ತುಮಕೂರು, ಫೆ.10: ಕಳೆದ ಜನವರಿ 14 ರಿಂದ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸಬೇಕೆಂದು ಆಗ್ರಹಿಸಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವ ಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆ ತುಮಕೂರು ಜಿಲ್ಲೆಗೆ ಆಗಮಿಸಿದ್ದು, ಸಮುದಾಯದ ಮುಖಂಡರ ಸಭೆ ತುಮಕೂರು ನಗರದ ಶಿರಾ ಗೇಟ್‍ನಲ್ಲಿರುವ ಖಾಸಗಿ ಹೊಟೇಲ್‍ನಲ್ಲಿ ನಡೆಯಿತು. ಸಭೆಯಲ್ಲಿ ಶ್ರೀಬಸವ ಮೃತ್ಯಂಜಯ ಸ್ವಾಮೀಜಿ, ಶ್ರೀವಚನಾನಂದಸ್ವಾಮೀಜಿ, ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರಾದ ಬಸವರಾಜ ಪಾಟೀಲ್ …
Read More »ಪಂಚಮಸಾಲಿ ಹೋರಾಟ: ವಿಜಯೇಂದ್ರ ಕೃಪಾಪೋಷಿತ ನಾಟಕ- ಯತ್ನಾಳ್
ತುಮಕೂರು: ಪಂಚಮಸಾಲಿ ಹೋರಾಟಕ್ಕೆ ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಇದು ವಿಜಯೇಂದ್ರ ಕೃಪಾಪೋಷಿತ ನಾಟಕ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ ಮುಗಿದ ಬಳಿಕ ನಿರ್ಣಯ ಗೊತ್ತಾಗಲಿದೆ. ಮುತ್ತಿಗೆ ಹಾಕುತ್ತಾರೋ, ಬಿಡುತ್ತಾರೋ ಅದು ನಿರಾಣಿ ಕೈಯಲ್ಲೂ ಇಲ್ಲ, ಯಾರ ಕೈಯಲ್ಲೂ ಇಲ್ಲ. ನಿರಾಣಿ ಕೇಳಿ ಹೋರಾಟ ಮಾಡುತ್ತಿಲ್ಲ. ಮನವೊಲಿಸುತ್ತಾರೋ , ಧನವೊಲಿಸುತ್ತಾರೋ ಗೊತ್ತಿಲ್ಲ ಎಂದರು. ಸಿಎಂ ಮನಸ್ಸು ನೋಯಿಸುವ ಕೆಲಸವಲ್ಲ. ಇಡೀ …
Read More »ನಿರ್ಲಕ್ಷ್ಯವಾಗಿ ಮೋಜುಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದ ಪ್ರವಾಸಿಗರ ವಿರುದ್ದ ದೂರು ದಾಖಲಿಸುವುದಾಗಿ ಹೇಳಿದೆ.
ಕಾರವಾರ: ಕೋವಿಡ್ ನಂತರದ ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳು ವೇಗವಾಗಿ ಚುರುಕುಪಡೆಯುತ್ತಿದೆ. ಆದರೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬಂದ ಪ್ರವಾಸಿಗರು ನಿರ್ಲಕ್ಷ್ಯವಾಗಿ ವರ್ತಿಸುತ್ತಿದ್ದು ಜಲಕ್ರೀಡೆಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಪಾಲ್ಗೊಂಡು ಮೋಜುಮಸ್ತಿಯಲ್ಲಿ ತೊಡಗಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮುರ್ಡೆಶ್ವರ, ಗೋಕರ್ಣ, ಕಾರವಾರ ಕಡಲತೀರಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ ಬಂದ ಪ್ರವಾಸಿಗರು ಸಮುದ್ರದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ನೀರಿಗೆ ಇಳಿಯುತ್ತಿದ್ದಾರೆ. ಸಮುದ್ರದಲ್ಲಿ ಈಜಲು ಬಾರದಿರುವ ಪ್ರವಾಸಿಗರು …
Read More »ಬಾಲಕಿಯನ್ನು ಬೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೋಳಂತೂರು ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಅದರೊಂದಿಗೆ ವಿಷಯ ಎಲ್ಲಾದರೂ ಬಾಯ್ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತಾದ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅಬೂಬಕ್ಕರ್ ಸಿದ್ದಿಕಿ ಹಾಗೂ ಚಪ್ಪಿ …
Read More »ಬೆಳಗಾವಿಯಲ್ಲಿ ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದಾರೆ.
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಪೊಲೀಸರು ಹಳೆ ಬಾಜಿ ಮಾರ್ಕೆಟ್ ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿದ್ದು, 13 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 17,020 ರೂಪಾಯಿ ಹಣ, 15 ಮೊಬೈಲ್ ಹಾಗೂ 6 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ಕಮಿಷನರೇಟಿನ ವ್ಯಾಪ್ತಿಯಲ್ಲಿ ತಡರಾತ್ರಿ ಹಳೆ ಬಾಜಿ ಮಾರ್ಕೆಟ್ ಮೇಲೆ ಮಟಕಾ ದಾಳಿ;ಒಟ್ಟು 13 ಜನ ಆರೋಪಿಗಳ ದಸ್ತಗೀರ್;ರೂ.17,020 /- ಹಣ,15 ಮೊಬೈಲ್ ಹಾಗೂ 6 ಬೈಕ್ ಜಪ್ತಿ ಮಾಡಲಾಗಿದ್ದು, ಪ್ರಕರಣ …
Read More »ಪಿಯುಸಿ ತರಗತಿ ದಾಖಲಾತಿ ಅವಧಿ ವಿಸ್ತರಣೆ
ಬೆಂಗಳೂರು, ಫೆ.10- ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ಹಾಗೂ ಕಾಲೇಜು ಬದಲಾವಣೆಗೆ ಫೆಬ್ರವರಿ 20ರ ವರೆಗೂ ಕಾಲಾವಕಾಶ ನೀಡಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ದಾಖಲಾತಿ ಹಾಗೂ ಕಾಲೇಜು ಬದಲಾವಣೆ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಪದವಿ ಪೂರ್ವ ಕಾಲೇಜುಗಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿ …
Read More »ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಡ್ ಸಲ್ಲಿಸಿ ಸಿಕ್ಕಿಹಾಕಿಕೊಂಡಿದ್ದಾರೆ ನಟ ಸಲ್ಮಾನ್ ಖಾನ್.
ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಡ್ ಸಲ್ಲಿಸಿ ಸಿಕ್ಕಿಹಾಕಿಕೊಂಡಿದ್ದಾರೆ ನಟ ಸಲ್ಮಾನ್ ಖಾನ್. 1998 ರಲ್ಲಿ ಜೋಧಪುರದಲ್ಲಿ ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 2003 ರಲ್ಲಿ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಆದರೆ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿತ್ತು. ಬಂದೂಕಿನ ಲೈಸೆನ್ಸ್ ಅನ್ನು ಸಲ್ಲಿಸುವಂತೆ ಸಲ್ಮಾನ್ ಖಾನ್ ಗೆ ಜೋಧ್‌ಪುರ ನ್ಯಾಯಾಲಯವು ಸೂಚಿಸಿತ್ತು. ಆದರೆ ಲೈಸೆನ್ಸ್ ಕಳೆದುಹೋಗಿದೆ ಎಂದು ಅಫಿಡವಿಟ್ ಸಲ್ಲಿಸಿದ್ದ ಸಲ್ಮಾನ್ ಖಾನ್, ಬಂದೂಕು ಕಳೆದು …
Read More »ನೇಪಾಳ, ಶ್ರೀಲಂಕಾದಲ್ಲಿ ಪೆಟ್ರೋಲ್ ಅಗ್ಗ, ಭಾರತದಲ್ಲಿ ಏಕೆ ದುಬಾರಿ ಎಂಬ ಪ್ರಶ್ನೆಗೆ ಸಚಿವರ ಉತ್ತರ ಏನು ಗೊತ್ತಾ?
ನವದೆಹಲಿ: ಇಂಧನ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ತೈಲಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ 300 ದಿನಗಳ ಅವಧಿಯಲ್ಲಿ 60 ದಿನ …
Read More »ಯುವತಿಯ ನಿಗೂಢ ಸಾವಿನಲ್ಲಿ ಕೊನೆಯಾಯ್ತು ಲವ್ ಮ್ಯಾರೇಜ್..!
ಶಿವಮೊಗ್ಗ. ಫೆ.10: ಕಳೆದ ವರ್ಷವಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಯುವ ಜೋಡಿಗಳ ಮಧ್ಯೆ ವೈಮನಸ್ಯ ತಲೆದೋರಿ ಯುವತಿಯ ಸಂಶಯಾಸ್ಪದ ಸಾವಿನೊಂದಿಗೆ ಪರ್ಯಾವಸಾನಗೊಂಡಿದೆ. ಆಯನೂರು ನಿವಾಸಿ ಶಂಕರ್ ನಾಯ್ಕ್ ಮಗಳಾದ ಮೋನಿಕಾ 16 ತಿಂಗಳ ಹಿಂದೆ ಕೊನಗವಳ್ಳಿ ಗೋಪಾಲನಾಯ್ಕ್ ಪುತ್ರ ಚಂದನ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇವರಿಬ್ಬರೂ ಗಾಡಿಕೊಪ್ಪದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ಇವರ ದಾಂಪತ್ಯ ಜೀವನ ಸರಿ ಇರಲಿಲ್ಲ.ಮೋನಿಕಾ ತನ್ನ ಅಂತಸ್ಥಿಗೆ ತಕ್ಕಂತೆ ಇಲ್ಲ ಹಾಗೂ ತವರಿನಿಂದ …
Read More »ಸರಕಾರದ ಮಟ್ಟದಲ್ಲಿ ಹೋರಾಟಮಾಡಿ ಅನುದಾನ ತರುತ್ತಿದ್ದೇನೆ : ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕಿರುವ ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿಯನ್ನು ತೆಗೆದುಹಾಕುವುದೇ ನನ್ನ ಸಂಕಲ್ಪ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಬಾಳೇಕುಂದ್ರಿ ಕೆ. ಎಚ್ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಶಾಸಕರ ನಿಧಿಯ (MLA Fund) ವತಿಯಿಂದ 8 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆಯ ಎರಡೂ ಬದಿಗೆ ಕಾಂಕ್ರೀಟ್ ಗಟಾರ್ ನಿರ್ಮಾಣದ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದಿನಿಂದಲೂ ಅಭಿವೃದ್ಧಿ ವಂಚಿತವಾಗಿದೆ. ಬೆಳಗಾವಿ ನಗರದ …
Read More »