಿ
ಬೆಂಗಳೂರು : ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ಕರ್ನಾಟಕ ಬಿಜೆಪಿ ಮಾತ್ರ. ನಾಡಿಗೆ ಹಸಿವಿನ ಚಿಂತೆ, ಯುವಕರಿಗೆ ಉದ್ಯೋಗದ ಚಿಂತೆ, ರೈತರಿಗೆ ಬದುಕಿನ ಚಿಂತೆ,ಸರ್ಕಾರಕ್ಕೆ ಮಾತ್ರ ಲೂಟಿಯದ್ದೇ ಚಿಂತೆಯಾಗಿದೆ. ದಿನಕ್ಕೆ ಎರೆಡೆರೆಡು ಭಾರಿ ಖಾತೆ ಬದಲಾವಣೆ ಮಾಡುತ್ತಾ, ಅಭಿವೃದ್ಧಿ ಮರೆತ ಬಿಜೆಪಿಯಿಂದ ರಾಜ್ಯ ನಲುಗುತ್ತಿದೆ ಎಂಬುದಾಗಿ ಕಾಂಗ್ರೆಸ್ ಕಿಡಿ ಕಾರಿದೆ. ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸರಣಿ ಟ್ವಿಟ್ ಮಾಡಿದ್ದು, ಎಪಿಎಂಸಿ ಮುಚ್ಚಿ …
Read More »ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ಬೆಂಗಳೂರು ಪೊಲೀಸರು ಚಕ್ರವ್ಯೂಹ
ಬೆಂಗಳೂರು, ಜ.26- ರೈತರ ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ನಗರದಲ್ಲಿ ಪೊಲೀಸ್ ಚಕ್ರವ್ಯೂಹ ರಚಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ದೇಶಾದ್ಯಂತ ರೈತರು ಇಂದು ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದು, ನಗರದ ಆರು ಮಾರ್ಗಗಳ ಮೂಲಕ ರೈತರು ಫ್ರೀಡಂ ಪಾರ್ಕ್ ತಲುಪುತ್ತಿದ್ದಾರೆ. ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಬೆಂಗಳೂರು ಪೊಲೀಸರು ಅವಕಾಶ ನಿರಾಕರಿಸಿದ್ದು, ಹೊರ ವಲಯಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಿ ಟ್ರಾಕ್ಟರ್ ಜೊತೆ ಆಗಮಿಸುವ ರೈತರನ್ನು ಗಡಿಯಲ್ಲೇ ತಡೆಯಲಾಗುತ್ತಿದೆ. ಮೈಸೂರು ಮಾರ್ಗ: ಮೈಸೂರು …
Read More »ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪದಕರು, ಅವರಿಗೆ ಪಾಕಿಸ್ತಾನ ಸಪೋರ್ಟ್ ಇದೇ: ಬಿ.ಸಿ ಪಾಟೀಲ್
ಕೊಪ್ಪಳ: ನವದೆಹಲಿಯ ಕೆಂಪುಕೋಟೆಗೆ ರೈತರು ನುಗ್ಗಿ ರೈತರು ಬೇರೆ ಧ್ವಜವೊಂದು ಹಾರಿಸಿದ್ದಾರೆ. ಈ ನಡುವೆ ರಾಜ್ಯದಲ್ಲೂ ಕೂಡ ರೈತರ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇವರಲ್ಲದರ ನಡುವೆ ಸಚಿವ ಬಿ.ಸಿ ಪಾಟೀಲ್ ರೈತರ ಪ್ರತಿಭಟನೆಗೆ ಸಂಬಂಧಪಟ್ಟಂತೆ ನೀಡಿರುವ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪದಕರು, ಅವರಿಗೆ ಪಾಕಿಸ್ತಾನ ಸಪೋರ್ಟ್ ಇದೇ ಅನ್ನುವುದರ ಮೂಲಕ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದರು, ಇದೇ …
Read More »ಪೊಲೀಸರ ಜೊತೆ ರೈತರ ವಾಗ್ವಾದ
ಮಂಡ್ಯ : ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್ ಪೆರೇಡ್ ಹಿನ್ನೆಲೆ, ಜಿಲ್ಲೆಯ ರೈತರು ತಮ್ಮ ಟ್ರ್ಯಾಕ್ಟರ್ ಜೊತೆಗೆ ತೆರಳುತ್ತಿದ್ದರು. ಆದ್ರೇ ಹೀಗೆ ತೆರಳುತ್ತಿದ್ದಂತ ಮದ್ದೂರಿನ ಬಳಿ ರೈತರು ಸೇರಿ ಟ್ರ್ಯಾಕ್ಟರ್ ಗಳನ್ನು ಮದ್ದೂರು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಇದರಿಂದಾಗಿ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದವೇ ನಡೆದಿರುವ ಘಟನೆ ನಡೆದಿದೆ. ಇಂದು ರೈತರ ಟ್ರ್ಯಾಕ್ಟರ್ ಪೆರೇಡ್ ನಲ್ಲಿ ಭಾಗವಹಿಸಲು ಮಂಡ್ಯದಿಂದ ಬೆಂಗಳೂರಿನತ್ತ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದಂತ ರೈತರನ್ನು ಮದ್ದೂರು ಪೊಲೀಸರು, ಮದ್ದೂರಿನ …
Read More »ಮಧ್ಯರಾತ್ರಿಯಲ್ಲಿ ಒಂಟಿಯಾಗಿ ಆಟೋ ಹತ್ತಿದ್ದ ಕಾಲೇಜ್ ವಿದ್ಯಾರ್ಥಿ.. ನಂತರ ಆಟೋ ಡ್ರೈವರ್ ಏನು ಮಾಡಿದ್ದಾರೆ ಗೊತ್ತಾ?
ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಅಲ್ಲಲ್ಲಿ ಒಳ್ಳೆಯ ವ್ಯಕ್ತಿಗಳು ಕೂಡ ಇರುತ್ತಾರೆ. ಹಾಗೆಯೆ ಆಟೋ ಡ್ರೈವರ್ ಗಳು ಅಂದರೇನೆ ಮೀಟರ್ ಮೇಲೆ ಜ್ಯಾಸ್ತಿ ದುಡ್ಡು ಕೇಳೋದು.. ಸರಿಯಾದ ಸಮಯಕ್ಕೆ ಸರಿಯಾದ ಜಾಗಕ್ಕೆ ಬರೋದಿಲ್ಲ ಎಂಬ ಕಂಪ್ಲೇಂಟ್ ಗಳು ಹೇಳುತ್ತಿರುತ್ತಾರೆ. ಆದರೆ ಎಲ್ಲರೂ ಇದೇ ರೀತಿ ಇರುವುದಿಲ್ಲ.. ಕೆಲವು ಆಟೋ ಡ್ರೈವರ್ ಗಳು ಕೂಡ ಒಳ್ಳೆಯ ರೀತಿಯಲ್ಲಿ ಇರುತ್ತಾರೆ. ಹಾಗೆ ಇಲ್ಲಿ ಒಬ್ಬ ಆಟೋ ಡ್ರೈವರ್ ತನ್ನ ಒಳ್ಳೆಯ ತನದಿಂದ ಎಲ್ಲರ …
Read More »ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ ಕೈ ಬಿಡಬೇಕು ಎಂದ :H.D.K.
ಬೆಂಗಳೂರು; ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ರೈತರು ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಳೆ ನಡೆಯುವ ಗಣರಾಜ್ಯೋತ್ಸವ ದಿನದಂದು ದೇಶವ್ಯಾಪಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ದರಾಗಿದ್ದಾರೆ. ಇದೇ ವಿಷಯವಾಗಿ ಇಂದು ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ …
Read More »ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ : ರೈತ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ..!
ನವದೆಹಲಿ,ಜ.26- ಎಪ್ಪತ್ತೆರಡನೆ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡುವೆ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರೆ, ದೇಶದ ನಾನಾ ಭಾಗಗಳಲ್ಲಿ ಬೃಹತ್ ರೈತ ಹೋರಾಟಗಳು ನಡೆದವು. ರಾಷ್ಟ್ರ ರಾಜಧಾನಿ ನವದೆಹಲಿ, ಎಲ್ಲಾ ರಾಜ್ಯಗಳ ರಾಜಧಾನಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಥಸಂಚಲನ ನಡೆಯಿತು. ಅದೇ ಸಂದರ್ಭದಲ್ಲಿ ರೈತರು ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ರೈತ ಹೋರಾಟಗಳನ್ನು ನಡೆಸಿದರು. ಸೇನೆ ಮತ್ತು ಸಶಸ್ತ್ರ ಪಡೆಗಳ ಪರೇಡ್‍ಗೆ ಪರ್ಯಾಯವಾಗಿ ಟ್ರ್ಯಾಕ್ಟರ್ ರ‍್ಯಾಲಿಗಳು ನಡೆದವು. ದೆಹಲಿಯ …
Read More »