ಬೆಂಗಳೂರು,ಫೆ.4- ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರು ನಾಳೆ ತಪ್ಪದೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ. ಘನತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರು, ಆಟೋ, ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ ಚಾಲಕರು ನಾಳೆ ತಮ್ಮ 2ನೆ ಮಸ್ಟರಿಂಗ್ ಕಾರ್ಯ ಪೂರ್ಣಗೊಂಡ ಕೂಡಲೆ ಸ್ಥಳೀಯ ಅರೋಗ್ಯ ಕೇಂದ್ರಗಳಿಗೆ ತೆರಳಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.ಲಸಿಕೆ ಪಡೆದವರಿಗೆ ಅರ್ಧ ದಿನ …
Read More »ರಾಜ್ಯಸಭೆಯಲ್ಲಿ ಮೋದಿ ಕಣ್ಣೀರಿನ ನಾಟಕ : ಶಶಿ ತರೂರ್ ಟೀಕೆ
ನವದೆಹಲಿ, ಫೆ.11- ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆಜಾದ್ ಅವರ ರಾಜ್ಯಸಭೆ ಅವಧಿ ಮುಗಿದಿದ್ದರಿಂದ ಭಾವನಾತ್ಮಕವಾಗಿ ಕಣ್ಣೀರು ಹರಿಸಿದ್ದನ್ನು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಟೀಕಿಸಿದ್ದಾರೆ. ಪ್ರಧಾನಿಯವರು ಬುಧವಾರ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಮೇಲೆ ತೋರಿದ ಭಾವನಾತ್ಮಕ ವಿದಾಯ ಭಾಷಣ ಒಂದು ರೀತಿಯಲ್ಲಿ ಕಲಾತ್ಮಕವಾಗಿ ರಚಿಸಲಾದ …
Read More »ಪೆಟ್ರೋಲ್- ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ವಾಟಾಳ್ ವಿನೂತನ ಪ್ರತಿಭಟನೆ
ಬೆಂಗಳೂರು, ಫೆ.11- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಸಿ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿಂದು ವಿನೂತನ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದರು. ಸಿಲಿಂಡರ್‍ಅನ್ನು ಕತ್ತೆಯ ಮೇಲಿಟ್ಟು ಪ್ರತಿಭಟಿಸುವ ಮೂಲಕ ಬೆಲೆ ಏರಿಕೆಯನ್ನು ಖಂಡಿಸಿದರು. ನಂತರ ಮಾತನಾಡಿದ ಅವರು, ನಿರಂತರವಾಗಿ ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರ ಬದುಕು …
Read More »ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ : ಭತ್ತ, ರಾಗಿ, ತೊಗರಿ, ಶೇಂಗಾ, ಕಡಲೆಗೆ ‘ಬೆಂಬಲ ಬೆಲೆ’ ನಿಗದಿ
ಬೆಂಗಳೂರು : 2020-21ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆಯೊಜನೆಯಡಿಯಲ್ಲಿ ಭತ್ತ, ರಾಗಿ, ಬಿಳಿಜೋಳ, ತೊಗರಿ, ಶೇಂಗಾ ಹಾಗೂ ಕಡೆಲೆ ಖರೀದಿಗೆ, ಇಂದು ನಡೆದಂತ ಸಂಪುಟ ಉಪ ಸಮಿತಿ ಸಭೆಯಲ್ಲಿ ದರ ನಿಗದಿ ಪಡಿಸಲಾಗಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಇಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆಗಳ ಸ್ಥಿರಿಕರಣಕ್ಕಾಗಿ …
Read More »ವಿಶ್ವ ಮಾರುಕಟ್ಟೆಗೆ Mi 11 ಸ್ಮಾರ್ಟ್ ಫೋನ್ ಎಂಟ್ರಿ; ವಿಶೇಷತೆಗಳೇನು?
ನವದೆಹಲಿ: ವಿಶ್ವದ ಸ್ಮಾರ್ಟ್ ಪೋನ್ ,ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಯೋಮಿ ಕಂಪನಿಯು ತನ್ನ Mi 11 ಸರಣಿಯ ಹೊಸ ಸ್ಮಾರ್ಟ್ ಫೋನ್ ಒಂದನ್ನು ವಿಶ್ವದಾದ್ಯಂತ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದು ತನ್ನ ವಿಭಿನ್ನ ಫೀಚರ್ ಗಳ ಮೂಲಕ ಮಾರುಕಟ್ಟೆಯಲ್ಲಿ ದೂಳೆಬ್ಬಿಸುತ್ತಿದೆ. ಗ್ರಾಹಕ ಸ್ನೇಹಿ ಸ್ಮಾರ್ಟ್ ಪೋನ್ ಎಂಬ ಪ್ರಖ್ಯಾತಿಗೆ ಪಾತ್ರವಾಗಿರುವ Mi ಸ್ಮಾರ್ಟ್ ಪೋನ್ ಕಳೆದ ವರ್ಷದ ಕೊನೆಯಲ್ಲಿ ಈ ಹೊಸ ಆವೃತ್ತಿಯ Mi 11 ಮೊಬೈಲ್ ಪೋನ್ …
Read More »ಕುರುಬ ಸಮುದಾಯವನ್ನು ಒಡೆಯುವುದೇ ಬಿಜೆಪಿಯವರ ಮುಖ್ಯ ಉದ್ದೇಶ: ಸಿದ್ದರಾಮಯ್ಯ
ಹುಬ್ಬಳ್ಳಿ: ಕುರುಬ ಸಮುದಾಯವನ್ನು ಒಡೆಯುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯವರ ಮುಖ್ಯ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕುರುಬ ಸಮುದಾಯದ ಮೀಸಲಾತಿ ಹೋರಾಟದ ವಿಚಾರವಾಗಿ ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕುರುಬರ ಮೀಸಲಾತಿ ಹೋರಾಟದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕುರುಬ ಸಮುದಾಯವನ್ನು ಒಡೆಯುವುದೇ ಅವರ ಮುಖ್ಯ ಉದ್ದೇಶ’ ಎಂದು ಹರಿಹಾಯ್ದಿದ್ದಾರೆ. ‘ಬಿಜೆಪಿ ಮುಖಂಡ ಈಶ್ವರಪ್ಪನವರು ಹೋರಾಟ ಮಾಡುತ್ತಿರೋದು ಯಾರ ವಿರುದ್ಧ? ತಮ್ಮದೇ ಸರ್ಕಾರದ …
Read More »ಎಲ್‌ಐಸಿ ಐಪಿಒದೊಡ್ಡ ಸಂಚಲನಎಲ್ಲಾ ಐಪಿಒಗಳಿಗಿಂತ ದೊಡ್ಡದಾಗಿ ಹೊರಹೊಮ್ಮುವ ಸಾಧ್ಯತೆ
ನವದೆಹಲಿ, ಫೆಬ್ರವರಿ 10: ಎಲ್‌ಐಸಿ ಐಪಿಒ ಈಗಾಗಲೇ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಏಕೆಂದರೆ ಇದುವರೆಗಿನ ಎಲ್ಲಾ ಐಪಿಒಗಳಿಗಿಂತ ದೊಡ್ಡದಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಇದರ ಜೊತೆಗೆ ಎಲ್‌ಐಸಿ ಐಪಿಒಗಿಂತ ಮುಂಚೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ವಿಮಾ ಪಾಲಿಸಿಗಳನ್ನು ಹೊಂದಿರುವವರಿಗೆ ಗುಡ್‌ನ್ಯೂಸ್ ಇಲ್ಲಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಎಲ್‌ಐಸಿ ಐಪಿಒ ವಿತರಣೆಯ ಗಾತ್ರದ ಶೇಕಡಾ 10 ರಷ್ಟು ಎಲ್‌ಐಸಿ ಪಾಲಿಸಿದಾರರಿಗೆ ಮೀಸಲಿಡುತ್ತಾರೆ ಎಂಬುದನ್ನು ಖಚಿತಪಡಿಸಿದ್ದಾರೆ. …
Read More »5 ತಿಂಗಳಿನ ಟೀರಾಗೆ ಬೇಕಿರುವ ‘ಜೀವೌಷಧಿ’ ಮೇಲಿನ 6 ಕೋಟಿ ರೂ. ಜಿಎಸ್‍ಟಿ ಮನ್ನಾ ಮಾಡಿದ ಪಿಎಂ ಮೋದಿ!
ಮುಂಬೈ: ಜೀವನ್ಮರಣ ಹೋರಾಟ ನಡೆಸುತ್ತಿರುವ ಐದು ತಿಂಗಳ ಟೀರಾ ಕಾಮತ್‌ಳ ಜೀವ ಉಳಿಸುವ ಔಷಧಿ ಆಮದಿನ ಮೇಲಿನ ತೆರಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ನಾ ಮಾಡಿದ್ದು ಈ ನಿರ್ಧಾರ ಮಗುವಿನ ಪೋಷಕರಿಗೆ ಹೊಸ ಆಶಾಕಿರಣ ಮೂಡಿಸಿದೆ. ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಟೀರಾ ಕಾಮತ್ ಗೆ 16 ಕೋಟಿ ರೂ. ಮೌಲ್ಯದ ಔಷಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು ಇದರ ಮೇಲಿನ 6 ಕೋಟಿ ರೂ.ಗಳ ಜಿಎಸ್ಟಿ ಮೊತ್ತವನ್ನು ಪಿಎಂ ಮೋದಿ …
Read More »ಮದ್ಯಪ್ರಿಯರಿಗೆ ಮತ್ತೆ ಮತ್ತೆ ಆಘಾತ: ಬೆಲೆಯಲ್ಲಿ ಭಾರೀ ಹೆಚ್ಚಳ?
ಬೆಂಗಳೂರು, ಫೆ 11: ಕಳೆದ ಕೇಂದ್ರ ಬಜೆಟ್ ನಲ್ಲಿ ನರೇಂದ್ರ ಮೋದಿ ಸರಕಾರ ಮದ್ಯಪ್ರಿಯರಿಗೆ ಶಾಕ್ ನೀಡಿತ್ತು, ಈಗ, ರಾಜ್ಯ ಬಜೆಟ್ ಸರದಿ. ಮೂಲಗಳ ಪ್ರಕಾರ, ಮತ್ತೆ ಮದ್ಯದ ಬೆಲೆ ಹೆಚ್ಚಾಗಲಿದೆ. ದಿನೋಪಯೋಗಿ ವಸ್ತುಗಳ ಬೆಲೆಯನ್ನು ಹೆಚ್ಚಿಸಿದರೆ ಸಾರ್ವಜನಿಕರು ಸಿಟ್ಟಾಗುವುದರಿಂದ ಸರಕಾರ ಅವುಗಳ ಬೆಲೆಯನ್ನು ಹೆಚ್ಚಿಸುವ ಮುನ್ನ ಹಲವು ಬಾರಿ ಆಲೋಚಿಸುತ್ತದೆ. ಆದರೆ, ಮದ್ಯದ ಬೆಲೆಯನ್ನು ಹೆಚ್ಚಿಸಿದರೆ ಬಹಿರಂಗವಾಗಿ ಯಾರೂ ದೂರುವಂತಿಲ್ಲ. ಇದರ ಲಾಭವನ್ನೇ ಪಡೆದುಕೊಳ್ಳುವ ಸರಕಾರ ಮದ್ಯದ ಮೇಲೆ …
Read More »ಬಜೆಟ್ ಪೂರ್ವಭಾವಿ ಸಭೆ,ಜನಾರ್ದನ ಹೋಟೆಲ್ನಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ಹಾಗೂ ಬಿಸಿ ಬಿಸಿ ಕಾಫಿ
ಬೆಂಗಳೂರು: ಮುಂದಿನ ತಿಂಗಳು ಬಜೆಟ್ ಮಂಡಿಸಲು ಸಿದ್ಧವಾಗಿರುವ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಬಜೆಟ್ ಪೂರ್ವ ತಯಾರಿ ಸಭೆಗೂ ಮುನ್ನ ನಗರದ ಶಿವಾನಂದ ಸರ್ಕಲ್ ನಲ್ಲಿರುವ ಜನಾರ್ದನ ಹೋಟೆಲ್ನಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ಹಾಗೂ ಬಿಸಿ ಬಿಸಿ ಕಾಫಿ ಸವಿದರು. ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಕೆಂಗಲ್ ಹನುಮಂತಯ್ಯ ಜನ್ಮದಿನಾಚರಣೆ ಪ್ರಯುಕ್ತ ಮಾಲಾರ್ಪಣೆ ನೆರವೇರಿಸಿದ ನಂತರ ಬಜೆಟ್ ಪೂರ್ವ ಸಿದ್ಧತಾ ಸಭೆ ನಡೆಸಲು ಶಕ್ತಿಭವನಕ್ಕೆ …
Read More »