ಬೆಳಗಾವಿ : ರಾಜ್ಯದಲ್ಲಿ ಅರ್ಹ ಬಿಪಿಎಲ್ ಕಾರ್ಡ್ ದಾರರು ಯಾರು, ಅನರ್ಹ ಬಿಪಿಎಲ್ ಕಾರ್ಡ್ ದಾರರು ಯಾರು ಎನ್ನುವ ಬಗ್ಗೆ ಸರ್ವೆ ಕಾರ್ಯ ನಡೆಸಲಾಗುತ್ತದೆ. ಈ ಮೂಲಕ ಅನಧಿಕೃತ ಬಿಪಿಎಲ್ ಕಾರ್ಡ್ ಗಳನ್ನು ಪತ್ತೆ ಹಚ್ಚಲಾಗುತ್ತದೆ. ಇಂತಹ ಕಾರ್ಡ್ ಗಳನ್ನು ಮಾರ್ಚ್ 31ರೊಳಗೆ ರದ್ದು ಪಡಿಸಲಾಗುತ್ತದೆ ಎಂಬುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಅನರ್ಹ ಬಿಪಿಎಲ್ ಪಡಿತರ …
Read More »ಪತಿಯ ಅತಿಯಾದ ಚಟ, ಕಿರುಕುಳಕ್ಕೆ ಬೇಸತ್ತು ಐಪಿಎಸ್ ಅಧಿಕಾರಿಯಿಂದ ದೂರು ದಾಖಲು!
ಬೆಂಗಳೂರು: ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಪತಿಯ ವಿರುದ್ಧ ನಗರದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತಿ ನಿತೀನ್ ಸುಬಾಶ್ ಮತ್ತು ಕುಟುಂಬಸ್ಥರ ವಿರುದ್ಧ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ನಿತೀನ್ ಸುಬಾಶ್ ಸೇರಿದಂತೆ ಒಟ್ಟು 7 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. 2009ರ ಬ್ಯಾಚ್ನ ಅಧಿಕಾರಿ ಅಗಿರುವ ವರ್ತಿಕಾ 2011 ರಲ್ಲಿ ವಿವಾಹ ಅಗಿದ್ದರು. ಐಎಫ್ಎಸ್ (ಭಾರತೀಯ ವಿದೇಶಾಂಗ …
Read More »ಮತ್ತೆ ರಂಗೇರಲಿದೆ ಮೆಡಿಕಲ್ ಕಾಲೇಜ್ ಕ್ಯಾಂಪಸ್
ಬೆಳಗಾವಿ – ಬೆಳಗಾವಿಗೆ ಇಂದು 2 ವಿಶೇಷ ವಿಮಾನಗಳು ಆಗಮಿಸಲಿವೆ. ಮಲೇಷಿಯಾದಿಂದ ಇಂಡಿಗೋ ವಿಮಾನಗಳು ಬರಲಿದ್ದು, ಒಂದು ಸಂಜೆ 4 ಗಂಟೆಗೆ, ಇನ್ನೊಂದು ರಾತ್ರಿ 8 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿವೆ. ಈ ಎರಡೂ ವಿಮಾನಗಳು ಮಲೇಷಿಯಾದಿಂದ ವಿದ್ಯಾರ್ಥಿಗಳನ್ನು ಹೊತ್ತು ತರಲಿವೆ. ಕೊರೋನಾ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ವಾಪಸ್ಸಾಗಿದ್ದ ಮಲೇಷಿಯನ್ ವಿದ್ಯಾರ್ಥಿಗಳು ಈಗ ಮತ್ತೆ ಬೆಳಗಾವಿಗೆ ವಾಪಸ್ಸಾಗಿ ಕಾಲೇಜು ತುಂಬಲಿದ್ದಾರೆ.
Read More »ರಾಷ್ಟ್ರವ್ಯಾಪಿ ‘ಚಕ್ಕಾ ಜಾಮ್’,ರಾಜ್ಯದಲ್ಲಿ ಯಾವೆಲ್ಲ ರಸ್ತೆಗಳು ಬಂದ್?:
ನವದೆಹಲಕ, ಫೆ.6 (ಪಿಟಿಐ)- ಕೇಂದ್ರದ ಹೊಸ ಕೃಷಿ ಕಾಯಿದೆ ವಿರೋಸಿ ರೈತರು ಶನಿವಾರ ನಡೆಸುತ್ತಿರುವ ರಾಷ್ಟ್ರವ್ಯಾಪಿ ಚಕ್ಕಾ ಜಾಮ್ನಿಂದ ಹೊರಬರುವ ಯಾವುದೇ ಪರಿಸ್ಥ್ಥಿತಿಯನ್ನು ಎದುರಿಸಲು ಅರೆಸೈನಿಕ ಪಡೆಗಳೂ ಸೇರಿದಂತೆ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಿರುವ ದೆಹಲಿ ಪೊಲೀಸರು ಎಲ್ಲಾ ಗಡಿ ಕೇಂದ್ರಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ. ಆದಾಗ್ಯೂ, ಸಂಯುಕ್ತ ಕಿಸಾನ್ ಮೋರ್ಚಾ ಚಕ್ಕಾ ಜಾಮ್ ಸಂದರ್ಭದಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿನ ರಸ್ತೆಗಳನ್ನು ನಿರ್ಬಂಸುವುದಿಲ್ಲ ಎಂದಿದೆ. ಆದರೆ, ದೇಶದ ಇತರ ಭಾಗಗಳು …
Read More »B.S.N.L. ನೊಂದಿಗೆ ಒಟಿಟಿ ಸಹಭಾಗಿತ್ವ
ಬೆಂಗಳೂರು,ಫೆ.5- ಪ್ರಮುಖ ಜಾಗತಿಕ ಒಟಿಟಿ ಪ್ಲಾಟ್ಫಾರ್ಮ್ ಯುಪ್.ಟಿವಿ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ನೊಂದಿಗೆ ಸಹಭಾಗಿತ್ವ ಹೊಂದಿದೆ. ಪರಿಣಾಮ ಹೊಸ-ಯುಗದ ಟೆಕ್-ಶಕ್ತಗೊಂಡ ಏಕ ಚಂದಾದಾರಿಕೆ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಯುಪ್ಟಿವಿ ಸ್ಕೋಪ್ ಸೇವೆಯನ್ನು ಪ್ರಾರಂಭಿಸಿದೆ. ಟ್ರಿಪಲ್ ಪ್ಲೇ ಕೊಡುಗೆಯಾಗಿ ಬ್ರಾಡ್ಬ್ಯಾಂಡ್ ಚಂದಾದಾರರಿಗೆ ಕಟ್ಟುಗಳ ಒಟಿಟಿ ಸೇವೆಗಳನ್ನು ನೀಡಲು ಈ ಹಿಂದೆ ಬಿಎಸ್ಎನ್ಎಲ್ನೊಂದಿಗೆ ಎಂಒಯುಗೆ ಸಹಿ ಹಾಕಿದ್ದ ಯುಪ್.ಟಿವಿ ಈಗ ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಬಳಕೆದಾರರಿಗಾಗಿ ಬಲವಾದ ವೀಡಿಯೊ ಸೇವೆಗಳನ್ನು ಪ್ರಾರಂಭಿಸುತ್ತಿದೆ.ಅಂತಹ …
Read More »ಫೆ. 9ಕ್ಕೆ ಪರಿಷತ್ ಸಭಾಪತಿ ಚುನಾವಣೆ :
ಬೆಂಗಳೂರು: ವಿಧಾನಪರಿಷತ್ ಸಭಾಪತಿ ಚುನಾವಣೆಗೆ ಫೆ. 9ರಂದು ದಿನಾಂಕ ನಿಗದಿಯಾಗಿದೆ. ಬಿಜೆಪಿ -ಜೆಡಿಎಸ್ ಬೆಂಬಲದೊಂದಿಗೆ ಜೆಡಿಎಸ್ನ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು ಫೆ. 10ರ ವರೆಗೆ ಮುಂದುವರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ತೀರ್ಮಾನಿಸಲಾಯಿತು. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರ ರಾಜೀನಾಮೆ ಪತ್ರ ಅಂಗೀಕರಿಸಿ ಪರಿಷತ್ ಕಲಾಪ ಮುಂದುವರಿಕೆ ಮತ್ತು ಸಭಾಪತಿ ಚುನಾವಣೆ ನಿಗದಿಗೆ ರಾಜ್ಯಪಾಲರು ಅನುಮತಿ ನೀಡಿದರು.
Read More »ಸೋಮವಾರ ಬೆಳಗಾವಿ ಜಿಲ್ಲೆಯ ಖಾನಾಪುರಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ಭೇಟಿ
ಬೆಂಗಳೂರು – ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಸೋಮವಾರ ಬೆಳಗಾವಿ ಜಿಲ್ಲೆಯ ಖಾನಾಪುರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 6.30ಕ್ಕೆ ದಾವಣಗೆರೆಯಿಂದ ರಸ್ತೆ ಮಾರ್ಗವಾಗಿ ಹೊರಟು 9.30ಕ್ಕೆ ಖಾನಾಪುರಕ್ಕೆ ಆಗಮಿಸುವರು. ನಂತರ ಖಾನಾಪುರ ತಾಲೂಕಿನಲ್ಲಿ ಆಯ್ದ ಸರಕಾರಿ ಶಾಲೆಗಳಿಗೆ ಭೇಟಿ ನೀಡುವರು. 10.30ಕ್ಕೆ ಜಾಂಬೋಟಿಯಲ್ಲಿ ವಿಶ್ವಭಾರತಿ ಸಂಸ್ಥೆಯ ವತಿಯಿಂದ ಪುನರುತ್ಥಾನಗೊಂಡ ಶಾಲಾ ಕಟ್ಟಡವನ್ನು ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. 12.30ಕ್ಕೆ ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಕುರಿತಂತೆ ಪ್ರಗತಿ …
Read More »ಮುಂದಿನ ವರ್ಷದಿಂದ ರಾಜ್ಯದ ಎಲ್ಲ ಇಲಾಖೆಗಳಿಗೆ ಸಮವಸ್ತ್ರಗಳನ್ನು ಜವಳಿ ಇಲಾಖೆಯ ನಿಗಮ ಗಳಿಂದಲೇ ಪೂರೈಕೆ
ಬೆಂಗಳೂರು: ‘ಮುಂದಿನ ವರ್ಷದಿಂದ ರಾಜ್ಯದ ಎಲ್ಲ ಇಲಾಖೆಗಳಿಗೆ ಸಮವಸ್ತ್ರಗಳನ್ನು ಜವಳಿ ಇಲಾಖೆಯ ನಿಗಮ ಗಳಿಂದಲೇ ಪೂರೈಕೆ ಮಾಡಲಾಗುವುದು. ಹೊರ ರಾಜ್ಯಗಳಿಂದ ಬಟ್ಟೆ ಆಮದು ಮಾಡುವುದನ್ನು ನಿಲ್ಲಿಸಿ ಸ್ಥಳೀಯ ನೇಕಾರರಿಗೆ ಆದ್ಯತೆ ನೀಡಲಾಗುವುದು’ ಎಂದು ಕೈಮಗ್ಗ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದರು. ವಿಧಾನ ಪರಿಷತ್ನಲ್ಲಿ ಶುಕ್ರವಾರ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ವರ್ಷದಿಂದ ಸಮವಸ್ತ್ರಕ್ಕೆ ರಾಜ್ಯದ ನೇಕಾರರ ಬಟ್ಟೆಯನ್ನೇ ಪೂರೈಕೆ ಮಾಡಲು …
Read More »86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ: ಅರವಿಂದ ಲಿಂಬಾವಳಿ
ಬೆಂಗಳೂರು: ಫೆಬ್ರವರಿ ತಿಂಗಳ ಕೊನೆಯಲ್ಲಿ ಹಾವೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಕನ್ನಡ ಹಬ್ಬದ ಸಿದ್ಧತೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ, ಕೋವಿಡ್ ನಿಯಮ ಪಾಲನೆ ಕಷ್ಟವಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಕೋವಿಡ್ ಹೊಸ ನಿಯಮಾವಳಿ ಜಾರಿಗೆ ಬಂದ ಬಳಿಕ ಮಾರ್ಚ್ 9ಕ್ಕೆ ಮತ್ತೊಂದು ಸಭೆ ನಡೆಸಿ, ಸಮ್ಮೇಳನ ದಿನಾಂಕ …
Read More »ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: B,S,Y,- ಯತ್ನಾಳ ಜಟಾಪಟಿ
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ‘ಪ್ರವರ್ಗ 2 ಎ’ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಸದಸ್ಯ ಬಸನಗೌಡ ಯತ್ನಾಳ ನಡುವಿನ ಜಟಾಪಟಿಗೆ ವಿಧಾನಸಭೆ ಶುಕ್ರವಾರ ಸಾಕ್ಷಿಯಾಯಿತು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಉತ್ತರ ನೀಡಿ ಕೂತರು. ಈ ವೇಳೆ ಬಸನಗೌಡ ಯತ್ನಾಳ, ‘ಪಂಚಮಸಾಲಿ ಹಾಗೂ ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮೂರು ಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದೇವೆ. ಆದರೆ, …
Read More »