Breaking News

Uncategorized

ಸಿಹಿ ಕೊಟ್ಟು ಶುಭ ಕೋರಿದ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು. ಕೆಎಂಎಫ್ ಅಧ್ಯಕ್ಷ ಹಾಗೂ ಗೋಕಾಕ ತಾಲುಕಿನ‌ ಅರಭಾವಿ‌‌ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ನಿಮಿತ್ತ ಶುಭ ಕೋರಿದರು. ಕೆಎಂಎಫ್ನ ‌ಸಿಹಿ ಪದಾರ್ಥಗಳನ್ನು ತಿನ್ನಿಸುವ ಮೂಲಕ ಬಾಲಚಂದ್ರ ಜಾರಕಿಜೊಳಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಶತಾಯುಷಿ ಆಗಲೆಂದು ಹಾರೈಸಿದರು.

Read More »

ಮಾ.2ರಂದು ಅಂಗನವಾಡಿ ಕಾರ್ಯಕರ್ತರಿಂದ ‘ವಿಧಾನಸೌಧ ಚಲೋ

ಬೆಂಗಳೂರು, ಫೆ. 27: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರದ ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಇಲಾಖೆಯು ಈ ವೃಂದಗಳ ನೌಕರರಿಗೆ ನೀಡುವ ಎಲ್ಲ ಶಾಸನಬದ್ಧ ಸೌಕರ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಮಾ.2ರಂದು ಎಐಯುಟಿಯುಸಿ ‘ವಿಧಾನಸೌಧ ಚಲೋ’ ಹಮ್ಮಿಕೊಂಡಿದೆ. ಸರಕಾರಿ ನೌಕರರಿಗೆ ಸರಿಸಮನಾಗಿ ಮಾಸಿಕ ವೇತನ ಮತ್ತಿತರ ಸೌಕರ್ಯಗಳನ್ನು ನೀಡಬೇಕು ಅಥವಾ ಕಾರ್ಯಕರ್ತೆಯರಿಗೆ 25 ಸಾವಿರ ರೂ.ಹಾಗೂ ಸಹಾಯಕಿಯರಿಗೆ 21 ಸಾವಿರ ರೂ.ಮಾಸಿಕ ವೇತನ ನೀಡಬೇಕು. ಸೇವಾ ಹಿರಿತನ …

Read More »

ಚನ್ನಪಟ್ಟಣದ ಆಟಿಕೆಗಳು ಪ್ರಪಂಚದಾದ್ಯಂತ ಎಲ್ಲಾ ಮಕ್ಕಳ ಮೊಗದಲ್ಲೂ ನಗು ತರಿಸಬೇಕು: ಪ್ರಧಾನಿ ಮೋದಿ

ನವದೆಹಲಿ : ನಮ್ಮ ಸಂಸ್ಕೃತಿಯ ಪ್ರತಿರೂಪದಂತಿರುವ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ನಮ್ಮ ದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ . ಶನಿವಾರ ದೆಹಲಿಯಲ್ಲಿ ವರ್ಚುವಲ್ ಕಾನ್ಸರೆನ್ಸ್ ಮೂಲಕ ಆಟಿಕೆ ಮೇಳಕ್ಕೆ ಚಾಲನೆ ನೀಡಿ, ಚನ್ನಪಟ್ಟಣದ ಆಟಿಕೆ ತಯಾರಕರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು,ಚನ್ನಪಟ್ಟಣದ ಬೊಂಬೆಯನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೆ ತರಲು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಆಟಿಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು …

Read More »

ಜೂನ್ ನಲ್ಲಿ ನಡೆಯಲಿದೆ ಎನ್‍ಐಒಎಸ್ ಪರೀಕ್ಷೆಗಳು

ಬೆಂಗಳೂರು, ಫೆ.27- ರಾಷ್ಟ್ರೀಯ ಮುಕ್ತ ಶಿಕ್ಷಣ ಇಲಾಖೆ (ಎನ್‍ಐಒಎಸ್) ವತಿಯಿಂದ ಮಾರ್ಚ್-ಏಪ್ರಿಲ್-2021ನೆ ಸಾಲಿನ ಸೆಕೆಂಡರಿ (10ನೇ ತರಗತಿ) ಮತ್ತು ಸೀನಿಯರ್ ಸೆಕೆಂಡರಿ (ದ್ವಿತೀಯ ಪಿಯುಸಿ) ಪರೀಕ್ಷೆಗಳನ್ನು ಜೂನ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಆನ್‍ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಮಾರ್ಚ್ 1ರಿಂದ 31ರ ವರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದೆ. ಏಪ್ರಿಲ್ 1ರಿಂದ 13ರ ವರೆಗೆ ವಿಳಂಬ ಶುಲ್ಕ ಸಹಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಜನವರಿ, ಫೆಬ್ರವರಿ 2021ರ ಪರೀಕ್ಷೆಯಲ್ಲಿ …

Read More »

ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ

ಇನ್ನೇನು ಟೇಕಾಫ್​ ಆಗಲಿದ್ದ ವಿಮಾನದೊಳಗೆ ಆಸೀನನಾಗಿದ್ದ ಪ್ರಯಾಣಿಕ ಅಕಸ್ಮಾತ್ಗಿ ಆ ಪೆಪ್ಪರ್​ ಸ್ಪ್ರೇಯನ್ನ ಒತ್ತಿದ ಕಾರಣ ಫ್ಲೈಟ್​​ನಲ್ಲಿದ್ದ ಪ್ರತಿಯೊಬ್ಬರು ಕೆಮ್ಮಿನಿಂದ ಬಳಲಿದ ಘಟನೆ ನಡೆಸಿದೆ. ಫ್ಲೋರಿಡಾದಿಂದ ನ್ಯೂ ಜೆರ್ಸಿಗೆ ಸಂಚರಿಸುತ್ತಿದ್ದ ವಿಮಾನ ಈ ಘಟನೆ ಬಳಿಕ ವಿಳಂಬವಾಗಿ ನಿಲ್ದಾಣ ತಲುಪಿದೆ. ಯುನೈಟೆಡ್​ ಫ್ಲೈಟ್​ 1061 ಈಶಾನ್ಯ ಫ್ಲೋರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್​​​ ಆಗಲು ತಯಾರಾಗುತ್ತಿತ್ತು.ಆದರೆ ಈ ವೇಳೆ ಪ್ರಯಾಣಿಕರೊಬ್ಬರು ಪೆಪ್ಪರ್​ ಸ್ಪ್ರೇಯನ್ನ ಅಚಾನಕ್​ ಆಗಿ ಪ್ರೆಸ್​ ಮಾಡಿದ್ದಾರೆ. ಚಲಾವಣೆಯಲ್ಲಿದ್ದ …

Read More »

ಕೃಷಿ ಕಾಯ್ದೆ ಜಾರಿ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಹಿಂದೆ ವಿರೋಧ ಪಕ್ಷಗಳ ಷಡ್ಯಂತ್ರವಿದೆ: ಈರಣ್ಣ ಕಡಾಡಿ

ಪಿರಿಯಾಪಟ್ಟಣ: ಕೃಷಿ ಕಾಯ್ದೆ ಜಾರಿ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಹಿಂದೆ ವಿರೋಧ ಪಕ್ಷಗಳ ಷಡ್ಯಂತ್ರವಿದೆ ಎಂದು ರಾಜ್ಯಸಭಾ ಸದಸ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಆರೋಪಿಸಿದರು. ಪಿರಿಯಾಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮದ ಪ್ರಗತಿಪರ ರೈತ ಸುಪ್ರೀತ್ ಅವರ ತೋಟದ ಜಮೀನಿನಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ರೈತರೊಂದಿಗಿನ ಸಂವಾದ ಹಾಗೂ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ …

Read More »

75 ಮನೆ ಹೊಂದಿರೋ ಈ ಪುಟ್ಟ ಗ್ರಾಮದಲ್ಲಿ 47 ಜನ IAS ಅಧಿಕಾರಿಯಾಗಿದ್ದಾರೆ, ಎಲ್ಲಿ ಗೊತ್ತೇ?

ಒಂದು ಊರು ಅಂದ್ರೆ ತನ್ನದೆಯಾದ ವಿಶೇಷತೆ ಹಾಗು ಮಹತ್ವವನ್ನು ಹೊಂದಿರುತ್ತದೆ, ಅದೇ ನಿಟ್ಟಿನಲ್ಲಿ ಇಲ್ಲೊಂದು ಪುಟ್ಟ ಗ್ರಾಮ ಆದ್ರೆ ಈ ಗ್ರಾಮದ ಬಗ್ಗೆ ತಿಳಿದುಕೊಂಡರೆ ಹೆಮ್ಮೆ ಅನಿಸುತ್ತದೆ, ಯಾಕೆಂದರೆ ಈ ೭೫ ಮನೆ ಹೊಂದಿರೋ ಪುಟ್ಟ ಗ್ರಾಮಾಲ್ಲಿ ೪೭ ಜನ ಐಎಎಸ್ ಅಧಿಕಾರಿಯಾಗಿದ್ದಾರೆ ಅಂದ್ರೆ ಹೆಮ್ಮೆಯ ವಿಷಯ ಅಲ್ಲವೇ? ಅಷ್ಟಕ್ಕೂ ಈ ಗ್ರಾಮ ಯಾವುದು ಇಲ್ಲಿನ ವಿಶೇಷತೆ ಏನು ಅನ್ನೋದರ ಬಗ್ಗೆ ಮುಂದೆ ನೋಡಿ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ …

Read More »

ಮಾಸ್ಕ್ ಹಾಕಿಕೊಳ್ಳುವ ಹೊಸ ವಿಧಾನ..

ಮುಂಬೈ :ಉದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ವಿವಿಧ ವೈರಲ್ ಫೋಟೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ.   ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಫೋಟೋ ಯುವಕನೊಬ್ಬ ರೈಲಿನಲ್ಲಿ ಮಲಗಿದ್ದನ್ನು ತೋರಿಸುತ್ತದೆ. ಕರೋನವೈರಸ್ ಸೋಂಕನ್ನು ತಡೆಗಟ್ಟಲು ಅವನು ಹಾಕಿರುವ ಮಾಸ್ಕ್ ಅವನ ಮೂಗು ಮತ್ತು ಬಾಯಿ ಮುಚ್ಚುವ ಬದಲಾಗಿ ಅವನ ಕಣ್ಣುಗಳನ್ನು ಮುಚ್ಚಿದೆ. ಅವನ ಅಕ್ಕಪಕ್ಕದಲ್ಲಿ ಜನರೂ ಇದ್ದಾರೆ.ಆದರೂ ಆತ ಮಾಸ್ಕ್ ನ್ನು ಸರಿಯಾಗಿ ಹಾಕಿರಲಿಲ್ಲ. ಅದಕ್ಕೆ ಅವರು ‘ಮುಂಬೈನಲ್ಲಿ ಇತ್ತೀಚಿನ …

Read More »

ಬೆಳಗಾವಿಗೆ ಬಂದ ಮೂರು ಸಿಂಹ

ಬೆಳಗಾವಿ(ಫೆ.27): ಕೊರೊನಾ ಸೋಂಕಿನ ಕಾರಣದಿಂದಗಾಗಿ ಜನರಿಗೆ ಕ್ವಾರಂಟೈನ್ ಮಾಡೋದು ಸಾಮಾನ್ಯವಾಗಿದೆ. ಬೇರೆ ಊರಿಂದ ಬಂದ್ರೆ ಅಥವಾ ರೋಗದ ಲಕ್ಷಣ ಇದ್ದವರಿಗೆ ಕ್ವಾರಂಟೈನ್ ಮಾಡುವುದು ಸಹಜ. ಆದರೆ ಬೆಳಗಾವಿಗೆ ಬಂದಿರೋ ಮೂರು ಕಾಡಿನ ರಾಜಗಳಿಗೆ ಅರಣ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ. ಸದ್ಯ ಅವರನ್ನು ನೋಡಲು ಯಾರಿಗೂ ಅವಕಾಶ ಇಲ್ಲ. ಕೇವಲ ಆಹಾರ ನೀಡುವ ಸಿಬ್ಬಂದಿಗೆ ಮಾತ್ರ ಅಲ್ಲಿಗೆ ಪ್ರವೇಶವಿದೆ. ಆದರೆ ಈ ಕಾಡಿನ ರಾಜಗಳನ್ನು ನೋಡಲು ಜನ  ಕಾಯುತ್ತಿದ್ದಾರೆ. ಬೆಳಗಾವಿಯ ಭೂತರಾಮನಹಟ್ಟಿ ಗ್ರಾಮದ …

Read More »

ರಸ್ತೆಗಿಳಿಯದ ಲಾರಿ, ಟ್ರಕ್: ಮತ್ತೆ ಮುಷ್ಕರದ ಎಚ್ಚರಿಕೆ

ಬೆಂಗಳೂರು: ತೈಲ ದರ ಇಳಿಕೆ, ಇ-ವೇ ಬಿಲ್ ನಿಯಮಾವಳಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮತ್ತು ಟ್ರಕ್ ಸೇರಿದಂತೆ ಸರಕು ಸಾಗಾಣಿಕೆ ವಾಹನ ಮಾಲೀಕರು ದೇಶವ್ಯಾಪಿ ಶುಕ್ರವಾರ ಹಮ್ಮಿಕೊಂಡಿದ್ದ ಮುಷ್ಕರ ಬೆಂಬಲಿಸಿ ನಗರದಲ್ಲೂ ಲಾರಿ ಹಾಗೂ ಟ್ರಕ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಬೆಂಗಳೂರು-ತುಮಕೂರು ಹೆದ್ದಾರಿಯ ಮಾದನಾಯಕನಹಳ್ಳಿ ನೈಸ್ ರಸ್ತೆ ಜಂಕ್ಷನ್‍ನಲ್ಲಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟದ ವತಿಯಿಂದ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು. …

Read More »