Breaking News

Uncategorized

ಷರತ್ತಿನೊಂದಿಗೆ ಬಿಎಂಟಿಸಿ ಸಿಬ್ಬಂದಿ ವೇತನ ಬಿಡುಗಡೆ

ಬೆಂಗಳೂರು, ಫೆ.15- ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಡಿಸೆಂಬರ್ ಮತ್ತು ಜನವರಿ ತಿಂಗಳ ವೇತನಕ್ಕಾಗಿ ಸಾರಿಗೆ ಇಲಾಖೆ 86.69 ಕೋಟಿ ರೂ.ವನ್ನು ಷರತ್ತಿನೊಂದಿಗೆ ಬಿಡುಗಡೆ ಮಾಡಿ ಆದೇಶಿಸಿದೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ಹೊಸ ಬಸ್ ಖರೀದಿ ಪ್ರಕ್ರಿಯೆ ಮಾಡುವಂತಿಲ್ಲ. ವಾಹನಗಳ ನಿರ್ವಹಣೆ ಮತ್ತು ಬಿಡಿ ಭಾಗಗಳಿಗೆ ಸಂಬಂಧಿಸಿದಂತೆ ಅತಿ ಅವಶ್ಯಕ ವೆಚ್ಚವನ್ನು ಮಾತ್ರ ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿ ವೇತನಕ್ಕಾಗಿ 2020ರ ಏಪ್ರಿಲ್‍ನಿಂದ ನವೆಂಬರ್‍ವರೆಗೆ …

Read More »

ಉಮೇಶ್ ಕತ್ತಿ ಹೇಳಿಕೆಗೆ ಇದೀಗ ಸ್ವಪಕ್ಷೀಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ದವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಿ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಇದೀಗ ಸ್ವಪಕ್ಷೀಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ, ಸಚಿವ ಉಮೇಶ್ ಕತ್ತಿ ತಮ್ಮ ಸ್ವಂತ ನಿರ್ಧಾರವನ್ನು ಜನರ ಮೇಲೆ ಹೇರಬಾರದು. ಟಿವಿ, ಫ್ರಿಡ್ಜ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತೆ. ಇನ್ನು ಬೈಕ್ ನ್ನು ಈಗ ಲೋನ್ ಮೇಲೂ ತೆಗೆದುಕೊಳ್ಳುತ್ತಾರೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ಟಿವಿ …

Read More »

ಅಡುಗೆ ಸಿಲಿಂಡರ್ ದರದಲ್ಲಿಯೂ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಅಡುಗೆ ಸಿಲಿಂಡರ್ ದರದಲ್ಲಿಯೂ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಸಬ್ಸಿಡಿ ರಹಿತ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾಗಿದೆ. ಎಲ್ ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ ಈವರೆಗೆ 722ರೂ ಇತ್ತು. ಇಂದು 772 ರೂಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ ಮೂರು ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಲಾಗಿದೆ. ಫೆ.4ರಂದು ಸಿಲಿಂಡರ್ …

Read More »

ಬಿಎಂಟಿಸಿ ಸಿಬ್ಬಂದಿಯ ಸಂಬಳ94 ಕೋಟಿ 64 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ

ಬೆಂಗಳೂರು : ಬಿಎಂಟಿಸಿ ಸಿಬ್ಬಂದಿಯ ಸಂಬಳ ವಿತರಣೆ ಮಾಡುವ ಸಲುವಾಗಿ ಸರ್ಕಾರದಿಂದ 94 ಕೋಟಿ 64 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಬಿಎಂಟಿಯಲ್ಲಿ ಕೊರೊನಾ ಕಾರಣದಿಂದಾಗಿ ಉಂಟಾದ ಸಂಕಷ್ಟದಿಂದಾಗಿ ತನ್ನ ನೌಕರರ ಡಿಸೆಂಬರ್​ ಮತ್ತು ಜನವರಿ ತಿಂಗಳ ಅರ್ಧ ಸಂಬಳವನ್ನು ಮಾತ್ರ ನೀಡಲಾಗಿತ್ತು. ಇನ್ನರ್ಧ ನೀಡಲಾಗಿರಲಿಲ್ಲ. ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಕಾರವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ನೌಕರರ ಸಂಬಳಕ್ಕಾಗಿ 94 ಕೋಟಿ …

Read More »

ಮಹಾಂತೇಶ ಕವಟಗಿಮಠ ನೀಡಿದ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗರಂ

ಬೆಳಗಾವಿ – ಉದ್ಯೋಗ ಖಾತ್ರಿ ಯೋಜನೆ ಶಾಸಕರು ತಂದಿದ್ದಲ್ಲ, ಕೇಂದ್ರ ಸರಕಾರದ್ದು ಎಂದು ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ನೀಡಿದ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗರಂ ಆಗಿದ್ದಾರೆ. ಈ ದೇಶಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕೊಡುಗೆ ನೀಡಿದ್ದು ಕಾಂಗ್ರೆಸ್ ಸರಕಾರ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆಗ ಇದೇ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದರು. ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಇತಿಹಾಸವನ್ನು ಅರಿತು ಮಾತನಾಡಲಿ …

Read More »

ಕಾಂಗ್ರೆಸ್‌ನ ಪ್ರಮುಖರನ್ನೇ ಬಿಜೆಪಿಗೆ ಸೇರಿಸುವೆ

ಬೆಳಗಾವಿ: ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಯಾರೂ ನಂಬಲು ಆಗದಂಥ ಕಾಂಗ್ರೆಸ್‌ನ ಪ್ರಮುಖ ಐವರು ಶಾಸಕರನ್ನು ಬಿಜೆಪಿಗೆ ತರುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. ಬಿಜೆಪಿ ಗ್ರಾಮೀಣ ಕ್ಷೇತ್ರದ ನೂತನ ಗ್ರಾ.ಪಂ. ಸದಸ್ಯರ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಟಾಪ್‌ 5 ಆ ಶಾಸಕರ ಹೆಸರು ಕೇಳಿದರೆ ಎಲ್ಲರೂ ಬೆರಗಾಗುತ್ತಾರೆ ಎಂದರು. ಬಿಜೆಪಿಯಲ್ಲಿ ತೃಪ್ತಿ : ಬಿಜೆಪಿಯಲ್ಲಿ ಖುಷಿ ಹಾಗೂ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. …

Read More »

ಫಾಸ್ಟ್ ಟ್ಯಾಗ್ ಕಡ್ಡಾಯ

ಹೊಸದಿಲ್ಲಿ/ನಾಗ್ಪುರ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫೆ. 16ರಿಂದ ಫಾಸ್ಟ್ಯಾಗ್‌ ಮೂಲಕ ಟೋಲ್‌ ಪಾವತಿ ಕಡ್ಡಾಯ. ಫಾಸ್ಟಾಗ್‌ ಅಳವಡಿಸಿ ಕೊಳ್ಳದಿದ್ದರೆ 2 ಪಟ್ಟು ಟೋಲ್‌ ಪಾವ ತಿಸಬೇಕು ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ರವಿವಾರ ಆದೇಶ ಹೊರಡಿಸಿದೆ. ಸೋಮವಾರ ಮಧ್ಯರಾತ್ರಿ ಯಿಂದಲೇ ಇದು ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಗಡುವು ವಿಸ್ತರಣೆ ಇಲ್ಲ : ಈಗಾಗಲೇ 3-4 ಬಾರಿ ಗಡುವು ವಿಸ್ತರಿಸಲಾಗಿದೆ. ಇನ್ನು ವಿಸ್ತರಣೆ ಇಲ್ಲ ಎಂದು …

Read More »

ಪ್ರೇಮಿಗಳ ದಿನವೇಹಂಚಿನಾಳದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಸವದತ್ತಿ – ತಾಲೂಕಿನ ಹಂಚಿನಾಳದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೇಮಿಗಳ ದಿನವೇ ಇವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಂಚಿನಾಳ ಗ್ರಾಮದ ಆಸೀಪ್ ಹುಸೇನಸಾಬ ಜವಳಿ(21) ಮತ್ತು ಮಾಶಾಭೀ ಹಟೇಲಸಾಬ ಧಾರವಾಡ (20) ಮೃತ ಪ್ರೇಮಿಗಳು. ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹುಡುಗಿಯ ಮನೆಯವರು ಬೇರೊಬ್ಬ ಹುಡುಗನ ಜೊತೆಗೆ ಮದುವೆ ನಿಶ್ಚಯ ಮಾಡಿದ್ದರು.  ಇದರಿಂದ ನೊಂದು ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಮನುಷ್ಯ ಎಷ್ಟೇ ದೊಡ್ಡ ಶ್ರೀಮಂತನಾಗಿರಲಿ,

ಘಟಪ್ರಭಾ: ಶ್ರೀ ದುರದುಂಡೇಶ್ವರ ಪುಣ್ಯಾರಣ್ಯ ಪ್ರೌಢಶಾಲೆಯು ಬಡ ವಿದ್ಯಾರ್ಥಿಗಳ ಪಾಲಿನ ವಿದ್ಯಾ ಕಾಶಿಯಾಗಿದೆ. ಅಕ್ಷರ ಕಲಿಸಿದ ಗುರುವಿನ ಋಣ ತೀರಿಸಿದರೇ ಸಾಲದು. ಪಂಚಋಣ ತೀರಿಸಿದವನೇ ನಿಜವಾದ ಶಿಷ್ಯನ ಕೊಡುಗೆ ಎಂದು ನಿವೃತ್ತ ಶಿಕ್ಷಕ ಎಸ್. ಐ. ಬೆನವಾಡಿ ಹೇಳಿದರು. ರವಿವಾರದಂದು ಅವರು ಸಮೀಪದ ಅರಭಾವಿಮಠದಲ್ಲಿ ಪ್ರಥಮ ಬಾರಿಗೆ ಜರುಗಿದ ಶ್ರೀ ದುರದುಂಡೇಶ್ವರ ಪುಣ್ಯಾರಣ್ಯ ಪ್ರೌಢಶಾಲೆಯ 1980-81ನೇ ಶೈಕ್ಷಣಿಕ ವರ್ಷದ 10ನೇ ತರಗತಿಯ ವಿದ್ಯಾರ್ಥಿಗಳಿಂದ “ಗುರುವಂದನೆ ಹಾಗೂ ಪುನರ್ಮಿಲನ” ಕಾರ್ಯಕ್ರಮದ ಅಧ್ಯಕ್ಷತೆ …

Read More »

ಪ್ರಭು ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ ಲಕ್ಷ್ಮಣ ಸವದಿ

ಬೆಳಗಾವಿ: ಮರ್ಯಾದಾ ಪುರುಷೋತ್ತಮ ಅಯೋಧ್ಯ ಪ್ರಭು ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಇಂದು ರೂ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಮಾನ್ಯ ಸಹ ಸಂಘ ಚಾಲಕರಾದ ಅರವಿಂದ ದೇಶಪಾಂಡೆ ಜಿ. ತಾಲೂಕು ಕಾರ್ಯವಾಹರಾದ ಸಂಜಯ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Read More »